ಪಿಎಸ್ ಐ ಹಗರಣದ ಆರೋಪಿಗಳು ತೀರ್ಥಹಳ್ಳಿಯಲ್ಲಿ ಆರಗ ಪರ ಪ್ರಚಾರ ನಡೆಸುತಿದ್ದಾರೆ – ಕಿಮ್ಮನೆ
ರಿಪ್ಪನ್‌ಪೇಟೆ : ಪಿಎಸ್ ಐ ಹಗರಣದ ಆರೋಪಿಗಳಲ್ಲಿ ಮೂವರು ತೀರ್ಥಹಳ್ಳಿಯಲ್ಲಿ ಗೃಹ ಸಚಿವರ ಪರ ಪ್ರಚಾರ ನಡೆಸುತಿದ್ದಾರೆ ಎಂದು ಮಾಜಿ ಸಚಿವ ಹಾಗೂ ತೀರ್ಥಹಳ್ಳಿ ಕಾಂಗ್ರೆಸ್ ಅಭ್ಯರ್ಥಿ ಕಿಮ್ಮನೆ ರತ್ನಾಕರ್ ಆರೋಪಿಸಿದ್ದಾರೆ.
ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹುಂಚ ಹೋಬಳಿಯ ಕಗಲಿಜಡ್ಡು ಗ್ರಾಮದಲ್ಲಿ ಚುನಾವಣ ಪ್ರಚಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪಿಎಸ್ ಐ ಹಗರಣದ ಆರೋಪಿ ದಿವ್ಯಾ ಹಾಗರಗಿ ,ಸ್ಯಾಂಟ್ರೋ ರವಿ ಹಾಗೂ ಪಾಟೀಲ್ ತೀರ್ಥಹಳ್ಳಿ ಕ್ಷೇತ್ರದಲ್ಲಿ ಆರಗ ಜ್ಞಾನೇಂದ್ರ ಪರವಾಗಿ ಚುನಾವಣಾ ಪ್ರಚಾರ ನಡೆಸುತಿದ್ದಾರೆ ಅವರು ಪ್ರಚಾರಕ್ಕಿಳಿದ ಮೇಲೆ ಅವರ ಭ್ರಷ್ಟ ಹಣ ಕೆಲಸ ಮಾಡದೇ ಇರುತ್ತದೆಯೇ ಎಂದರು.
ಈ ಮೂವರು ಭ್ರಷ್ಟಾಚಾರಿಗಳ ಭ್ರಷ್ಟ ಹಣದಲ್ಲಿ ಆರಗ ಪರ ಕ್ಯಾಂಪೇನ್ ನಡೆಸುತಿದ್ದಾರೆ. ನಮ್ಮದು ಖಾಲಿ ಜೇಬು ನಮಗೆ ನಿಷ್ಟಾವಂತ ಕಾರ್ಯಕರ್ತರೇ ಶಕ್ತಿ ಎಂದರು.
ಕಾರ್ಯಕ್ರಮದಲ್ಲಿ ರಾಜ್ಯ ಹಿಂದುಳಿದ ವರ್ಗಗಳ ವಿಭಾಗದ ರಾಜ್ಯಾಧ್ಯಕ್ಷರಾದ ಮಧು ಬಂಗಾರಪ್ಪ, ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ ಕಲಗೋಡು ರತ್ನಾಕರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಬಂಡಿ ರಾಮಚಂದ್ರ.ಶ್ವೇತಾ ರಾಮಚಂದ್ರ. ಮುಖಂಡರಾದ ಬಿ ಜಿ ಚಂದ್ರಮೌಳಿ, ಕೂರಂಬಳ್ಳಿ ಷಣ್ಮುಖಪ್ಪ, ಮುಡುಬಾ ರಾಘವೇಂದ್ರ,ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಮೀರ್ ಹಂಜಾ,ಮುಖಂಡರುಗಳಾದ ಬಶೀರ್ ಅಹ್ಮದ್, ಗರ್ತಿಕೆರೆ ರಾಜು,ಬುಕ್ಕಿವರೆ ರಮೇಶ್, ಎಂಎಂ ಪರಮೇಶ್. ಯಡಗುಡ್ಡೆ ಷಣ್ಮುಖ ಇನ್ನಿತರರಿದ್ದರು.