Headlines

ಹೊಸನಗರ : ಸಂಸಾರದಲ್ಲಿ‌ ಮನಸ್ತಾಪ ಹಿನ್ನಲೆ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದ ದಂಪತಿ ಕೋರ್ಟ್ ನಲ್ಲಿ ಮತ್ತೇ ಒಂದಾದರು|lok adalath


ಹೊಸನಗರ : ದಾಂಪತ್ಯ ಕಲಹದಿಂದ ವಿಚ್ಛೇಧನದ ದಾವೆ ಹೂಡಿದ್ದ ದಂಪತಿಗೆ ಹೊಸನಗರ ನ್ಯಾಯಾಲಯ ಹೊಸ ಬದುಕು ಕಟ್ಟಿಕೊಳ್ಳಲು ದಾರಿ ತೋರಿಸಿದೆ. ಲೋಕ ಅದಾಲತ್‌ನಲ್ಲಿ ನ್ಯಾಯಾಧೀಶರು ನೀಡಿದ ಹಿತವಚನಗಳಿಗೆ ತಲೆಬಾಗಿ ಮತ್ತೆ ಬಾಳ ಸಂಗಾತಿಗಳಾದ ಪ್ರಸಂಗ ನಡೆದಿದೆ.



ಸಂಸಾರದಲ್ಲಿ ಮನಸ್ತಾಪ ಉಂಟಾಗಿ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ ದಂಪತಿ ನ್ಯಾಯಾಲಯದ ಆವರಣದಲ್ಲಿ ಒಂದಾದ ಘಟನೆ ಶಿವಮೊಗ್ಗ ಜಿಲ್ಲೆ ಹೊಸನಗರ ಕೋರ್ಟ್ ನಲ್ಲಿ ನಡೆದಿದೆ.

ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ದಂಪತಿ ಒಂದಾಗಿದ್ದಾರೆ. ವೀರೇಶ್ ಮತ್ತು ಉಷಾ ಒಂದಾದ ದಂಪತಿ.



ಮದುವೆಯಾಗಿ 9 ವರ್ಷಗಳಾಗಿದ್ದು, ಸಂಸಾರದಲ್ಲಿ ಮನಸ್ತಾಪ ಉಂಟಾದ ಕಾರಣ ಬೇರೆಯಾಗಿದ್ದರು. ಹೊಸನಗರ ನ್ಯಾಯಾಲಯದಲ್ಲಿ ವಿಚ್ಛೇದನ ಕೋರಿ ದಾವೆ ಹೂಡಿದ್ದರು. 

ಲೋಕ ಅದಾಲತ್ ನಲ್ಲಿ ಪ್ರಧಾನ ವ್ಯವಹಾರ ನ್ಯಾಯಾಧೀಶ ಕೆ. ರವಿಕುಮಾರ್ ಮತ್ತು ಹೆಚ್ಚುವರಿ ನ್ಯಾಯಾಧೀಶರಾದ ಕೆ. ಪುಷ್ಪಲತಾ ಅವರು ವೀರೇಶ್ ಮತ್ತು ಉಷಾ ನಡುವೆ ಮಾತುಕತೆ ನಡೆಸಿ ಇಬ್ಬರನ್ನು ಒಂದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.



Leave a Reply

Your email address will not be published. Required fields are marked *