ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾವಳಿಗೆ ಆಯ್ಕೆಯಾದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರು
ರಿಪ್ಪನ್ಪೇಟೆ : ಶ್ರೀ ಶಾರದಾ ರಾಮಕೃಷ್ಣ ವಿದ್ಯಾಲಯದ ನಾಲ್ವರು ವಿದ್ಯಾರ್ಥಿನಿಯರು ಕಬ್ಬಡಿ ಪಂದ್ಯಾವಳಿಯಲ್ಲಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ನ 23 ಮತ್ತು 24 ರಂದು ಮಂಡ್ಯ ಜಿಲ್ಲೆಯ ನಾಗಮಂಗಲದ ಆದಿಚುಂಚನಗಿರಿ ಮಠದ ಕ್ರೀಡಾಂಗಣದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯೊಳಗಿನ ಹಾಗೂ 14 ವರ್ಷ ವಯೋಮಿತಿಯ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದು ಮುಂದಿನ ತಿಂಗಳು ದೆಹಲಿ ಹಾಗೂ ಜಾರ್ಖಂಡ್ ನಲ್ಲಿ ನಡೆಯುವ ರಾಷ್ಟ್ರ ಮಟ್ಟದ ಕಬ್ಬಡಿ ಪಂದ್ಯಾವಳಿಗೆ ಶ್ರೀ ಶಾರದ ರಾಮಕೃಷ್ಣ ವಿದ್ಯಾಲಯದ ವಿದ್ಯಾರ್ಥಿನಿಯರಾದ ಜ್ಞಾನ ಎನ್ ಕುಕ್ಕಳಲೆ , ಶ್ರೇಯಾ ಬಿ ಆರ್ ನಾಯಕ್ ಮತ್ತು ಶ್ರಾವ್ಯ ಹಿರೆಮೈತೆ ,ಶಮಿತಾ ಹಿರೆಮೈತೆ ಆಯ್ಕೆಯಾಗುವ ಮೂಲಕ ಶಿವಮೊಗ್ಗ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ಪಟ್ಟಣದ ಕುಕ್ಕಳಲೆ ನಿವಾಸಿಗಳಾದ ನಾಗಭೂಷ ಕೆ ಬಿ ಮತ್ತು ಸುಪ್ರಿತಾ ದಂಪತಿಗಳ ಪುತ್ರಿಯಾದ ಜ್ಞಾನ ಕುಕ್ಕಳಲೆ ರಾಮಕೃಷ್ಣ ವಿದ್ಯಾಲಯದಲ್ಲಿ ಹತ್ತನೆ ತರಗತಿ ವ್ಯಾಸಾಂಗ ಮಾಡುತಿದ್ದಾರೆ.
ಪಟ್ಟಣದ ಶಬರೀಶನಗರ ನಿವಾಸಿಗಳಾದ ರಾಘವೇಂದ್ರ ಬಿ ಎಸ್ ಮತ್ತು ಸವಿತಾ ದಂಪತಿಗಳ ಪುತ್ರಿಯಾದ ಶ್ರೇಯಾ ಬಿ ಆರ್ ನಾಯಕ್ ಶಾರದ ಶಾಲೆಯಲ್ಲಿ ಎಂಟನೇ ತರಗತಿ ವ್ಯಾಸಂಗ ಮಾಡುತಿದ್ದಾರೆ.
ಪಟ್ಟಣದ ಸಮೀಪದ ಮೈತೆ ಗ್ರಾಮದ ಓಂಕೇಶ ಮತ್ತು ಪವಿತ್ರಾ ದಂಪತಿಗಳ ಪುತ್ರಿಯರಾದ ಶ್ರಾವ್ಯ ಹಿರೆಮೈತೆ,ಶಮಿತಾ ಹಿರೆಮೈತೆ ಶಾರದ ರಾಮಕೃಷ್ಣ ವಿದ್ಯಾಲಯದಲ್ಲಿ ಒಂಬತ್ತನೇ ತರಗತಿ, ಏಳನೇ ತರಗತಿ ವ್ಯಾಸಂಗ ಮಾಡುತಿದ್ದಾರೆ.
ರಾಜ್ಯಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರು
ಶ್ರೀ ರಾಮಕೃಷ್ಣ ಶಾರದ ವಿದ್ಯಾಲಯದ ಜ್ಞಾನ ಕುಕ್ಕಳಲೆ, ಐಶ್ವರ್ಯ ,ಶ್ರಾವ್ಯ ಹಿರೆಮೈತೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ನಡೆದ ರಾಜ್ಯಮಟ್ಟದ 17 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಪಡೆದಿದ್ದಾರೆ.ಆದರೆ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ತಂಡದಲ್ಲಿ ಜ್ಞಾನ ಕುಕ್ಕಳಲೆ ಮತ್ತು ಶ್ರಾವ್ಯ ಹಿರೆಮೈತೆ ಸ್ಥಾನ ಪಡೆದಿದ್ದಾರೆ.
ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಗಳಿಸಿದ ವಿದ್ಯಾರ್ಥಿನಿಯರು
ಶ್ರೀ ರಾಮಕೃಷ್ಣ ಶಾರದ ವಿದ್ಯಾಲಯದ ಶ್ರೇಯಾ ಬಿ ಆರ್ ನಾಯಕ್ ,ಶಮಿತಾ ಹಿರೆಮೈತೆ ,ನಿಶಿತಾ ಸತೀಶ್ , ಐಶ್ವರ್ಯ ವಿ ಎಸ್ , ಸೋನಾಲಿ ಸುರೇಶ್ ಮಂಡ್ಯ ಜಿಲ್ಲೆಯ 14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದಿದ್ದಾರೆ ಆದರೆ ರಾಷ್ಟ್ರ ಮಟ್ಟದ ತಂಡದಲ್ಲಿ ಶಮಿತಾ ಹಿರೆಮೈತೆ ,ಶ್ರೇಯಾ ಬಿ ಆರ್ ನಾಯಕ್ ಸ್ಥಾನ ಪಡೆದಿದ್ದಾರೆ
17 ಮತ್ತು 14 ವರ್ಷ ವಯೋಮಿತಿಯೊಳಗಿನ ಬಾಲಕಿಯರ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೂ,ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ನಾಲ್ವರು ವಿದ್ಯಾರ್ಥಿಗಳಿಗೂ , ಕ್ರೀಡಾ ತರಬೇತುದಾರರಾದ ವಿನಯ್ ಎಂ ರವರಿಗೆ ಶ್ರೀ ರಾಮಕೃಷ್ಣ ಸಮೂಹ ಸಂಸ್ಥೆಗಳ ಮುಖ್ಯಸ್ಥರಾದ ದೇವರಾಜ್ ಹಾಗೂ ಮುಖ್ಯ ಶಿಕ್ಷಕರಾದ ರವಿ , ಸಹ ಶಿಕ್ಷಕರು ಹಾಗೂ ವ್ಯವಸ್ಥಾಪಕರಾದ ಸಂದೇಶ್ ಹಾಗೂ ಪೋಷಕ ವೃಂದದವರು ಅಭಿನಂದನೆ ಸಲ್ಲಿಸಿರುತ್ತಾರೆ.