ಕ್ರೂರಿ ವಿಧಿಯಾಟಕ್ಕೆ ಬಲಿಯಾದ “ನವೀನ್” ಈತನ ಕಥೆ ಕೇಳಿದ್ರೆ ಕಣ್ಣೀರು “ಗ್ಯಾರಂಟಿ”..!| Postman Exclusive

ಕ್ರೂರಿ ವಿಧಿಯಾಟಕ್ಕೆ ಬಲಿಯಾದ “ನವೀನ್” ಈತನ ಕಥೆ ಕೇಳಿದ್ರೆ ಕಣ್ಣೀರು “ಗ್ಯಾರಂಟಿ”..!

ನಗುತೈತೆ ದೈವ ಅಲ್ಲಿ – ಅಳುತೈತೆ ಹಿರಿಯ ಜೀವ ಇಲ್ಲಿ….!!!ವಿಧಿಯಾಟ ಬಲ್ಲವರು ಯಾರು..???


ರಿಪ್ಪನ್‌ಪೇಟೆ : ಪ್ರತಿಯೊಬ್ಬರ ಬಾಳಲ್ಲಿ ವಿಧಿ ಎಂಬ ಕ್ರೂರಿ ಹೇಗೆಲ್ಲ ಆಟವಾಡುತ್ತದೆ ಎಂಬುವುದಕ್ಕೆ ಪಟ್ಟಣದ ಸಮೀಪದ ವಡಗೆರೆ ಶಾಲೆಯ ಮುಂಭಾಗ ಗುರುವಾರ ಸಂಜೆ ಬೈಕ್ ಅಪಘಾತದಲ್ಲಿ ಮೃತಪಟ್ಟ ಯುವಕನ ಕಥೆಯೇ ಸ್ಪಷ್ಟ ಉದಾಹರಣೆ, ಯುವಕನ ಕುಟುಂಬದ ಕಥೆಯನ್ನು ನೀವೊಮ್ಮೆ ಕೇಳಿದ್ರೆ ನಿಮ್ಮ ಕಣ್ಣಂಚಲ್ಲಿ ಕಣ್ಣೀರು ಬರದೇ ಇರದು.

ಬೈಕ್ ಅಪಘಾತದಲ್ಲಿ ಸ್ಥಳದಲ್ಲಿಯೇ ಮೃತಪಟ್ಟ ಯುವಕ ನವೀನ್ ಕುಮಾರ್ ಕುಟುಂಬಕ್ಕೆ 2023ನೇ ಇಸವಿ ಕರಾಳ ವರ್ಷವಾಗಿದೆ.ನವೀನ್ ಕುಮಾರ್ ರವರ ತುಂಬು ಕುಟುಂಬದಲ್ಲಿ ಅಜ್ಜ ಉಡುಪ ,ಅಜ್ಜಿ ಚಂದ್ರಮ್ಮ ತಂದೆ ಗಣಪತಿ ,ತಾಯಿ ಲಲಿತಮ್ಮ ಹಾಗೂ ತಂಗಿ ಉಷಾ ಸಂತೋಷ ಹಾಗೂ ಸಂಭ್ರಮದಿಂದ 2023 ನೇ ವರ್ಷವನ್ನು ಸ್ವಾಗತಿಸಿದ್ದರು.

ಆದರೆ ವಿಧಿಯ ಆಟವೇ ಬೇರೆಯಾಗಿತ್ತು ಕಳೆದ ಹತ್ತು ತಿಂಗಳ ಹಿಂದೆ ಫೆಬ್ರವರಿಯಲ್ಲಿ ನವೀನ್ ತಂದೆ ಗಣಪತಿ ರವರು ಮಗಳ ಮದುವೆಗೆ ಜವುಳಿ ತರಲು ಸಾಗರಕ್ಕೆ ತೆರಳಿದ್ದಾಗ ಬೈಕ್ ಅಪಘಾತದಲ್ಲಿ ಮೃತಪಟ್ಟಿದ್ದರು.

