ರಿಪ್ಪನ್ಪೇಟೆ : ಇಲ್ಲಿನ ಸಮೀಪದ ಹುಂಚ ಗ್ರಾಪಂ ವ್ಯಾಪ್ತಿಯ ಗ್ರಾಮವೊಂದರಲಿ ಅಪ್ರಾಪ್ತ ವಯಸ್ಸಿನ ಯುವತಿಯನ್ನು ಅತ್ಯಾಚಾರ ಮಾಡಿದ ಆರೋಪದಲ್ಲಿ ಯುವಕನೊಬ್ಬನ ಮೇಲೆ ಪೋಕ್ಸೋ ಪ್ರಕರಣ ದಾಖಲಾಗಿದೆ.
ಬನಶೆಟ್ಟಿಕೊಪ್ಪ ಗ್ರಾಮದ ಮನೋಜ್ (22) ಮೇಲೆ ಪ್ರಕರಣ ದಾಖಲಾಗಿದೆ.
ದೂರಿನ ವಿವರ ಇಲ್ಲಿದೆ :
ಸಂತ್ರಸ್ತ ಬಾಲಕಿಯ ತಂದೆ ತೀರಿಕೊಂಡಿದ್ದು ತಾಯಿ ಕೂಲಿ ಕೆಲಸ ಮಾಡಿಕೊಂಡಿರುತ್ತಾರೆ. ಸದರಿಯವರ ತಂದೆ ತಾಯಿಗೆ 2 ಜನ ಮಕ್ಕಳಿದ್ದು ಹಿರಿಯವನು ಅಣ್ಣ ಡ್ರೈವಿಂಗ್ ಕೆಲಸ ಮಾಡಿಕೊಂಡಿರುತ್ತಾನೆ.ನೊಂದ ಬಾಲಕಿಯು ೨ ನೇ ತರಗತಿ ವರೆಗೆ ವಿದ್ಯಾಭ್ಯಾಸ ಮಾಡಿಕೊಂಡು ಮನೆಯಲ್ಲಿಯೇ ಇರುತ್ತಾರೆ. ಬನಶೆಟ್ಟಿ ಕೊಪ್ಪ ವಾಸಿ ಮನೋಜ ಎಂಬಾತನು ನೊಂದ ಬಾಲಕಿಯನ್ನು ಪುಸಲಾಯಿಸಿ ಬಲಾತ್ಕಾರವಾಗಿ ಅತ್ಯಾಚಾರ ಮಾಡಿದ್ದರಿಂದ ಗರ್ಭಿಣಿಯಾಗಿ ಶಿವಮೊಗ್ಗ ಸುರಭಿ ಕೇಂದ್ರದಲ್ಲಿ ಸುಮಾರು 04 ತಿಂಗಳು ಇದ್ದು ದಿನಾಂಕ:20-02-2021 ರಂದು ವಾಪಾಸ್ ಮನೆಗೆ ಹೋಗಿದ್ದು ಇವರಿಗೆ ಜನಿಸಿದ ಗಂಡು ಮಗುವನ್ನು ಸರಕಾರಕ್ಕೆ (ದತ್ತುಕೇಂದ್ರ)ನೀಡಿರುತ್ತಾರೆ.
ಆರೋಪಿತ ಮನೋಜ್ ಈತನು ಸುಮಾರು 07 ತಿಂಗಳು ಜೈಲಿನಲ್ಲಿದ್ದು ನಂತರ ಕೇಸನ್ನು ನ್ಯಾಯಾಲಯದಲ್ಲಿ ರಾಜಿ ಮಾಡಿಕೊಂಡಿರುತ್ತಾರೆ. ಮನೋಜನು ಜೈಲಿನಿಂದ ಬಿಡುಗಡೆಯಾದ ನಂತರ ಸಂತ್ರಸ್ಥ ಬಾಲಕಿಯೊಂದಿಗೆ ಪುನಃ ಸಂಪರ್ಕ ಬೆಳೆಸಿ ಮಾತನಾಡುತ್ತಿದ್ದು ನೊಂದ ಬಾಲಕಿಯ ಮನೆಗೆ ಪದೆ ಪದೆ ಬರುತ್ತಿದ್ದು, ನಿನ್ನನ್ನು ಮದುವೆಯಾಗುತ್ತೇನೆ ಬಲವಂತವಾಗಿ ದಿನಾಂಕ:11/03/2022 ರಂದು ನೊಂದ ಬಾಲಕಿಯನ್ನು ಕರೆದುಕೊಂಡು ಹೋಗಿ ಹೊರನಾಡಿನ ಗಣಪತಿ ದೇವಸ್ಥಾನದಲ್ಲಿ ಅಂಗಡಿಯಲ್ಲಿ ಸಿಗುವ ತಾಳಿಸರವನ್ನು ನೊಂದ ಬಾಲಕಿಯ ಕೊರಳಿಗೆ ಹಾಕಿ ಮದುವೆ ಯಾಗಿರುತ್ತಾನೆ. ನಂತರ ಬನಶೆಟ್ಟಿಕೊಪ್ಪದಲ್ಲಿರುವ ಆತನ ಮನೆಗೆ ಕರೆದುಕೊಂಡು ಹೋಗಿರುತ್ತಾನೆ. ಮರುದಿನ ದಿನಾಂಕ:12/03/2022 ರಂದು ನೊಂದ ಬಾಲಕಿ ಬೇಡ ಎಂದರೂ ಕೇಳದೆ ಆರೋಪಿತನು ನಾವಿಬ್ಬರೂ ಗಂಡ ಹೆಂಡತಿ ಅಂತಾ ಹೇಳಿ ಬಲವಂತವಾಗಿ ದೈಹಿಕ ಸಂಪರ್ಕ ಹೊಂದಿ ಅತ್ಯಾಚಾರ ಮಾಡಿರುತ್ತಾನೆ. ನಂತರ ಸುಮಾರು 2 ತಿಂಗಳ ನಂತರ ನೊಂದ ಬಾಲಕಿಯು ಗರ್ಭವತಿಯಾಗಿರುತ್ತಾರೆ.
ದಿನಾಂಕ:21/02/2023 ರಂದು ಹೆಣ್ಣು ಮಗುವಿಗೆ ತೀರ್ಥಹಳ್ಳಿ ಸರಕಾರಿ ಆಸ್ಪತ್ರೆಯಲ್ಲಿ ಜನ್ಮ ನೀಡಿರುತ್ತಾರೆ.ನೊಂದ ಬಾಲಕಿಯ ಮದುವೆಗೆ ಆರೋಪಿತ ಮನೋಜ್ ರವರ ತಂದೆ ತಾಯಿಯವರು ಕುಮ್ಮಕ್ಕು ನೀಡಿದ್ದರಿಂದ ಮದುವೆಯಾಗಿರುತ್ತಾರೆ.ನೊಂದ ಬಾಲಕಿಯನ್ನು ಬಲವಂತವಾಗಿ ಅತ್ಯಾಚಾರ ಮಾಡಿ ಮಗು ಜನಿಸಲು ಕಾರಣಕರ್ತನಾದ ಮನೋಜ ರವರ ಮೇಲೆ ಕಾನೂನು ಕ್ರಮ ಕೈಗೊಳ್ಳಲು ಮನವಿ ಮಾಡಲಾಗಿದೆ.