ಆನಂದಪುರದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅಪ್ರಾಪ್ತನೊಂದಿಗೆ ಯುವತಿಯ ಅಶ್ಲೀಲ ನೃತ್ಯ – ವೀಡಿಯೋ ವೈರಲ್ | Viral video
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಡೆದಿದೆ ಎನ್ನಲಾದ ಅಶ್ಲೀಲ ನೃತ್ಯದ ವಿಡಿಯೋ ಇದೀಗ ಎಲ್ಲೆಡೆ ಹರಿದಾಡುತ್ತಿದೆ.
ಕರ್ನಾಟಕ ರತ್ನ ಡಾ ಪುನೀತ್ ರಾಜ್‍ಕುಮಾರ್ ಹೆಸರಿನ ಸಂಘಟನೆ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ದಲ್ಲಿ ಅರೆಬರೆ ಬಟ್ಟೆ ತೊಟ್ಟ ಯುವತಿಯನ್ನು ಕುಣಿಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.ಅದರಲ್ಲೂ ಅಪ್ರಾಪ್ತ ಬಾಲಕನನ್ನು ಬಳಸಿಕೊಂಡು ಅಶ್ಲೀಲ ಭಂಗಿಗಳಲ್ಲಿ ಯುವತಿ ಕುಣಿದಿದ್ದಾಳೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
ಮೂರು ನಿಮಿಷದ ಮೊಬೈಲ್ ದೃಶ್ಯಾವಳಿಯಲ್ಲಿ ಯುವತಿಯು ಅಪ್ರಾಪ್ತ ಬಾಲಕನನ್ನು ಒಬ್ಬ ಪುರುಷನ ರೀತಿಯಲ್ಲಿ ಬಳಸಿಕೊಂಡು ಆತನ ಜೊತೆಗೆ ಸೆಕ್ಸ್ ಓರಿಯೆಂಟೆಡ್ ಸ್ಟೆಪ್ಗಳನ್ನು ಹಾಕುತ್ತಿದ್ದಾಳೆ. ಇನ್ನೂ ದೃಶ್ಯದ ಹಿಂದೆ ಕಾಣುವ ಬ್ಯಾನರ್ ನಲ್ಲಿ ಶಿವಮೊಗ್ಗ ಜಿಲ್ಲೆ ಎಂದು ಸ್ಪಷ್ಟವಾಗಿ ಬರೆಯಲಾಗಿದೆ. ಭದ್ರಾವತಿ ಮೂಲದ ಆರ್ಕೆಸ್ಟ್ರಾ ಎಂಬ ಬರಹ ಕೂಡ ಕಾಣುತ್ತಿದೆ.
ಮೂಲಗಳ ಪ್ರಕಾರ ಆನಂದಪುರದ ಕನ್ನಡ ಸಂಘಟನೆಯೊಂದರ ಕಾರ್ಯಕ್ರಮ ಇದಾಗಿತ್ತು ಎನ್ನಲಾಗಿದ್ದು ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು, ಬಾಲಕನೊಬ್ಬನನ್ನ ಅಸಭ್ಯ ರೀತಿಯಲ್ಲಿ ಕುಣಿಸುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿ ಇದೆಯಾ ಅಥವಾ ಇದುವರೆಗೂ ಇಲ್ಲವಾ ಎಂಬುದು ಇನ್ನಷ್ಟೆ ಗೊತ್ತಾಗಬೇಕಿದೆ.
ಮಕ್ಕಳನ್ನು ಅಶ್ಲೀಲತೆಗೆ ಸಂಬಂಧಿಸಿದ ಯಾವುದೆ ವಿಚಾರದಲ್ಲಿಯು ಬಳಸಿಕೊಳ್ಳುವುದು ಅಪರಾಧವಾಗುತ್ತದೆ. ಪೋಕ್ಸೋ ಕಾಯಿದೆಯಡಿಯಲ್ಲಿ ಇಂತಹ ಕೃತ್ಯಗಳು ಶಿಕ್ಷಾರ್ಹ. ಸದ್ಯ ವೈರಲ್ ಆಗುತ್ತಿರುವ ವಿಡಿಯೋದಲ್ಲಿ ಅಪ್ರಾಪ್ತನನ್ನು ಯುವತಿ ಅಸಭ್ಯ ಕುಣಿತಕ್ಕಾಗಿ ಬಳಸಿಕೊಂಡಿರುವುದು ಕಾಣುತ್ತಿದೆ. ಈ ಬಗ್ಗೆ ಮಕ್ಕಳ ಕಲ್ಯಾಣ ಇಲಾಖೆಯು ಸಹ ಗಮನಹರಿಸಬೇಕಿದೆ.
ಒಟ್ಟಾರೆಯಾಗಿ ಆನಂದಪುರವೆಂದರೆ ಕನ್ನಡಪರ ಹೋರಾಟಗಾರರಾದ ಹಾ ಮಾ ಬಾಷಾ ,ಅರುಣ್ ಪ್ರಸಾದ್ , ಸುರೇಶಣ್ಣ, ನಾಗಾರಾಜ್, ಬಿ ಡಿ ರವಿಕುಮಾರ್ ಹಾಗೂ ಇನ್ನಿತರ ಮುಖಂಡರ ನೆನಪಾಗುತ್ತದೆ ಅಂತಹ ಮಹಾನ್ ನೈಜ ಕನ್ನಡಪರ ಹೋರಾಟಗಾರರ ನೆಲದಲ್ಲಿ ಇದೆಂತಹ ಅಸಭ್ಯ ನೃತ್ಯ… ಮಲೆನಾಡಿನಲ್ಲಿ ಇಂತಹ ನಂಗನಾಚ್ ನೃತ್ಯವನ್ನು ಹಿಂದೆಯೂ ಸಹಿಸಿಲ್ಲ ಮುಂದೆಯೂ ಸಹಿಸುವುದಿಲ್ಲಾ…