ರಿಪ್ಪನ್ಪೇಟೆ – ಶ್ರದ್ದಾಭಕ್ತಿಯೊಂದಿಗೆ ಗೌರಿ ಗಣೇಶನನ್ನು ಸಂಭ್ರಮದಿಂದ ಸ್ವಾಗತಿಸಿ ಬರಮಾಡಿಕೊಂಡ ಭಕ್ತರು
ರಿಪ್ಪನ್ಪೇಟೆ;-ಗೌರಿ ಗಣೇಶನನ್ನು ಇಂದು ಇಲ್ಲಿನ ಸಿದ್ದಿವಿನಾಯಕ ಸ್ವಾಮಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕ ಚಂದ್ರಶೇಖರ್ ಭಟ್ ಮತ್ತು ಗುರುರಾಜ ಭಟ್ ನೇತೃತ್ವದಲ್ಲಿ ಮುತ್ತೈದೆಯರು ಗೌರಿಯನ್ನು ಶ್ರದ್ದಾಭಕ್ತಿಯಿಂದ ತರುವುದರೊಂದಿಗೆ ಪ್ರತಿಷ್ಠಾಪನಾ ಪೂಜೆಯೊಂದಿಗೆ ಸಂಭ್ರಮದೊಂದಿಗೆ ಜರುಗಿತು.
ಈ ಸಂದರ್ಭದಲ್ಲಿ ದೇವಸ್ಥಾನದ ಸೇವಾ ಸಮಿತಿಯ ಅಧ್ಯಕ್ಷ ಈಶ್ವರಶೆಟ್ಟಿ ಮತ್ತು ಪದಾಧಿಕಾರಿಗಳಾದ ಎನ್.ಸತೀಶ್, ಆಶಾ ಸತೀಶ್,ಎಂ.ಡಿ.ಇಂದ್ರಮ್ಮ,ಸರಸ್ವತಿ,ವನಮಾಲ,ಜಯಲಕ್ಷಿö್ಮ,ಗಣೇಶಕಾಮತ್,ಅರವಿಂದ,ಯಶೋಧೀಶ್ವರಪ್ಪಗೌಡ ಗವಟೂರು, ಇನ್ನಿತರ ಹಲವು ಪಾಲ್ಗೊಂಡು ಗೌರಿ ಪೂಜೆಯಲ್ಲಿ ಮುತ್ತೈದೆಯರು ಉಡಿ ತುಂಬಿ ಸಂಭ್ರಮಿಸಿದರು.
ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟç ಸೇನಾ ಸಮಿತಿಯ 56 ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮದ ಅಂಗವಾಗಿ ಗಣೇಶ ಮೂರ್ತಿಯನ್ನು ಸಮಿತಿಯವರು ಮೆರವಣಿಗೆ ಮೂಲಕ ಕರೆತರುವ ಮೂಲಕ ವಿನಾಯಕ ವೃತ್ತದಲ್ಲಿ ಹಿಂದೂ  ಭಗವದ್ವಜವನ್ನು ಹಾರಿಸಿ ಗಣಪತಿ ದೇವಸ್ಥಾನದ ಹಿಂಭಾಗದ ಭೂಪಾಳಂ ಚಂದ್ರಶೇಖರಯ್ಯ ಸಭಾ ಭವನದ ತಿಲಕ ಮಂಟಪದಲ್ಲಿ ಪ್ರತಿಷ್ಟಾಪನಾ ಪೂಜೆ ನೆರವೇರಿಸಲಾಯಿತು.
ವಿನಾಯಕ ವೃತ್ತದಲ್ಲಿ ಹಿಂದೂ ಭಗವದ್ವಜವನ್ನು ನಿವೃತ್ತ ಸೇನಾನಿ ವೀರಭದ್ರಪ್ಪ ದ್ವಜಾರೋಹಣ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟç ಸೇನಾ ಸಮಿತಿಯ ಅಧ್ಯಕ್ಷ ನಾಗರಾಜ ಪವಾರ್, ಪ್ರಧಾನ ಕಾರ್ಯದರ್ಶಿ ಲಕ್ಷ್ಮಣ ಬಳ್ಳಾರಿ,ಎನ್.ಸತೀಶ್, ಎಂ.ಬಿ.ಮಂಜುನಾಥ,ಎಂ.ಸುರೇಶ್ಸಿಂಗ್, ಆರ್.ರಾಘವೇಂದ್ರ,ಗ್ರಾ.ಪಂ ಉಪಾಧಕ್ಷ ಸುದೀಂದ್ರಪೂಜಾರಿ,ಸುಂದರೇಶ್, ರಾಘು,ಯೋಗೇಶ್, ಡಿ.ಈ.ನಾಗಭೂಷಣ,ವೀರಭದ್ರಪ್ಪಗೌಡ,ವೈ.ಜೆ.ಕೃಷ್ಣ,ಬೇಕರಿ ನಾರಾಯಣ,ತೀರ್ಥೇಶಡಿಕಟ್ಟು,ವಾಸು ಶೆಟ್ಟಿ ,ದಾನಪ್ಪ ವೈ.ಜೆ.ಭಾಸ್ಕರ್,ಕೃಷ್ಣೋಜಿರಾವ್,ಸುಹಾಸ್,ಶ್ರೀನಿವಾಸ್ ಅಚಾರ್,
ಆರ್.ಎನ್.ಮಂಜುನಾಥ,ಗಾಡಿ ಶೇಖರ್,ಜಯಲಕ್ಷಿö್ಮಮೋಹನ್, ಹೆಚ್.ಎನ್.ಜಯದೇವ,ರತೇಶ್ವರಪ್ಪಗೌಡ,ಮಳಕೊಪ್ಪ ಈಶ್ವರಪ್ಪ,ಆಶೋಕಹಾಲುಗುಡ್ಡೆ,ಆಟೋ ಲಕ್ಷ್ಮಣ ,ಸುಧೀರ್ ಪಿ , ಇನ್ನಿತರರಿದ್ದರು
 
                         
                         
                         
                         
                         
                         
                         
                         
                         
                        





