ರಿಪ್ಪನ್ಪೇಟೆ : ಹೆದ್ದಾರಿಪುರದಲ್ಲಿ ಬುಧವಾರ ನಡೆದ ವಲಯ ಮಟ್ಟದ ಪ್ರೌಢಶಾಲೆಯ ಕ್ರೀಡಾಕೂಟದಲ್ಲಿ ರಿಪ್ಪನ್ಪೇಟೆಯ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆಯುವ ಸಮಗ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ.
ಬಾಲಕರ ಹಾಗೂ ಬಾಲಕಿಯರ ಖೋಖೋ ಪಂದ್ಯಾವಳಿಯಲ್ಲಿ ಬಾಲಕರ ತಂಡ ಪ್ರಥಮ,ಬಾಲಕಿಯರ ತಂಡ ಪ್ರಥಮ ಸ್ಥಾನ ಪಡೆದಿದೆ. ವಾಲಿಬಾಲ್ ಪಂದ್ಯಾವಳಿಯಲ್ಲಿ ಬಾಲಕಿಯರ ತಂಡ ದ್ವಿತೀಯ ಸ್ಥಾನ ಪಡೆದರೆ,ಥ್ರೋ ಬಾಲ್ ನಲ್ಲಿ ಬಾಲಕರ ತಂಡ ಪ್ರಥಮ ಸ್ಥಾನ ಗಳಿಸಿದೆ.
ಬಾಲಕರ ವಿಭಾಗದಲ್ಲಿ ಆಯುಷ್ 100ಮೀ, 200ಮೀ ಓಟ ಹಾಗೂ ತ್ರಿಬಲ್ ಜಂಪ್ ಹಾಗೂ ರಿಲೇ 4*100 ನಲ್ಲಿ ಪ್ರಥಮ ಸ್ಥಾನ ಪಡೆದಿದ್ದು, ವೈಯಕ್ತಿಕ ಚಾಂಪಿಯನ್ ಗಿರಿ ಪಡೆದುಕೊಂಡಿದ್ದಾರೆ.
ಇನ್ನುಳಿದಂತೆ ಶಾಲೆಯ ಕ್ರೀಡಾಪಟುಗಳು ಬಾಲಕರ ವಿಭಾಗ ಓಟದಲ್ಲಿ 800 ಮೀ ಪ್ರಥಮ,1500 ಮೀ ತೃತೀಯ , 3000ಮೀ ತೃತೀಯ , ಲಾಂಗ್ ಜಂಪ್ ನಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ , ಎತ್ತರ ಜಿಗಿತದಲ್ಲಿ ಪ್ರಥಮ ಹಾಗೂ ದ್ವಿತೀಯ , ತ್ರಿಬಲ್ ಜಂಪ್ ನಲ್ಲಿ ಪ್ರಥಮ , ಡಿಸ್ಕಸ್ ಥ್ರೋ ತೃತೀಯ , ಮತ್ತು ವಾಕ್ ರೇಸ್ ನಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ 1500 ಮೀ ನಲ್ಲಿ ಪ್ರಥಮ , 3000 ಮೀ ನಲ್ಲಿ ದ್ವಿತೀಯ ಹಾಗೂ ತ್ರಿಬಲ್ ಜಂಪ್ ನಲ್ಲಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದಿದ್ದಾರೆ.
ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸಮಗ್ರ ಪ್ರಶಸ್ತಿಯನ್ನು ಪಡೆದ ರಿಪ್ಪನ್ಪೇಟೆ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ಸಾಧನೆಗೆ ಎಸ್ ಡಿಎಂಸಿ ಅಧ್ಯಕ್ಷ ಪ್ರಶಾಂತ್(ಆಟೋ ಗುರು) ಹಾಗೂ ಪದಾಧಿಕಾರಿಗಳು ,ಉಪ ಪ್ರಾಂಶುಪಾಲ ಕೆಸಿನಮನೆ ರತ್ನಾಕರ್, ಅಧ್ಯಾಪಕ ವೃಂದ ,ಪೋಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಒಟ್ಟಾರೆಯಾಗಿ ದೈಹಿಕ ಶಿಕ್ಷಕರಿಲ್ಲದ ಪಟ್ಟಣದ ಸರ್ಕಾರಿ ಪ್ರೌಡಶಾಲೆಯು ಸಮಗ್ರ ಪ್ರಶಸ್ತಿ ಪಡೆದುಕೊಳ್ಳುವಲ್ಲಿ ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರ ಹಾಗೂ ಅಧ್ಯಾಪಕ ವೃಂದದವರ ಪಾತ್ರ ಅತಿಮುಖ್ಯವಾಗಿದೆ.