Headlines

Ripponpete | ಒಕ್ಕಲಿಗರ ಸಂಘದ ಚುನಾವಣೆ – ಎಂ ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡಕ್ಕೆ ಭರ್ಜರಿ ಜಯ

Ripponpete | ಒಕ್ಕಲಿಗರ ಸಂಘದ ಚುನಾವಣೆ – ಎಂ ಬಿ ಲಕ್ಷ್ಮಣಗೌಡ ನೇತ್ರತ್ವದ ತಂಡಕ್ಕೆ ಭರ್ಜರಿ ಜಯ

ಹೊಸನಗರ ತಾಲ್ಲೂಕು ಒಕ್ಕಲಿಗ ಸಂಘ ರಿಪ್ಪನ್‌ಪೇಟೆ ಇದರ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಎಂ.ಬಿ.ಲಕ್ಷ್ಮಣಗೌಡ ನೇತ್ರತ್ವದ ತಂಡ ಎಲ್ಲಾ ಸ್ಥಾನಗಳನ್ನು ಗೆಲ್ಲುವ ಮೂಲಕ ಸಂಘದಲ್ಲಿ ತಮಮ್ ಹಿಡಿತವನ್ನು ಸಾಧಿಸಿದ್ದಾರೆ.

ಭಾನುವಾರ ರಿಪ್ಪನ್‌ಪೇಟೆಯ ಸಾಗರ ರಸ್ತೆಯ ವಿಶ್ವಮಾನವ ಸಭಾಭವನದಲ್ಲಿ ನಡೆದ ಚುನಾವಣೆಯಲ್ಲಿ 2 ಸ್ಥಾನಗಳು ಅವಿರೋಧವಾಗಿ ಆಯ್ಕೆಯಾಗಿ 17 ಸ್ಥಾನಗಳಿಗೆ ಚುನಾವಣೆ ನಡೆದಿದ್ದು ಎಂ.ಬಿ.ಲಕ್ಷ್ಮಣ ಗೌಡ ನೇತ್ರತ್ವದ ತಂಡ ಎಲ್ಲಾ ಸ್ಥಾನಗಳನ್ನು 

2023ರ ಅ.29ಕ್ಕೆ ಚುನಾವಣೆ ನಿಗದಿಯಾಗಿತ್ತು ಆದರೆ ಆಡಳಿತ ಮಂಡಳಿಯಲ್ಲಿದ್ದ ಕೆಲವು ಸದಸ್ಯರು ಹೈಕೋರ್ಟಿನಿಂದ ಚುನಾವಣೆಗೆ ತಡೆಯಾಜ್ಞೆ ತಂದಿದ್ದರು ನಂತರ ಹೈಕೋರ್ಟ್ ಅರ್ಜಿ ವಜಾಗೊಂಡು ಫೆ.04 ಚುನಾವಣೆಗೆ ಆದೇಶ ಮಾಡಿತ್ತು.



• ರಿಪ್ಪನ್‌ಪೇಟೆ ಕ್ಷೇತ್ರದಿಂದ ಎಂ.ಬಿ.ಲಕ್ಷ್ಮಣ ಗೌಡ ಎಂ.ಎಂ.ಪರಮೇಶ್, ಸುಮಂಗಳ ಹರೀಶ್

•ಹಾಲುಗುಡ್ಡೆ ಕ್ಷೇತ್ರದಿಂದ ಹೆಚ್.ವಿ.ಹರೀಶ್, ಹೆಚ್.ಆರ್.ಅಶೋಕ, ಹೆಚ್ ವೈ ಸಂತೋಷ್‌ಕುಮಾರ್ (ಚಿಂತು) ಹೆಚ್.ಎಸ್. ರಾಜು, ಶಿಲ್ಪ ರಾಜೇಶ್ 

•ಕಲ್ಲೂರು ಕ್ಷೇತ್ರದಿಂದ ಕೆ.ಸಿ.ತೇಜಮೂರ್ತಿ, ಈ.ಡಿ.ಮಂಜುನಾಥ, ಸತ್ಯವತಿ ಶ್ರೀಧರ, 

•ಕೋಟೆತಾರಿಗ ಕ್ಷೇತ್ರದಿಂದ ಪಿ.ಮಂಜುನಾಥ ಕೆ ಸಿ ಮಹೇಶ, ವಜ್ರಾಕ್ಷಿ, ಹೋ.ಮ. ಲೋಕಪ್ಪಗೌಡ, 

•ಕೆರೆಹಳ್ಳಿ ಕ್ಷೇತ್ರದಿಂದ ಬಿ.ಹೆಚ್.ಷಣ್ಮುಖಪ್ಪಗೌಡ,

•ಹೆದ್ದಾರಿಪುರ ಕ್ಷೇತ್ರದಿಂದ ಹೆಚ್.ಪಿ.ರಾಜೇಶ್, 

•ಗುಬ್ಬಿಗ ಕ್ಷೇತ್ರದಿಂದ ಜಿ.ದಿನೇಶ್ 

•ಗರ್ತಿಕೆರೆ ಕ್ಷೇತ್ರದಿಂದ ಟಿ.ಎಂ.ಕೃಷ್ಣಮೂರ್ತಿ ಮತ್ತು ಬುಕ್ಕಿವರೆ ಕ್ಷೇತ್ರದಿಂದ ಹೆಚ್.ಸಿ.ಸತೀಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Leave a Reply

Your email address will not be published. Required fields are marked *