ಗಣರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ವೇಷ ಭೂಷಣ ಧರಿಸಿ ಜನಾಕರ್ಷಕ  ಪಥಸಂಚಲನ

ಗಣರಾಜ್ಯೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಂದ ಸ್ವಾಮಿ ವಿವೇಕಾನಂದರ ವೇಷ ಭೂಷಣ ಧರಿಸಿ ಜನಾಕರ್ಷಕ  ಪಥಸಂಚಲನ

ರಿಪ್ಪನ್‌ಪೇಟೆ | 76 ನೇ ಗಣರಾಜ್ಯೋತ್ಸವ ಮತ್ತು ಸ್ವಾಮಿವಿವೇಕಾನಂದರ ಜಯಂತೋತ್ಸವ ಕಾರ್ಯಕ್ರಮದ ಅಂಗವಾಗಿ ಕೋಡೂರು ಬ್ಲಾಸಂ ಅಕಾಡಮಿ ಶಾಲಾ ವಿದ್ಯಾರ್ಥಿಗಳ ವೇಷ ಭೂಷಣ ಪಥಸಂಚಲನ ಸಾರ್ವಜನಿಕರನ್ನು ಅಕರ್ಷಿಸಿತು.

ವೀಡಿಯೋ ಇಲ್ಲಿ ವೀಕ್ಷಿಸಿ👆👆👆

ಕೋಡೂರು ಇತಿಹಾಸ ಪ್ರಸಿದ್ದ ಶ್ರೀಶಂಕರೇಶ್ವರ ದೇವಸ್ಥಾನದಿಂದ  ಸ್ವಾಮಿ ವಿವೇಕಾನಂದರ ವೇಷ ಭೂಷಣದೊಂದಿಗೆ ಮಕ್ಕಳ ಪಥ ಸಂಚಲನಕ್ಕೆ ತಾಲ್ಲೂಕ್ ಪಂಚಾಯ್ತಿ ಮಾಜಿ ಸದಸ್ಯ ಹಾಗೂ ಬ್ಲಾಸಂ ಅಕಾಡಮಿ ಆಧ್ಯಕ್ಷ ಚಂದ್ರುಮೌಳಿಗೌಡರು ಚಾಲನೆ ನೀಡಿ ಮಾತನಾಡಿ ದೇಶದ ಆಖಂಡತೆಯನ್ನು ಹೊರದೇಶದಲ್ಲಿ ಪ್ರಚರಪಡಿಸುವ ಮೂಲಕ ವಿಶ್ವನಾಯಕರಾಗಿರುವ ಸ್ವಾಮಿ ವಿವೇಕಾನಂದರ ಆದರ್ಶಗಳು ಇಂದಿನ ವಿದ್ಯಾರ್ಥಿಗಳಲ್ಲಿ ಬೆಳಸುವ ಕೆಲಸ ಮಾಡುವುದರೊಂದಿಗೆ ಜನಜಾಗೃತಗೊಳಿಸುವ ನಿಟ್ಟಿನಲ್ಲಿ  ಸಣ್ಣದೊಂದು ಪ್ರಯತ್ನ ನಡೆಸುತ್ತಿರುವುದಾಗಿ ಹೇಳಿದರು.

ಶಾಲೆಯ ಮುಖ್ಯೋಪಾಧ್ಯಾಯ ಸುಧಾಕರ್ ಮಾತನಾಡಿ ಸ್ವಾಮಿ ವಿವೇಕಾನಂದರು ಆದರ್ಶ ಪುರುಷರು. ಅವರನ್ನ ಅನುಕರಣೆ ಮಾಡಿದ್ರೆ ಜೀವನದಲ್ಲಿ ಯಶಸ್ಸು ಸಿಗುತ್ತೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಈ ಹಿನ್ನಲೆ ಸರ್ಕಾರವೇ ಅವರ ಜನ್ಮದಿನವನ್ನ ಯುವ ದಿನವನ್ನಾಗಿ ಘೋಷಣೆ ಕೂಡ ಮಾಡಿದೆ.ಸ್ವಾಮಿ ವಿವೇಕಾನಂದರ ಬೋಧನೆಗಳು ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ, ಅದರಲ್ಲೂ ವಿಶೇಷವಾಗಿ ಯುವ ಜನತೆಗೆ ಸ್ಪೂರ್ತಿ ನೀಡುತ್ತಲೇ ಇದೆ. ಯುವ ಪೀಳಿಗೆಯ ವೈಯಕ್ತಿಕ ಬೆಳವಣಿಗೆ, ಸ್ವಯಂ ಸುಧಾರಣೆ ಹಾಗೂ ಸಾಮಾಜಿಕ ಪ್ರಗತಿಯತ್ತ ಶ್ರಮಿಸಲು ಪ್ರೋತ್ಸಾಹ ಹಾಗೂ ಯುವಕರ ಏಳಿಗಾಗಿ ಸ್ವಾಮಿ ವಿವೇಕಾನಂದರ ಸ್ಪೂರ್ತಿದಾಯಕ ಮಾತುಗಳ ಇಂದಿಗೂ ಪ್ರಸ್ತುತ ಎನಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಸಂ ಅಕಾಡಮಿ ಟ್ರಸ್ಟಿಗಳಾದ ಸುರೇಶ್,ದಿವಾಕರ ಶೆಟ್ಟಿ,ಶಿಕ್ಷಕರಾದ  ಪ್ರಕಾಶ, ಕೋಮಲ, ನಾಗಶ್ರೀ, ದೀಪಾ, ಅಶ್ವಿನಿ, ಗೀತಾ,ಅಸ್ಮಾ,ಅನಿಷಾ,ಇನ್ನಿತರ ಹಲವರು ಹಾಜರಿದ್ದರು.

ವಿದ್ಯಾರ್ಥಿಗಳ ಪಥಸಂಚಲನವೂ ಕೋಡೂರು ಮುಖ್ಯ ರಸ್ತೆಯಲ್ಲಿ ಸಂಚರಿಸಿ ಜನಾಕರ್ಷಣೆಗೊಂಡಿತು.

Leave a Reply

Your email address will not be published. Required fields are marked *