ಖಾಸಗಿ ಬಸ್ ಹಾಗೂ ಬೊಲೆರೊ ಪಿಕಪ್ ನಡುವೆ ಮುಖಮುಖಿ ಡಿಕ್ಕಿಯಾಗಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಪ್ಪರಗುಂಡಿ ಸೇತುವೆ ಬಳಿ ನಡೆದಿದೆ.
ಶರ್ಮಣ್ಯಾವತಿ ನರ್ಸರಿ ಹತ್ತಿರ ಶಿವಮೊಗ್ಗದಿಂದ ಕುಂದಾಪುರಕ್ಕೆ ಕಡೆಗೆ ಹೋಗುತಿದ್ದ ದುರ್ಗಾಂಬ ಬಸ್ಸು ಹಾಗೂ ಹೊಸನಗರದಿಂದ ರಿಪ್ಪನ್ ಪೇಟೆಗೆ ಹೊರಟ ಬೊಲೆರೋ ಪಿಕಪ್ ಗಾಡಿ ನಡುವೆ ಮುಖಮುಖಿ ಡಿಕ್ಕಿಯಾಗಿದೆ.
ಅಪಘಾತದ ರಭಸಕ್ಕೆ ಬೊಲೆರೊ ಪಿಕಪ್ ವಾಹನ ಎರಡು ತುಂಡಾಗಿದೆ.
ಬೊಲೆರೊ ಪಿಕಪ್ ನಲ್ಲಿದ್ದ ಮೂವರು ವ್ಯಕ್ತಿಗಳಿಗೆ ಗಂಭೀರ ಗಾಯಗಳಾಗಿದ್ದು ಹೊಸನಗರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನಲಾಗುತಿದ್ದು ಬಸ್ ನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯಗಳಾಗಿಲ್ಲ.
ಹೊಸನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.