ಗೋಸಾಗಾಟ ಮಾಡುತಿದ್ದವರ ಮೇಲೆ ಹಲ್ಲೆ – 25 ಜನರ ಮೇಲೆ ಕೊಲೆಯತ್ನ ಕೇಸ್ ದಾಖಲು
ತೀರ್ಥಹಳ್ಳಿ: ಪಟ್ಟಣದಲ್ಲಿ ಬುಧವಾರ ಸಂಜೆ ಅಕ್ರಮವಾಗಿ ಗೋ ಸಾಗಾಟ ನಡೆಸಿದ್ದಾರೆ ಎಂಬ ಕಾರಣಕ್ಕೆ ನಡೆದ ನೈತಿಕ ಪೊಲೀಸ್ ಗಿರಿಯಂತಹ ಘಟನೆಯೊಂದರ ಸಂಬಂಧ ಸುಮಾರು 25 ಮಂದಿ ವಿರುದ್ಧ ಕೇಸ್ ದಾಖಲಾಗಿದೆ.
ಪಟ್ಟಣದ ಸಮೀಪದ ಕುರುವಳ್ಳಿಯ ಪುತ್ತಿಗೆ ಮಠದ ರಸ್ತೆಯಲ್ಲಿ ಅಶೋಕ ಲೈಲಾಂಡ್ ಗಾಡಿಯೊಂದನ್ನ ಅಡ್ಡಗಟ್ಟಿ ಅದರಲ್ಲಿದ್ದ ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿತ್ತು. ದನಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂಬ ಆರೋಪದ ಅಡಿಯಲ್ಲಿ ಗಾಡಿಯನ್ನು ಅಡ್ಡಗಟ್ಟಿ ಅದರಲ್ಲಿದ್ದವರ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರಲಾಗಿದೆ.
ತೀವ್ರ ಹಲ್ಲೆಗೊಳಗಾದ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಒಬ್ಬರಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ.
ದೂರುದಾರರು ಸಲ್ಲಿಸಿರುವ ದೂರಿನ ಪ್ರಕಾರ ಸ್ಥಳೀಯ ನಿವಾಸಿಯೊಬ್ಬರ ಬಳಿ ಆಕಳುಗಳನ್ನ ಸಾಕಲು ಹಾಗೂ ಅದರ ಸಗಣಿಯಿಂದ ವ್ಯಾಪಾರ ಮಾಡುವ ಸಲುವಾಗಿ 8 ದನಗಳನ್ನ ಖರೀದಿಸಿ ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. ಈ ವೇಳೆ 25 ಕ್ಕೂ ಹೆಚ್ಚು ಮಂದಿ ಪುತ್ತಿಗೆ ಮಠದ ರಸ್ತೆಯಲ್ಲಿ ಲೈಲ್ಯಾಂಡ್ ಗಾಡಿಯನ್ನು ಅಡ್ಡಗಟ್ಟಿ ಹಲ್ಲೆ ಮಾಡಿದ್ದಾರೆ ಎಂದು ದೂರಲಾಗಿದೆ. ಇದರ ದೃಶ್ಯಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಇನ್ನೂ ಇಬ್ಬರು ಗಾಯಾಳುಗಳ ಪೈಕಿ ಓರ್ವರ ಹೇಳಿಕೆ ಆಧರಿಸಿ 25 ಕ್ಕೂ ಹೆಚ್ಚು ಮಂದಿ ವಿರುದ್ದ ತೀರ್ಥಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ಸಾಲುದ್ದ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ. ವ್ಯಕ್ತಿಯನ್ನ ಅಕ್ರಮವಾಗಿ ಬಂಧನದಲ್ಲಿ ಇರಿಸುವುದು, ದುರ್ವರ್ತನೆ ತೋರಿ ವ್ಯಕ್ತು ನುಕ್ಸಾನು ಮಾಡುವುದು, ಅಪರಾಧ ಮಾಡುದ ಉದ್ದೇಶದಿಂದಲೇ ಕೃತ್ಯವೆಸುಗುವುದು, ಉದ್ದೇಶಪೂರ್ವಕ ನಿಂದನೆ ಹಾಗೂ ಶಾಂತಿಭಂಗ, ಕಾನೂನ ಬಾಹಿರವಾಗಿ ಜಮಾವಣೆ ಗೊಳ್ಳುವುದು, ಕಾನೂನು ಬಾಹಿರವೊಂದು ಗೊತ್ತಿದ್ದು, ಮಾರಾಕಾಸ್ತ್ರಗಳೊಂದಿಗೆ ಜಮಾವಣೆ ಗೊಂಡು ಗಲಭೆ ಸೃಷ್ಟಿಸುವುದು, ಕೊಲೆಗೆ ಯತ್ನಿಸುವುದು, ಉದ್ದೇಶಪೂರ್ವಕವಾಗಿ ಮಾರಕಾಸ್ತ್ರದಿಂದ ಹಲ್ಲೆ ನಡೆಸುವುದು ಹೀಗೆ ಮೇಲ್ಕಂಡ ಐಪಿಸಿ ಸೆಕ್ಷನ್ಗಳ ಅಡಿಯಲ್ಲಿ ಕೇಸ್ ದಾಖಲಾಗಿದೆ.
ಇಬ್ಬರು ಗಾಯಾಳುಗಳ ಪೈಕಿ ಓರ್ವರ ಹೇಳಿಕೆ ಆಧರಿಸಿ 25 ಕ್ಕೂ ಹೆಚ್ಚು ಮಂದಿ ವಿರುದ್ಧ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಅದರಲ್ಲಿ ಈಗಾಗಲೇ 7 ಮಂದಿಯನ್ನು ಬಂಧಿಸಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ. ತೀರ್ಥಹಳ್ಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.