ವಿಷ ಸೇವಿಸಿ ಯುವಕ ಆತ್ಮಹತ್ಯೆ
ರಿಪ್ಪನ್‌ಪೇಟೆ : ಪಟ್ಟಣದ ಸಮೀಪದ ಮೂಗೂಡ್ತಿ ಗ್ರಾಮದ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ನಡೆದಿದೆ.
ಮೂಗೂಡ್ತಿ ಗ್ರಾಮದ ನಿವಾಸಿ ಕೀರ್ತಿ (22) ಮೃತಪಟ್ಟ ಯುವಕನಾಗಿದ್ದು ಈತನು ಬೆಂಗಳೂರಿನಲ್ಲಿ ಕ್ಯಾಟರಿಂಗ್ ವೃತ್ತ್ತಿ ಮಾಡಿಕೊಂಡಿದ್ದನು.
ಗುರುವಾರ ಸಂಜೆ ಬೆಂಗಳೂರಿನಿಂದ ಸ್ವಗ್ರಾಮ ಮೂಗೂಡ್ತಿಗೆ ಬಂದು ತನ್ನ ಅಣ್ಣನಿಗೆ ಮೊಬೈಲ್ ಮೂಲಕ ಕರೆ ಮಾಡಿ ತಾನು ಆತ್ಮಹತ್ಯೆ ಮಾಡಿಕೊಳ್ಳುತಿದ್ದೇನೆ ಎಂದು ಸ್ವತೋಟಕ್ಕೆ ತೆರಳಿ ವಿಷ ಸೇವಿಸಿದ್ದಾನೆ.ಗಾಬರಿಗೊಂಡ ಅಣ್ಣ ತಮ್ಮನಿಗಾಗಿ ಹುಡುಕಾಟ ಪ್ರಾರಂಭಿಸಿದ್ದಾನೆ.
ಕೆಲಸಮಯದ ನಂತರ ಆತನಿಗೆ ಅಣ್ಣನಿಗೆ ಕರೆ ಮಾಡಿ ತೋಟದಲ್ಲಿ ವಿಷ ಸೇವಿಸಿರುವ ಮಾಹಿತಿ ನೀಡಿದ್ದಾನೆ ತಕ್ಷಣ ತೋಟಕ್ಕೆ ತೆರಳಿ ಆತನನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಗೆ ದಾಖಲಿಸಿ ಅಲ್ಲಿಂದ ಮಣಿಪಾಲ್ ಗೆ ಕರೆದೊಯ್ದು ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಇಂದು ಸಂಜೆ ಚಿಕಿತ್ಸೆ ಫಲಿಸದೇ ಕೀರ್ತಿ ಮೃತಪಟ್ಟಿದ್ದಾನೆ.
ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.