ರಿಪ್ಪನ್ಪೇಟೆಯಲ್ಲಿ ಇನ್ನೂ ಪ್ರತಿವರ್ಷ ಅದ್ದೂರಿ ಜಾತ್ರಾ ಮಹೋತ್ಸವ – ರಥ ನಿರ್ಮಾಣಕ್ಕೆ ಸಿದ್ದಿವಿನಾಯಕ ದೇವಸ್ಥಾನ ಸಮಿತಿಯಿಂದ ಮುಂಗಡ ಸಮರ್ಪಣೆ’’
ರಿಪ್ಪನ್ಪೇಟೆ : ಪಟ್ಟಣದ ಇತಿಹಾಸ ಪ್ರಸಿದ್ದ ಶ್ರೀಸಿದ್ದಿವಿನಾಯಕ ದೇವಸ್ಥಾನದಲ್ಲಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವ ನೆರವೇರಿಸುವ ಹಿನ್ನಲೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ವತಿಯಿಂದ ಸುಮಾರು 31 ಲಕ್ಷ ರೂ ವೆಚ್ಚದ ರಥ ನಿರ್ಮಾಣಕ್ಕೆ ಮುಂಗಡ ಹಣ ನೀಡಲಾಯಿತು.
ಪಟ್ಟಣದ ಶ್ರೀ ಸಿದ್ದಿವಿನಾಯಕ ವ್ಯವಸ್ಥಾಪನಾ ಸಮಿತಿ ಹಾಗೂ ಸಿದ್ದಿವಿನಾಯಕ ಸೇವಾ ಸಂಸ್ಥೆ ಭಕ್ತಾಧಿಗಳ ಬಹು ದಿನಗಳ ಬೇಡಿಕೆಯಂತೆ ಈ ಬಾರಿ ಜಾತ್ರಾಮಹೋತ್ಸವ ನಡೆಸಲು ಕಾರ್ಯೋನ್ಮಖರಾಗಿದ್ದು ಈ ವರ್ಷದ ವರ್ಧಂತ್ಯೊತ್ಸವ ಸಂದರ್ಭದಲ್ಲಿ ರಥೋತ್ಸವ ಹಾಗೂ ಜಾತ್ರಾ ಮಹೋತ್ಸವ ನಡೆಸಲು ತೀರ್ಮಾನಿಸಲಾಗಿದೆ ಆ ಹಿನ್ನಲೆಯಲ್ಲಿ “ರಥ” ಕೆತ್ತನೆ ಕುಸುರಿ ಕೆಲಸಗಾರ ಹರಿಹರಪುರದ ನಾಗರಾಜ್ ಅಚಾರ್ಯ ಇವರಿಗೆ ಮುಂಗಡ ಹಣವನ್ನು ದೇವಸ್ಥಾನ ಧರ್ಮದರ್ಶಿ ಸಮಿತಿ ಅಧ್ಯಕ್ಷ ಈಶ್ವರ್ ಶೆಟ್ಟಿ ನೀಡಿದರು.
ಈ ರಥ ನಿರ್ಮಾಣಕ್ಕೆ ದೇಣಿಗೆ ನೀಡುವವರು ಮುಕ್ತವಾಗಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿಯರನ್ನು ಸಂಪರ್ಕಿಸುವಂತೆ ವ್ಯವಸ್ಥಾಪನ ಸಮಿತಿ ಕೋರಿದೆ.
ಈ ಸಂದರ್ಭದಲ್ಲಿ ಪ್ರಧಾನ ಅರ್ಚಾಕರಾದ ಗುರುರಾಜ ಭಟ್, ಚಂದ್ರಶೇಖರಭಟ್ ಧರ್ಮದರ್ಶಿಗಳಾದ ಆರ್.ಈ.ಈಶ್ವರಶೆಟ್ಟಿ, ಎಂ.ಡಿ.ಇಂದ್ರಮ್ಮ, ಗಣೇಶಕಾಮತ್,ಮಂಜನಾಯ್ಕ್, ದೇವದಾಸಅಚಾರ್,ಇನ್ನಿತರರಿದ್ದರು