w
Headlines
Home » ರಿಪ್ಪನ್‌ಪೇಟೆ : ಮೃತ ಯೋಧ ಸಂದೀಪ್ ಮನೆಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ, ಸಾಂತ್ವಾನ|sandeep

ರಿಪ್ಪನ್‌ಪೇಟೆ : ಮೃತ ಯೋಧ ಸಂದೀಪ್ ಮನೆಗೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಭೇಟಿ, ಸಾಂತ್ವಾನ|sandeep

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಯೋಧ ಅಸ್ಸಾಂನ ಮಣಿಪುರದಲ್ಲಿ ಅಸ್ಸಾಂ ರೈಫಲ್ಸ್ ವಿಭಾಗದಲ್ಲಿ ಕರ್ತವ್ಯದಲ್ಲಿದ್ದಾಗ ಮೃತಪಟ್ಟಿದ್ದಾರೆ.




ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತಿದ್ದ ಪಟ್ಟಣದ ಶಬರೀಶನಗರದ ನಿವಾಸಿ ಸಂದೀಪ್(27) ಅಸ್ಸಾಂ ನ ಮಣಿಪುರದಲ್ಲಿ ಕರ್ತವ್ಯದಲ್ಲಿದ್ದ ವೇಳೆ ಮೃತಪಟ್ಟ ವಿಚಾರ ತಿಳಿಯುತಿದ್ದಂತೆ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಮೃತ ಯೋಧನ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದರು.




ನಂತರ ಮಾದ್ಯಮದೊಂದಿಗೆ ಮಾತನಾಡಿದ ಬೇಳೂರು ಗೋಪಾಲಕೃಷ್ಣ ಒಬ್ಬ ಯುವ ಯೋಧ ಅಕಾಲಿಕವಾಗಿ ಮೃತಪಟ್ಟಿರುವುದು ರಾಷ್ಟ್ರಕ್ಕಾದ ನಷ್ಟವಾಗಿದೆ. ನಗುಮೊಗದ ಯುವಕ ಸಂದೀಪ್ ನನಗೆ ಆತ್ಮೀಯನಾಗಿದ್ದು ಉತ್ತಮ ಖೋಖೋ ಕ್ರೀಡಾಪಟುವಾಗಿದ್ದರು ಇತ್ತೀಚೆಗೆ ಪಟ್ಟಣದಲ್ಲಿ ನಡೆದ ಖೋಖೋ ಪಂದ್ಯಾವಳಿಯಲ್ಲಿ ಆತನನ್ನು ಸನ್ಮಾನಿಸಿದ್ದೇ ಆದರೆ ಇಂದು ಅವರ ಅಕಾಲಿಕ ಮರಣ ನನಗೆ ಅತೀವ ನೋವುಂಟು ಮಾಡಿದೆ ಎಂದು ಬಾವುಕರಾದರು.




Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.