ಖಾಸಗಿ ವಸತಿ ಗೃಹವೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಹಣಗೆರೆಕಟ್ಟೆ ಗ್ರಾಮದಲ್ಲಿ ನಡೆದಿದೆ.
ಪ್ರಸಿದ್ಧ ಹಜರತ್ ಸೈಯದ್ ಸಾದತ್ ಭೂತರಾಯ ಚೌಡೇಶ್ವರಿ ದೇವಾಲಯದ ಹಿಂಭಾಗದ ವಸತಿಗೃಹವೊಂದರಲ್ಲಿ 30 ವರ್ಷದ ಮಹಿಳೆಯ ಶವವೊಂದು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಲಾಡ್ಜ್ ನಂತೆ ಇರುವ ಮನೆಯಲ್ಲಿ 10 ರೂಮ್ ಗಳಿದ್ದು ಅದರಲ್ಲಿ ಸೋಮವಾರ ರಾತ್ರಿ ಬೈಕ್ ನಲ್ಲಿ ಬಂದಿದ್ದ ಯುವಕ ಹಾಗೂ ಯುವತಿ ಬಂದು ಕೇಳಿದಾಗ ಬಾಡಿಗೆಗೆ ರೂಮನ್ನು ನೀಡಲಾಗಿದೆ. ಎಂದು ಕೆಲಸದವರು ತಿಳಿಸಿದ್ದಾರೆ.
ವಾಪಾಸ್ ಆಗುವಾಗ ಆ ವ್ಯಕ್ತಿ ಮಾತ್ರ ಹೋಗಿದ್ದಾನೆ. ಬುಧವಾರ ಸಂಜೆ ಕೆಲಸದವರು ನೋಡುವಾಗ ಹತ್ಯೆಯಾಗಿರುವುದು ತಿಳಿದು ಬಂದಿದೆ. ರೂಮನ್ನು ನೀಡುವಾಗ ಯಾವುದೇ ರೀತಿ ಸಂಬಂಧಪಟ್ಟ ದಾಖಲೆ ತೆಗೆದುಕೊಂಡಿಲ್ಲ ಎಂದು ಪೋಲೀಸರ ಬಳಿ ಕೆಲಸದವರು ಹೇಳುತ್ತಿದ್ದು
ತೀರ್ಥಹಳ್ಳಿ ಪೊಲೀಸರು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಫಾರೆನ್ಸಿಕ್ ತಜ್ಞರು ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನಷ್ಟು ಮಾಹಿತಿ ತಿಳಿಯಬೇಕಿದೆ
ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.