ತಂದೆ ಸಾವನ್ನಪ್ಪಿ ಕೇವಲ ಒಂದೂವರೆ ತಿಂಗಳಿನಲ್ಲಿ ಅಜ್ಜ ಉಡುಪ ರವರು ಉಸಿರಾಟದ ತೊಂದರೆಯಿಂದ(ದಮ್ಮು) ಮೃತಪಟ್ಟು ಕುಟುಂಬಕ್ಕೆ ಇನ್ನಷ್ಟು ಅಘಾತವಾಗಿತ್ತು. ಆ ನೋವಿನಲ್ಲಿ ಇರುವಾಗಲೇ ಮತ್ತೆ ಒಂದು ತಿಂಗಳ ಅಂತರದಲ್ಲಿ ಅಜ್ಜಿ ಚಂದ್ರಮ್ಮ ರವರು ಸಹ ಪಾರ್ಶವಾಯುವಿನಿಂದ ಮೃತಪಟ್ಟಿದ್ದರು.

ಮನೆಯಲ್ಲಿಯೇ ಕೃಷಿ ಕೆಲಸ ಮಾಡಿಕೊಂಡಿದ್ದ ನವೀನ್ ಸ್ಣೇಹಿತನ ಬಳಿ ಬೈಕ್ ಪಡೆದುಕೊಂಡು ರಿಪ್ಪನ್‌ಪೇಟೆಗೆ ಬಂದು ಹಿಂದಿರುಗುತಿದ್ದಾಗ ವಡಗೆರೆ ಶಾಲೆ ಮುಂಭಾಗದಲ್ಲಿ ಎದುರಿನಿಂದ ಬಂದ ಕಾರಿನ ಸೈಡ್ ಮಿರರ್ ತಾಗಿ ಒಮ್ಮೆಲೆ ತಿರುಗಿಬಿದ್ದ ಹಿನ್ನಲೆಯಲ್ಲಿ ರಸ್ತೆ ಮುಖ ಅಪ್ಪಳಿಸಿ ಸ್ಥಳದಲ್ಲೇ ಸಾವನ್ನಪ್ಪಿದ್ದನು.


ಕುಟುಂಬದ ಹಿರಿಯರ ಅಗಲಿಕೆಯಿಂದ ಈಗಷ್ಟೇ ಚೇತರಿಸಿಕೊಳ್ಳುತಿದ್ದ ಕುಟುಂಬಕ್ಕೆ ನವೀನ್ ಕುಮಾರ್ ಸಾವು ಸಿಡಿಲೆರಗಿದಂತಾಗಿದೆ. ಜೀವನ ರೂಪಿಸಿಕೊಂಡು ಬದುಕಿ ಬಾಳಬೇಕಿದ್ದ ಪುತ್ರನ ಅಗಲಿಕೆ ತಾಯಿ ಲಲಿತಮ್ಮ ರವರನ್ನು ಎಷ್ಟು ಕಂಗೆಡಿಸಿರಬೇಡ……

ಒಂದೇ ವರ್ಷದಲ್ಲಿ ಕುಟುಂಬದ ಮೂವರನ್ನು ಮಣ್ಣಿನ ವಶ ಮಾಡಿ ಸಂಕಷ್ಟದಲ್ಲಿದ್ದ ಕುಟುಂಬದಲ್ಲಿ ಮತ್ತೊಂದು ಅಘಾತ ಕ್ರೂರಿ ವಿಧಿಯಾಟಕ್ಕೆ ಸಾಕ್ಷಿಯಾಗಿದೆ.

ಕೆಲವೇ ದಿನಗಳ ಅಂತರದಲ್ಲಿ ಕುಟುಂಬದ ನಾಲ್ವರನ್ನು ಕಳೆದುಕೊಂಡು ಒಬ್ಬಂಟಿಯಾದ ತಾಯಿ ಲಲಿತಮ್ಮಳ ಕಣ್ಣೀರ ಕೋಡಿಯನ್ನು ಕಂಡು ಕ್ರೂರ ವಿಧಿಯ ಕಣ್ಣಂಚಿನಲ್ಲಿ ನೀರು ಜಿನುಗಿರಬಹುದೇ……

ನೊಂದ ಹಿರಿಯ ಜೀವಕ್ಕೆ ಹೆತ್ತು ಹೊತ್ತು ಬೆಳೆಸಿದ ಪುತ್ರನ ಅಕಾಲಿಕ ಸಾವಿನ ನೋವನ್ನು ಭರಿಸುವ ಶಕ್ತಿ ಆ ಭಗವಂತ ನೀಡುವಂತಾಗಲಿ……


ಬೇಸರದಿಂದ….

🔵ರಫ಼ಿ ರಿಪ್ಪನ್‌ಪೇಟೆ

Leave a Reply

Your email address will not be published. Required fields are marked *