Headlines

ಹೊಂಬುಜ ಜಗನ್ಮಾತೆ ಸನ್ನಿಧಿಯಲ್ಲಿ ಶ್ರೀಗಳಿಂದ ಮಳೆಗಾಗಿ ಪ್ರಾರ್ಥನೆ|hombuja

ಹೊಂಬುಜ ಜಗನ್ಮಾತೆ ಸನ್ನಿಧಿಯಲ್ಲಿ ಶ್ರೀಗಳಿಂದ ಮಳೆಗಾಗಿ ಪ್ರಾರ್ಥನೆ

ರಿಪ್ಪನ್ ಪೇಟೆ : ಸಮೀಪದ ಹೊಂಬುಜ  ಕ್ಷೇತ್ರದಲ್ಲಿ ಶ್ರಾವಣ ಮಾಸದ ಮೂರನೇ ಸಂಪತ್ ಶುಕ್ರವಾರ ಅಂಗವಾಗಿ ಮಾತೆ  ಪದ್ಮಾವತಿ ದೇವಿ ಸನ್ನಿಧಿಯಲ್ಲಿ ಮಠದ ಪೀಠಾಧಿಕಾರಿ  ದೇವೇಂದ್ರ ಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ಅವರು “ಇಳೆಗೆ ಮಳೆ ಬರಲಿ; ಭಕ್ತಿ ಸಿಂಚನ ತಂಪೆರೆಯಲಿ”ಎಂದು ವಿಶೇಷ ಪ್ರಾರ್ಥನೆ ಸಲ್ಲಿಸಿದರು.

ಭಕ್ತರು ಜಗನ್ಮಾತೆ ಶ್ರೀ ಪದ್ಮಾವತಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ಫಲಪುಷ್ಪ, ಧಾನ್ಯ, ಇಷ್ಟ ನೈವೇದ್ಯಗಳನ್ನು ಸಮರ್ಪಿಸಿದರು.

ಮಳೆ ಬರಲಿ, ಕೃಷಿಕರ ಬೆಳೆ ಸಮೃದ್ಧವಾಗಿ  ಜನಜೀವನ ಸುಖಕರವಾಗಲಿ ಎಂದು ಹರಸಿದರು. ರಾಜ್ಯ ಹಾಗೂ ಹೊರ ರಾಜ್ಯಗಳಿಂದ ವಿಶೇಷವಾಗಿ ಜೈನ ಸಮಾಜ ಬಾಂಧವರು ಆಗಮಿಸಿದ್ದರು.

About The Author

Leave a Reply

Your email address will not be published. Required fields are marked *