POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಸನಗರ : ರೈತನ ಬೆಳೆ ನಾಶಪಡಿಸಿದ ಅಧಿಕಾರಿಗಳು ಹಾಗೂ ಸರ್ಕಾರದ ವಿರುದ್ದ ಆರಗ ಮತ್ತು ಹಾಲಪ್ಪ ನೇತ್ರತ್ವದಲ್ಲಿ ಅಹೋರಾತ್ರಿ ಧರಣಿ|hosanagar

ಹೊಸನಗರ : ರೈತನ ಸಾಗುವಳಿ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು‌ ನಾಶಪಡಿಸಿದ ಅಧಿಕಾರಿಗಳು ಹಾಗೂ ರೈತ ವಿರೋಧಿ ಸರ್ಕಾರದ ವಿರುದ್ದ ಮಾಜಿ ಗೃಹ ಸಚಿವ ಹಾಗೂ ಶಾಸಕ ಆರಗ ಜ್ಞಾನೇಂದ್ರ ಮತ್ತು ಮಾಜಿ ಸಚಿವ ಹರತಾಳು ಹಾಲಪ್ಪ ನೇತ್ರತ್ವದಲ್ಲಿ ತಾಲೂಕ್ ಕಛೇರಿ‌ ಮುಂಭಾಗದಲ್ಲಿ ಅಹೋರಾತ್ರಿ ಧರಣಿ‌ ನಡೆಸಲಾಗುತ್ತಿದೆ.


ಹೊಸನಗರ ತಾಲೂಕಿನ ಕಚ್ಚಿಗೆಬೈಲು ಗ್ರಾಮದಲ್ಲಿ ರೈತರು ಸಾಗುವಳಿ ಮಾಡಿಕೊಂಡ ಜಮೀನಿನಲ್ಲಿ ಬೆಳೆದಿದ್ದ ಬೆಳೆಯನ್ನು JCB ಯಂತ್ರದ ಮೂಲಕ ತೆರವುಗೊಳಿದ ಅಧಿಕಾರಿಗಳ ದೌರ್ಜನ್ಯ ಹಾಗೂ ಸರ್ಕಾರದ ರೈತ ವಿರೋಧಿ ನೀತಿ ಖಂಡಿಸಿ ಈ ಪ್ರತಿಭಟನೆಯನ್ನು ನಡೆಸಲಾಗುತ್ತಿದೆ.

ಈ ಧರಣಿಯಲ್ಲಿ ಮುಖಂಡರಾದ ಸುರೇಶ್ ಸ್ವಾಮಿರಾವ್ ,ಎನ್ ಆರ್ ದೇವಾನಂದ್ ,ವೀರೇಶ್ ಆಲುವಳ್ಳಿ,ಪಿ ರಮೇಶ್ ಸೇರಿದಂತೆ ‌ನೂರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ನೆರೆದಿದ್ದಾರೆ.

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.