Headlines

ರಿಪ್ಪನ್‌ಪೇಟೆ : ಚಂದಳ್ಳಿ ಶಾಲೆಯ ಶಿಕ್ಷಕಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ|rpet

ರಿಪ್ಪನ್‌ಪೇಟೆ : ಚಂದಳ್ಳಿ ಶಾಲೆಯ ಶಿಕ್ಷಕಿಗೆ ಉತ್ತಮ ಶಿಕ್ಷಕಿ ಪ್ರಶಸ್ತಿ


ರಿಪ್ಪನ್‌ಪೇಟೆ : ಸಮೀಪದ ಚಂದಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ  ತಾಜುನ್ ಬಿ ರವರಿಗೆ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ದೊರಕಿದೆ.

ಮೂಲತಃ ಗ್ರಾಮದ ನಿವಾಸಿ ತಾಜುನ್ ಬಿ ರಹಮತ್ ಉಲ್ಲಾ ರವರು ಕಳೆದ 13 ವರ್ಷಗಳಿಂದ ಚಂದಳ್ಳಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ.

ಶಾಲೆಯ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ತಾಜುನ್ ಬಿ ರಹಮತ್ ಉಲ್ಲಾ ರವರು ನಿರೂಪಣೆ ಹಾಗೂ ಕವನ ರಚನೆಯಲ್ಲಿ ವಿಶೇಷ ಆಸಕ್ತಿ ವಹಿಸಿದ್ದಾರೆ.ವಿದ್ಯಾರ್ಥಿಗಳ ಹಾಗೂ ಪೋಷಕರ ಮನಗೆದ್ದಿರುವ ಶಿಕ್ಷಕಿ ಕಳೆದ 13 ವರ್ಷಗಳಿಂದ ಈ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದಾರೆ.

ತಾಲೂಕ್ ಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ತಾಜುನ್ ಬಿ ರವರಿಗೆ ಚಂದಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಜಗದೀಶ್ ಕಾಗಿನಲೆ ,ಶಿಕ್ಷಕಿಯರಾದ ಮಂಜುವಾಣಿ ,ಕಾವ್ಯ ಹಾಗೂ ಎಸ್ ಡಿಎಂಸಿ ಅಧ್ಯಕ್ಷರಾದ ಗಣಪತಿ ಹಾಗೂ ಸದಸ್ಯರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.

Leave a Reply

Your email address will not be published. Required fields are marked *