ಶಿವಮೊಗ್ಗ : ರಾಜ್ಯಾದ್ಯಂತ ಕೊರೋನ ಸೋಂಕು ಹರಡುತ್ತಿದ್ದು ಶಿವಮೊಗ್ಗದಲ್ಲೂ ದಿಡೀರ್ ಎಂದು ಮೂವರಿಗೆ ಕೊರೊನ ಪಾಸಿಟಿವ್ ಕಾಣಿಸಿಕೊಂಡಿದೆ.
ಒಬ್ಬರು ಮೆಗ್ಗಾನ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ, ಇನ್ನಿಬ್ಬರು ಹೋಂ ಕ್ವಾರಂಟೈನ್ ಆಗಿದ್ದಾರೆ.
ವರ್ಷಗಳ ನಂತರ ಶಿವಮೊಗ್ಗದಲ್ಲಿ ಕೊರೋನ ಪಾಸಿಟಿವ್ ಕಾಣಿಸಿಕೊಂಡಿದೆ. ಇದು ರೂಪಾಂತರಿನಾ ಅಥವಾ ಅಲ್ಲವಾ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ಮೂರು ಮಂದಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಕೂಡ ಇಲ್ಲ. ಇನ್ನು ಕೊರೋನ ಸೊಂಕಿಗೆ ಸಂಬಂಧಿಸಿದ ಶೀತ, ಗಂಟಲುನೋವು, ಕಂಡು ಬಂದರೆ ಚಿಕಿತ್ಸೆ ಪಡೆದುಕೊಳ್ಳಲು ಹಾಗೂ 60 ವರ್ಷ ಮೇಲ್ಪಟ್ಟವರು ಮಾಸ್ಕ್ ಧರಿಸುವಂತೆ ಮನವಿ ಮಾಡಿದ್ದಾರೆ.