w
Headlines
Home » ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ ವಿವಾಹ – ಕುವೆಂಪು ಆಶಯಕ್ಕೆ ಅಪಮಾನ

ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ ವಿವಾಹ – ಕುವೆಂಪು ಆಶಯಕ್ಕೆ ಅಪಮಾನ

GridArt 20250125 172439896.jpg

ಕುಪ್ಪಳಿಯಲ್ಲಿ ಅದ್ದೂರಿ ಮಂತ್ರ ಮಾಂಗಲ್ಯ ವಿವಾಹ – ಕುವೆಂಪು ಆಶಯಕ್ಕೆ ಅಪಮಾನ

ತೀರ್ಥಹಳ್ಳಿ ತಾಲ್ಲೂಕಿನ ಕುಪ್ಪಳಿಯಲ್ಲಿ ಶುಕ್ರವಾರ ಸಂಜೆ ಗೋದೂಳಿ ಲಗ್ನದಲ್ಲಿ ಅದ್ದೂರಿ ಮಂತ್ರ ಮಾಂಗಲ್ಯವೊಂದು ಜರುಗಿದೆ. ಕುವೆಂಪು ಸದಾಶಯದ ಮಂತ್ರ ಮಾಂಗಲ್ಯ ಎಲ್ಲಾ ರೀತಿಯ ಸರಳ ನಿಯಮಗಳನ್ನು ಗಾಳಿಗೆ ತೂರಿ ಮದುವೆ ಸಮಾರಂಭವೊಂದು ಹೈಫೈ ರೂಪದಲ್ಲಿ ನಡೆದಿದೆ.

ಹೇಮಾಂಗಣದ ಮುಂಭಾಗದಲ್ಲಿ ತಳಿರುತೋರಣಗಳಿಂದ ಸಿಂಗರಿಸಿ, ಫಲ, ಪುಷ್ಪಗಳನ್ನು ಬಳಸಿಕೊಂಡು ವಿಭಿನ್ನವಾಗಿ ಮಂತ್ರ ಮಾಂಗಲ್ಯ ವಿವಾಹ ಮಾಡಲಾಗಿದೆ.

ಕುವೆಂಪು ಸರಳ ನಿಯಮಗಳಿಂದ ತಮ್ಮ ಪುತ್ರ ತೇಜಸ್ವಿ ವಿವಾಹವನ್ನು ಮಾಡಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಬಿಡುವಿದ್ದ ಸಂದರ್ಭ ವಧುವರರ ಸತ್ಕಾರ ಸ್ವೀಕರಿಸಿ ಎನ್ನುವ ಒಳಾರ್ಥದಲ್ಲಿ ವಿವಾಹವನ್ನು ಸರಳೀಕರಣಗೊಳಿಸಿದ್ದರು. ಆದರೆ ಅದೀಗ ಮುಂದುವರೆದು ಶ್ರೀಮಂತ ಕುಟುಂಬಗಳ ಸ್ವತ್ತಾಗಿದ್ದು ಸರಳತೆಯ ವಿವಾಹವನ್ನು ವೈಭವೀಕರಿಸಿ ಜಗತ್ತಿಗೆ ಕುವೆಂಪು ಸಂದೇಶ ಸಾರುವ ಹಂತಕ್ಕೆ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ತಮ್ಮ ಹೃದಯ ವೈಶಾಲ್ಯತೆಯನ್ನು ತೋರಿಸಿಕೊಳ್ಳುತ್ತಿದೆ‌.

ಹೇಮಾಂಗಣದ ಮುಂಭಾಗದಲ್ಲಿ ಬಾಳೆಯ ಗಿಡಗಳನ್ನು ಬಳಸಿಕೊಂಡು ಸಿಗರಿಸಿದರೆ. ವೇದಿಕೆಯಾಗಿ ಕಮಲದ ಹೂವುಗಳನ್ನು ಬಳಕೆ ಮಾಡಿಕೊಂಡು ವಧು-ವರರ ಕೈಯಿಂದ ಸರಳತೆಯ ಪಠ್ಯವನ್ನು ಚಾಚು ತಪ್ಪದೆ ಹೇಳಿಸಿದರೆ. ಮುಂಭಾಗದ ಮರಗಳಿಗೆ ವಿದ್ಯುತ್ ದೀಪಾಲಂಕಾರಗಳನ್ನು ಮಾಡಿ ಕುಪ್ಪಳಿಯ ಶಾಂತ ನಿಸರ್ಗದ ಪರಿಚಯ ಮಾಡಿಸಿಕೊಟ್ಟರು. ಊಟಕ್ಕೆ ರೌಂಡ್ ಟೇಬಲ್ ಅಳವಡಿಸಿ ಅದಕ್ಕೆ ಶ್ವೇತ ವಸ್ತ್ರಗಳನ್ನು ಅಲಂಕರಿಸಿ ಯಾರು ಊಟವನ್ನು ಕಿಂಚಿತ್ತೂ ಹಾಳು ಮಾಡದಂತೆ ಜಾಗ್ರತೆವಹಿಸಿದರು. ಊಟಕ್ಕೂ ಮುನ್ನ ಆಯಕಟ್ಟಿನ ಜಾಗದಲ್ಲಿ ಬೆಂಗಳೂರಿನಿಂದ ಬಂದ ಅತಿಥಿಗಳಿಗೆ ಸುರಪಾನದ ಹಿತ ನೀಡಿದರು. ಮೂರ್ನಾಲ್ಕು ರೆಸಾರ್ಟ್ ಗಳಿಗೆ ಈ ಮದುವೆ ದೊಡ್ಡ ಲಾಭ ತಂದುಕೊಟ್ಟಿದೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.