ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿ – ಪಿಎಸ್‌ಐ ಪ್ರವೀಣ್ ಎಸ್ ಪಿ
ರಿಪ್ಪನ್‌ಪೇಟೆ : ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ ಎಂದು ಪಿಎಸ್‌ಐ ಪ್ರವೀಣ್ ಎಸ್ ಪಿ ಹೇಳಿದರು.
ಪಟ್ಟಣದ ಹೊಸನಗರ ರಸ್ತೆಯ ಆರ್ ಸಿಸಿ ಕ್ರೀಡಾಂಗಣದಲ್ಲಿ ನೆಹರು ಕ್ರಿಕೆಟರ್ಸ್ ಆಯೋಜಿಸಿದ್ದ ಹೊನಲು ಬೆಳಕಿನ 30 ಗಜದ ಕ್ರಿಕೆಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ ಕ್ರೀಡೆಯೂ ಜೀವನದ ಒಂದು ಭಾಗವಾಗಿದ್ದು ಸ್ಪರ್ಧಾತ್ಮಕ ಮನೋಭಾವನೆ ಮೂಡಿಸುತ್ತದೆ. ನೀತಿ ನಿಯಮಗಳ ಸಂವಹನೆಯೊಂದಿಗೆ ಶಿಸ್ತಿನ ಅರಿವು ಉಂಟಾಗುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವ ಹೆಚ್ಚಿಸುತ್ತದೆ. ಹಾಗೆಯೇ ಇದರಿಂದ ಮನಸ್ಸಿನ ನಾಗಾಲೋಟದ ಕೌಶಲತೆ ವೃದ್ಧಿಸುತ್ತದೆ. ಅದನ್ನು ಜೀವನದ ಒಂದು ಭಾಗವೆಂದು ಪರಿಗಣಿಸುವುದರಿಂದ ಒತ್ತಡದ ಜೀವನದಿಂದ ಹೊರಬರಲು ಸಾಧ್ಯ ಎಂದರು.
ತಾಪಂ ಮಾಜಿ ಅಧ್ಯಕ್ಷರಾದ ವೀರೇಶ್ ಆಲುವಳ್ಳಿ ಮಾತನಾಡಿ
ಕ್ರೀಡೆಗಳು ಹುಟ್ಟಿಕೊಂಡಿದ್ದೆ ಗ್ರಾಮೀಣ ಭಾಗದಿಂದ. ಟಿವಿ, ಕಂಪ್ಯೂಟರ್, ಮೊಬೈಲ್‌ಗಳ ಹಾವಳಿಗೆ ಚಿನ್ನಿದಾಂಡು, ಲಗೋರಿ, ಗೋಲಿ ಆಟ, ಕಬಡ್ಡಿ, ಖೋಖೋ, ಕಾಲ್ಚೆಂಡು ಸೇರಿದಂತೆ ಅನೇಕ ರೀತಿಯ ಗ್ರಾಮೀಣ ಸೊಗಡಿನ ಆಟಗಳು ಮರೆಯಾಗಿವೆ. ಅಂದಿನ ಆಟಗಳಲ್ಲಿ ಸಂತೋಷ, ಉಲ್ಲಾಸ, ವ್ಯಾಯಾಮ, ಸ್ನೇಹತ್ವಗಳು ದೊರೆಯುತ್ತಿದ್ದವು. ಈಗ ಅವೆಲ್ಲ ಮರೆಯಾಗಿವೆ.ಯುವಕರು ಗ್ರಾಮೀಣ ಕ್ರೀಡೆಗಳಿಗೆ ಒತ್ತು ನೀಡಬೇಕು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಸುಸಂಸ್ಕೃತಿ, ಆಚಾರ, ವಿಚಾರಗಳನ್ನು ಬೆಳೆಸಿಕೊಳ್ಳಬೇಕು ಎಂದರು.
ಇದೇ ಸಂಧರ್ಭದಲ್ಲಿ ಪಿಎಸ್‌ಐ ಪ್ರವೀಣ್ ಹಾಗೂ ಅದ್ಬುತ ಸಾಧನೆಗೈದ ಕ್ರೀಡಾಪಟುಗಳು ಹಾಗೂ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು.
ಈ ಸಂಧರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ,ಉಪಾಧ್ಯಕ್ಷ ಸುಧೀಂದ್ರ ಪೂಜಾರಿ, ನೆಹರು ಕ್ರಿಕೆಟರ್ಸ್ ಅಧ್ಯಕ್ಷರಾದ ನಾಗರಾಜ್ ಶೆಟ್ಟಿ , ಗ್ರಾಪಂ ಸದಸ್ಯರುಗಳಾದ ಸುಂದರೇಶ್ , ಗಣಪತಿ , ನಿರುಪ್ , ಆಸೀಪ್ , ಸಾರಾಭಿ ,ವೇದಾವತಿ ನೆಹರು ಕ್ರಿಕೆಟರ್ಸ್ ನ ಗೌರವಾಧ್ಯಕ್ಷ ಪರಮೇಶ್ , ಮೋಹನ್ ,ಗಿರೀಶ್ , ಚಿನ್ನು ಹಾಗೂ ಇನ್ನಿತರರಿದ್ದರು.
ಪಂದ್ಯಾವಳಿಯಲ್ಲಿ ಕೋಡೂರು ತಂಡ ಪ್ರಥಮ ಸ್ಥಾನ ಗಳಿಸಿದರೆ ಜೇನಿ ತಂಡ ದ್ವಿತೀಯ ,ಮಾವಿನಕೊಪ್ಪ ತಂಡ ತೃತೀಯ ಹಾಗೂ ನೆಹರು ಕ್ರಿಕೆಟರ್ ನಾಲ್ಕನೇ ಸ್ಥಾನ ಪಡೆದುಕೊಂಡಿದೆ.