ತಂಗಿಯೊಂದಿಗೆ ನಿಶ್ಚಿತಾರ್ಥವಾಗಿದ್ದ ಯುವಕನಿಗೆ ಚೂರಿ ಇರಿದ ಅಣ್ಣ | Crime News
ತಂಗಿಯನ್ನು ಪ್ರೀತಿಸುತಿದ್ದ ಯುವಕನಿಗೆ ಚಾಕುವಿನಿಂದ ಇರಿದಿರುವ ಘಟನೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಶಿರಾಳಕೊಪ್ಪ ನಿವಾಸಿಗಳಾದ ಯುವಕ ಯುವತಿ ಹಲವು ಸಮಯದಿಂದ ಪರಸ್ಪರ ಪ್ರೀತಿಸುತ್ತಿದ್ದರು.ಈ ಸಂಬಂಧ ನಿಶ್ಚಿತಾರ್ಥವೂ ನಡೆದಿತ್ತು ಆದರೆ ಯುವತಿಯ ಸಹೋದರನಿಗೆ ಆಕೆ ಪ್ರೀತಿಸಿದ ಯುವಕನನ್ನು ಮದುವೆಯಾಗುವುದು ಇಷ್ಟವಿರಲಿಲ್ಲ. ಈ ಕಾರಣಕ್ಕೆ ಹಲವು ಬಾರಿ ವಿರೋದಿಸಿದ್ದನು.
ಇದೇ ಕಾರಣಕ್ಕೆ ಗುರುವಾರ ರಾತ್ರಿ ಯುವಕನಿಗೆ ಯುವತಿಯ ಸಹೋದರನೇ ಚಾಕು ಇರಿದು ಪರಾರಿಯಾಗಿದ್ದಾನೆ ಎನ್ನಲಾಗಿದೆ.ಈ ಸಂಬಂಧ ಕೇಸ್ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈ ಸಂಬಂಧ ಶಿರಾಳಕೊಪ್ಪ ಪೊಲೀಸ್ ಸ್ಟೇಷನ್ ನಲ್ಲಿ ಕೇಸ್ ಸಹ ದಾಖಲಾಗಿದೆ.