ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ ಪೊಲೀಸ್ ಸ್ಠೇಷನ್ ವ್ಯಾಪ್ತಿಯಲ್ಲಿ ನಡೆದ ಘಟನೆಯೊಂದರ ಸಂಬಂಧ ಸುಮೊಟೋ ಕೇಸ್ ಹಾಗೂ ಹಲ್ಲೆ ಪ್ರಕರಣದ ಕೇಸ್ ದಾಖಲಾಗಿದೆ. 
ಎತ್ತುಗಳನ್ನು ಸಾಗಿಸುತ್ತಿದ್ದ ವ್ಯಕ್ತಿಯನ್ನು ತಡೆದು ಆತನ ಮೇಲೆ ಹಲ್ಲೆ ಮಾಡಲಾಗಿದೆ ಎಂಬ ಆರೋಪದ ಅಡಿಯಲ್ಲಿ9 ಮಂದಿ ವಿರುದ್ಧ ಹಲ್ಲೆ ಪ್ರಕರಣ ದಾಖಲಾಗಿದೆ. ಇನ್ನೂ ಪ್ರಾಣಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಆರೋಪದಡಿಯಲ್ಲಿ ವಾಹನದ ಚಾಲಕನ ವಿರುದ್ಧವೂ ಕೇಸ್ ದಾಖಲಾಗಿದೆ. 
ಇಲ್ಲಿ ಮಂಚಿಕೊಪ್ಪ ಗ್ರಾಮದ ಬಳಿ ಶುಕ್ರವಾರ ಜಾನುವಾರುಗಳನ್ನು ಸಾಗಿಸುತ್ತಿದ್ದಾರೆ ಎಂಬ ಆರೋಪದಡಿಯಲ್ಲಿ ವಾಹನವೊಂದನ್ನ ಗುಂಪೊಂದು ತಡೆದು ವಿಚಾರಿಸಿದೆ. ಆ ಸಂದರ್ಭದಲ್ಲಿ  ದಾದಾಪೀರ್ ಎಂಬುವವರ ಮೇಲೆ ಹಲ್ಲೆ ನಡೆದಿದೆ ಎನ್ನಲಾಗಿದೆ. 
ಇದೆ ವಿಚಾರಕ್ಕೆ ಸಂಬಂಧಿಸಿದಂತೆ ಆರೋಪಿಗಳ ವಿರುದ್ಧ ಪೊಲೀಸರು ಕೇಸ್ ದಾಖಲಿಸಿದ್ದು, ಇನ್ನೊಂದೆಡೆ ಅಕ್ರಮವಾಗಿ ಎತ್ತುಗಳನ್ನು ಕೊಂಡೊಯ್ದ ಆರೋಪ ಸಂಬಂಧವೂ ಸುಮೊಟೊ ಕೇಸ್ ದಾಖಲಾಗಿದೆ.
		 
                         
                         
                         
                         
                         
                         
                         
                         
                         
                        