ಮಟನ್ ನಲ್ಲಿ ಮೂಳೆ ಹಾಕಬೇಡ ಎಂದಿದ್ದಕ್ಕೆ ಗ್ರಾಹಕನ ಮೇಲೆ ಅಪ್ರಾಪ್ತ ಯುವಕನಿಂದ ಮಾರಣಾಂತಿಕ ಹಲ್ಲೆ | Crime News
ಶಿವಮೊಗ್ಗ : ಮೂಳೆ ಬದಲು ಮಟನ್ ಹೆಚ್ಚಿಗೆ ಹಾಕುವಂತೆ ಕೇಳಿದ್ದಕ್ಕೆ ಅಪ್ರಾಪ್ತ ಯುವಕ ಗ್ರಾಹಕನ ಮೇಲೆ ಮಾರಣಾಂತಿಕವಾಗಿ ದಾಳಿ ನಡೆಸಿರುವ ಘಟನೆ ನಗರದಲ್ಲಿ ಸಂಭವಿಸಿದೆ.
ಗಾಡಿಕೊಪ್ಪ ನಿವಾಸಿ ಮಲ್ಲೇಶ್ (40) ಗಂಭೀರವಾಗಿ ಗಾಯಗೊಂಡಿದ್ದಾರೆ.
ಮಲ್ಲೇಶಪ್ಪ ಮಟನ್ ಖರೀಸಿದ್ದು ಮೂಳೆಯನ್ನು ಹೆಚ್ಚಾಗಿ ಹಾಕಲಾಗಿತ್ತು. ಹಾಗಾಗಿ ಅಪ್ರಾಪ್ತನ ತಂದೆಯನ್ನು ಕರೆದು ಮಲ್ಲೇಶಪ್ಪ ದೂರಿದ್ದರು. ಆಗ ಅಪ್ರಾಪ್ತನು ಮಲ್ಲೇಶಪ್ಪನ ಮೇಲೆ ಹರಿತವಾದ ವಸ್ತುವಿನಿಂದ ಏಕಾಏಕಿ ಹಲ್ಲೆ ನಡೆಸಿದ್ದಾನೆ.
ಅಪ್ರಾಪ್ತನ ತಂದೆ ಮಾಲೀಕತ್ವದ ಮಟನ್ ಅಂಗಡಿಯಲ್ಲಿ ಘಟನೆ ಸಂಭವಿಸಿದೆ. ಹಲ್ಲೆಗೈದ ಅಪ್ರಾಪ್ತ ಯುವಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ವಾಟ್ಸಪ್ ಮೂಲಕ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.