Hosanagara | ನಾಗೋಡಿ ಚೆಕ್ ಪೋಸ್ಟ್ ನಲ್ಲಿ ಲಕ್ಷಾಂತರ ರೂ ಮೌಲ್ಯದ ಅಕ್ರಮ ಮದ್ಯ,ತಂಬಾಕು ಚೀಲ ನಗದು ವಶ
ಹೊಸನಗರ : ಶಿವಮೊಗ್ಗ ಲೋಕಸಭಾ ಮತ ಕ್ಷೇತ್ರಗಳ ವ್ಯಾಪ್ತಿಯ ಹೊಸನಗರ ತಾಲೂಕಿನ ನಾಗೋಡಿ ಚೆಕ್ ಪೋಸ್ಟ್ ಗಳಲ್ಲಿ ಖಾಸಗಿ ಬಸ್ ದುರ್ಗಶಕ್ತಿ ಕುಂದಾಪುರ ದಿಂದ ಬೆಂಗಳುರಿಗೆ ತೆರಳುವ ಬಸ್ ನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರೂ. 384000 ಮೌಲ್ಯದ ತಂಬಾಕಿನ ಚೀಲದ ಬ್ಯಾಗ್ ಗಳು ಸೇರಿದಂತೆ 8,010 ಲೀಟರ್ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.
ಹೊಸನಗರ ಸರ್ಕಲ್ ಇನ್ಸ್ ಪೆಕ್ಟರ್ ಜಿ.ಎಸ್ ಹೆಬ್ಬಾಳ್ ನಗರ ಠಾಣೆ ಪಿ ಎಸ್ ಐ ರಮೇಶ್ ನೇತೃತ್ವದ ತಂಡ ದಾಳಿ ನಡೆದಿದ್ದು ಸುಮಾರು ರೂ. 16040 ಮೊತ್ತದ 47.38 ಲೀ ಮದ್ಯ ಹಾಗೂ ಸೇರಿ ಒಟ್ಟು ರೂ.19167 ಮೌಲ್ಯದ 55.39 ಲೀಟರ್ ಮದ್ಯವನ್ನು ಅಕ್ರಮವಾಗಿ ಸಾಗಿಸಲಾಗುತ್ತಿದ್ದ ರೂ.2,60,000 ಹಣವನ್ನು ವಶಪಡಿಸಿಕೊಂಡ ಪ್ರಕರಣ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪಾಲ್ಗೊಂಡಿದ್ದರು.