ಯುಗಲ ಮುನಿಶ್ರೀಗಳ ಪಾದಾರ್ಪಣೆ, ಹೊಂಬುಜ ವಾರ್ಷಿಕ ರಥೋತ್ಸವ ಪೂರ್ವ ಧ್ವಜಾರೋಹಣ
ಅತಿಶಯ ಶ್ರೀಕ್ಷೇತ್ರ ಹೊಂಬುಜ ಭಗವಾನ ಶ್ರೀ ಪಾರ್ಶ್ವನಾಥ ಸ್ವಾಮಿ, ಜಗನ್ಮಾತೆ ಶ್ರೀ ಪದ್ಮಾವತಿ ದೇವಿ ದರ್ಶನಕ್ಕಾಗಿ ಮುನಿಶ್ರೀ 108 ಅಮೋಘಕೀರ್ತಿ ಮಹಾರಾಜರು ಹಾಗೂ ಮುನಿಶ್ರೀ 108 ಅಮರಕೀರ್ತಿ ಮಹಾರಾಜರು ಪಾದಾರ್ಪಣೆ ಮಾಡಿದರು.
ಸಾಲಾಂಕೃತ ಮೆರವಣಿಗೆಯಲ್ಲಿ ಮುನಿಶ್ರೀಯವರನ್ನು ಪೀಠಾಧೀಶರಾದ ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಪರಂಪರಾಗತವಾಗಿ ಸ್ವಾಗತಿಸಿ, ಭರಮಾಡಿಕೊಂಡರು.
ಜಿನಮಂದಿರಗಳ ದರ್ಶನ ಪಡೆದ ಮುನಿಶ್ರೀಯವರು ವಾರ್ಷಿಕ ರಥಯಾತ್ರಾ ಮಹೋತ್ಸವದಲ್ಲಿ ದಿವ್ಯ ಸಾನಿಧ್ಯ ನೀಡಲಿರುವರು.
ರಾತ್ರಿ ನಾಗವಾಹನೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡರು. ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಮಹಾಸ್ವಾಮೀಜಿಯವರು ಅತಿಶಯ ಶ್ರೀಕ್ಷೇತ್ರದ ರಥೋತ್ಸವವು ಸಮುದಾಯದಲ್ಲಿ ಶಾಂತಿ ಸಾಮರಸ್ಯ ಬೇರೂರಲಿ ಎಂಬ ಸಂದೇಶ ಸಾರುತ್ತದೆ ಎಂದು ಭಕ್ತರನ್ನು ಹರಸಿದರು.
ಪೂಜಾ, ಭೋಜನ ಸೇವಾ ಕರ್ತರಾದ ರಚನಾ ಜೈನ್, ಸಂಜೀವ ಜೈನ್, ಅಶೋಕ ಕಂಪನಿ, ದೆಹಲಿಯವರು ಉಪಸ್ಥಿತರಿದ್ದರು. ಶ್ರೀಮಠದ ಆಡಳಿತಾಧಿಕಾರಿ ಶ್ರೀ ಸಿ.ಡಿ. ಅಶೋಕ ಕುಮಾರ್ ಇದ್ದರು.