ವಸ್ತುನಿಷ್ಠ ವರದಿಗೆ ಅಡ್ಡಿ, ಪತ್ರಕರ್ತರ ಸ್ವಾತಂತ್ರ್ಯ ಹರಣಕ್ಕೆ ಯತ್ನ – ಶಾಸಕ ಹರತಾಳು ಹಾಲಪ್ಪ ವಿರುದ್ದ ದೂರು|halappa


ಸಾಗರದಲ್ಲಿ  ವರದಿಯೊಂದಕ್ಕೆ ಸಂಬಂಧಿಸಿದಂತೆ ಶಾಸಕರು ಪತ್ರಕರ್ತರೊಬ್ಬರ ಜೊತೆ ನಡೆಸಿದ ಸಂಭಾಷಣೆ, ಅವಮಾನ, ಧಮ್ಕಿ ಹಾಕಿದಂತೆ ಇದ್ದು, ನಿರ್ಭಯವಾಗಿ ವರದಿ ಮಾಡಲು  ಪತ್ರಕರ್ತರಿಗೆ ಸೂಕ್ತ ರಕ್ಷಣೆ ಮತ್ತು ವಾತಾವರಣ ನಿರ್ಮಿಸಬೇಕೆ ಆಗ್ರಹಿಸಿ ರಾಜ್ಯ ಕಾರ್ಯನಿರತ ಪತ್ರಕರ್ತ ಸಂಘ ಇಂದು ಸಾಗರ ಶಾಖೆ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸಾಗರ ಕಾರ್ಯ ನಿರತ ಪತ್ರಕರ್ತರ ಸಂಘ ಇಂದು ಸಾಗರದ ಉಪ ವಿಭಾಗಧಿಕಾರಿಗಳ ಕಛೇರಿ ಎದುರು ಮೌನ ಪ್ರತಿಭಟನೆ ನೆಡೆಸಿ ಮನವಿ ಸಲ್ಲಿಸಲಾಯಿತು. ನಂತರ ಶಾಸಕ ಹರತಾಳು ಹಾಲಪ್ಪ ಕೃತ್ಯದ ವಿರುದ್ಧ ಆಕ್ರೋಶ ಮತ್ತು ಎಚ್ಚರಿಕೆ ನೀಡಲಾಯಿತು.

ವರದಿ ಮಾಡಿದ ಪತ್ರಕರ್ತ ಮಹೇಶ ಹೆಗಡೆಯವರನ್ನ ಶಾಸಕ ಹರತಾಳು ಹಾಲಪ್ಪ ರವರು ಸಾರ್ವಜನಿಕವಾಗಿ ಆಕ್ಷೇಪ ವ್ಯಕ್ತಪಡಿಸಿ ಮನಸಿಗೆ ಘಾಸಿಗೊಳಿಸಿದ್ದರಿಂದ ಮಹೇಶ್ ನೊಂದು ಸಂಘದಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದರು. ದೂರು ನೀಡಿದ ಹಿನ್ನಲೆಯಲ್ಲಿ ಸಾಗರದ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿ ಪತ್ರಕರ ರಕ್ಷಣೆಗೆ ತಾಲೂಕು ಆಡಳಿತ ಮುಂದಾಗುವಂತೆ ಸಂಘಟನೆ ಆಗ್ರಹಿಸಿದೆ.



ಪತ್ರಕರ್ತರಿಗೆ ಸೂಕ್ತ ರಕ್ಷಣೆ ನೀಡುವಂತೆ ಉಪ ವಿಭಾಗಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಿದ ಸಾಗರ ತಾಲ್ಲೂಕು ಕಾರ್ಯ ನಿರತ ಪತ್ರಕರ್ತರ ಸಂಘ, ಈ ವೇಳೆ ಸಂಘದ ದೀಪಕ್, ಗಣೇಶ್, ಇಮ್ರಾನ್, ಮೊದಲಾದವರು ಭಾಗಿಯಾಗಿದ್ದರು.



Leave a Reply

Your email address will not be published. Required fields are marked *