ರಿಪ್ಪನ್ ಪೇಟೆ: ಜೈನರ ದಕ್ಷಿಣ ಕಾಶಿಯೆಂದೇ ಪ್ರಖ್ಯಾತಿ ಪಡೆದಿರುವ ಹೊಂಬುಜ ಅತಿಶಯ ಮಹಾಕ್ಷೇತ್ರದಲ್ಲಿ ಮಾ. 9ರಿಂದ 15 ರವರೆಗೆ ಭಗವಾನ್ ಪಾರ್ಶ್ವನಾಥ ತೀರ್ಥಂಕರರ ಮತ್ತು ಮಹಾಮಾತೆ ಪದ್ಮಾವತಿ ದೇವಿ ಅಮ್ಮನವರ ವಾರ್ಷಿಕ ರಥ ಯಾತ್ರಾ ಮಹೋತ್ಸವವು ಜಗದ್ಗುರು ಡಾ.ದೇವೇಂದ್ರ ಕೀರ್ತಿ ಭಟ್ಟಾರಕ
ಮಹಾಸ್ವಾಮೀಜಿಯವರ ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಲಾಗಿದೆ ಎಂದು ಮಠದ ಆಡಳಿತಾಧಿಕಾರಿಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗುರುವಾರ (ಮಾ. 9) ಶ್ರೀ ಮಠದ ಬಸದಿಯಲ್ಲಿ ಶ್ರೀ ನೇಮಿನಾಥ ಸ್ವಾಮಿ ಬಸದಿ ಗಣಧರವಲಯ ಆರಾಧನೆ, 10ರಂದು ಮಕ್ಕಳ ಬಸದಿಯಲ್ಲಿ ಶ್ರೀ ಪಾರ್ಶ್ವನಾಥ ಸ್ವಾಮಿ ಚಿಕ್ಕ ಬಸದಿ ಕಲ್ಯಾಣ ಮಂದಿರ ಆರಾಧನೆ, 11 ರಂದು ಬೋಗಾರ ಬಸದಿಯಲ್ಲಿ ಭಕ್ತಾಸುರ ಆರಾಧನೆ, 12 ರಂದು ಇಂದ್ರಪ್ರತಿಷ್ಠೆ ವಿಮಾನ ಶುದ್ಧಿ ಯಕ್ಷ ಪ್ರತಿಷ್ಠೆ, ಧ್ವಜಾರೋಹಣ, ಮಹಾನೈವೇದ್ಯ ಪೂಜೆ, ನಾಂದಿ ಮಂಗಲ, ವಾಸ್ತು ಶಾಂತಿ, ಮೃತ್ತಿಕಾ ಸಂಗ್ರಹ, ರಾತ್ರಿ 8ಕ್ಕೆ ನಾಗವಾಹನೋತ್ಸವವಿದೆ. ಮಾ. 13ರಂದು ನಿತ್ಯನಿಧಿ ಸಹಿತ ಶ್ರೀಸ್ವಾಮಿ ಮತ್ತು ಶ್ರೀ ಅಮ್ಮನವರ ಸನ್ನಿಧಿಯಲ್ಲಿ ಅಭಿಷೇಕ ಕಲಿಕುಂಡ ಯಂತ್ರಾರಾಧನೆ ರಾತ್ರಿ 8ಕ್ಕೆ ಸಿಂಹ ವಾಹನೋತ್ಸವ ನಡೆಯಲಿದೆ. ಮಾ. 14ರಂದು ನಿತ್ಯವಿಧಿ ಸಹಿತ ಜಲಾಗ್ನಿ ಹೋಮ ಶಾಂತಿ ಚಕ್ರಾರಾಧನೆ, ಶ್ರೀಬಲಿ, ಸಂಜೆ 6ಕ್ಕೆ ಧಾರ್ಮಿಕ ಸಮಾರಂಭವಿದೆ. ಸಿದ್ಧಾಂತ ಕೀರ್ತಿ ಪ್ರಶಸ್ತಿ ಪ್ರದಾನ, ರಾತ್ರಿ 8ಕ್ಕೆ ಬೆಳ್ಳಿ ರಥೋತ್ಸವ ಪುಷ್ಪ ರಥೋತ್ಸವ, 15 ರಂದು ಮೂಲನಕ್ಷತ್ರದಲ್ಲಿ ಮಧ್ಯಾಹ್ನ 12 ಗಂಟೆಗೆ ನಿತ್ಯ ವಿಧಿ ಸಹಿತ ಮಹಾ ನೈವೇದ್ಯ ಪೂಜೆ, ಜಗನ್ಮಾತೆ ಪದ್ಮಾವತಿ ದೇವಿ ರಥಾರೋಹಣ, 1.25ಕ್ಕೆ ಮಹಾ ರಥೋತ್ಸವ ಜರುಗಲಿದೆ.
ಮಾ.16 ರಂದು 11 ಗಂಟೆಗೆ ನಿತ್ಯವಿಧಿ ಸಹಿತ ತ್ರಿಕೂಟ ಜಿನಾಲಯದ ಭಗವಾನ್ ಶ್ರೀಪಾರ್ಶ್ವನಾಥ ಸ್ವಾಮಿಗೆ 108 ಕಲಶಗಳ ಮಹಾಭಿಷೇಕ ಮತ್ತು ಸಂಘ ಪೂಜೆ ಜರುಗಲಿದೆ. ಮಾ. 17ರಂದು ಬೆಳಗ್ಗೆ 9 ಗಂಟೆಗೆ ಕುಂಕುಮೋತ್ಸವ ಧ್ವಜಾರೋಹಣ ಜರುಗಲಿದೆ ಎಂದು ಮಠದ ಆಡಳಿತಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.