ಅತ್ಯಂತ ನೀರಸ,ಚುನಾವಣಾ ತಂತ್ರಗಾರಿಕೆಯ ಬಜೆಟ್‌ – ಜೆಡಿಎಸ್|JDS

ರಿಪ್ಪನ್‌ಪೇಟೆ : ಕರ್ನಾಟಕ ರಾಜ್ಯದ 2023-24 ನೇ ಸಾಲಿನ ಬಜೆಟ್ ಚುನಾವಣಾ ತಂತ್ರಗಾರಿಕೆ ಬಜೆಟ್ ಆಗಿದೆಯೇ ಹೊರತು ಇದರಲ್ಲಿ ಯಾವುದೇ ಅಭಿವೃದ್ಧಿ ಕಾರ್ಯದ ಮುನ್ನೋಟವಿಲ್ಲ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅರ್ ಎ ಚಾಬುಸಾಬ್ ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ಎಲ್ಲೂ ಕೂಡ ದುಪ್ಪಟ್ಟು ಮಾಡಲು ಯೋಜನೆ ಹಾಕಿಕೊಂಡಿಲ್ಲ. ಕೇಂದ್ರ ಸರ್ಕಾರ ಈ ಸಲ ಕೃಷಿಗೆ 50 ಸಾವಿರ ಕೋಟಿ ರೂ‌ಪಾಯಿ ಅನುದಾನ ಕಡಿಮೆ ಮಾಡಿದ್ದಾರೆ. ಹೀಗಾಗಿ ಈ ಸಲ‌ ರಸಗೊಬ್ಬರದ ಬೆಲೆ ಹೆಚ್ಚಾಗಲಿದೆ. ಹಾಗಾದಲ್ಲಿ ರೈತರ ಆದಾಯ ಹೇಗೆ ದುಪ್ಪಟ್ಟು ಆಗುತ್ತದೆ ಎಂದು ಪ್ರಶ್ನಿಸಿದರು.

ಜೆಎಸ್​ಟಿ ಹೆಚ್ಚಿಗೆ ಹಾಕಿದ್ದರಿಂದ ತೆರಿಗೆ ಹೆಚ್ಚು ಬಂದಿದೆ. ಮಜ್ಜಿಗೆ, ಮೊಸರು ಹೀಗೆ ಅಗತ್ಯ ಪದಾರ್ಥಗಳ ಮೇಲೆ ತೆರಿಗೆ ಹಾಕಿದ್ದಾರೆ. ಮೊದಲಿಗೆ ಇವುಗಳಿಗೆ ತೆರಿಗೆ ಹಾಕುತ್ತಾ ಇರಲಿಲ್ಲ. ಇವರ ಕೆಟ್ಟ ಆರ್ಥಿಕ ನೀತಿಯಿಂದ ಸಾಲದ ಸುಳಿಗೆ ಸಿಲುಕಿದ್ದಾರೆ. ರಾಜ್ಯವನ್ನು ಆರ್ಥಿಕವಾಗಿ ದಿವಾಳಿ ಮಾಡಿ ಸಾಲದ‌ ಸುಳಿಗೆ ಸಿಲುಕಿಸಿದ್ದಾರೆ. ಈ ಬಜೆಟ್ ನಿಂದ ರಾಜ್ಯದ ಜನರ ಸಮಸ್ಯೆಗಳು ಪರಿಹಾರವಾಗುವುದಿಲ್ಲ.

ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದು ಹೇಳಿದ್ದರು. ಎಲ್ಲೂ ಕೂಡ ದುಪ್ಪಟ್ಟು ಮಾಡಲು ಯೋಜನೆ ಹಾಕಿಕೊಂಡಿಲ್ಲ. ಕೇಂದ್ರ ಸರ್ಕಾರ ಈ ಸಲ ಕೃಷಿಗೆ 50 ಸಾವಿರ ಕೋಟಿ ರೂ‌ಪಾಯಿ ಅನುದಾನ ಕಡಿಮೆ ಮಾಡಿದ್ದಾರೆ. ಹೀಗಾಗಿ ಈ ಸಲ‌ ರಸಗೊಬ್ಬರದ ಬೆಲೆ ಹೆಚ್ಚಾಗಲಿದೆ. ಹಾಗಾದಲ್ಲಿ ರೈತರ ಆದಾಯ ಹೇಗೆ ದುಪ್ಪಟ್ಟು ಆಗುತ್ತದೆಯೇ ಎಂದು ಪ್ರಶ್ನಿಸಿದರು.

ರೈತರ ಮತ್ತು ಸಣ್ಣ ಹಿಡುವಳಿದಾರರ ಕಲ್ಯಾಣಕ್ಕೆ ಯಾವುದೇ ಯೋಜನೆ ಘೋಷಿಸಿಲ್ಲ,  ಒಟ್ಟು 3.07 ಲಕ್ಷ ಕೋಟಿ ಬಜೆಟ್ ನಲ್ಲಿ ನೀರಾವರಿ ಯೋಜನೆಗೆ ಒತ್ತು ನೀಡಿರುವುದಿಲ್ಲಾ  ಪಕ್ಕದ ಅಂದ್ರ ಪ್ರದೇಶ ದಲ್ಲಿ ರೈತರ ನಿರಾವರಿಗೆ ಶೇ.15 ರಷ್ಟು ನೀಡಿದ್ದು ಇಂದಿನ ಬಜೆಟ್ ನಲ್ಲಿ ಕರ್ನಾಟಕ ರೈತರಿಗೆ ಕೇವಲ ಶೇ.6 ರಷ್ಟು ಮಿಸಲಿಟ್ಟಿರುತ್ತಾರೆ  ತೊಟಗಾರಿಕೆ ಸಹ ಹೆಚ್ಚು ಒತ್ತು ನೀಡದೇ ಶೇ 12 ರಷ್ಟು ಮೀಸಲಿಟ್ಟಿದ್ದಾರೆ. ಕೃಷಿಕರು ಸಾಲದ ಹೊರೆಯಿಂದ ದೂರ ಉಳಿಯಲು ಯಾವುದೇ ಯೋಜನೆ ಘೊಷಿಸದೇ ಇರುವುದು ಬೇಸರದ ಸಂಗತಿಯಾಗಿದೆ.

ಇದೇ ವರ್ಷ ಕುಮಾರಸ್ವಾಮಿ ಬಜೆಟ್ ಮಂಡಿಸಲಿದ್ದಾರೆ :

ಚುನಾವಣೆ ಪೂರ್ವದ ಈ ಬಜೆಟ್ ಗೆ ಯಾವುದೇ ಮಹತ್ವ ಇಲ್ಲ. ಮುಂದಿನ ಮೇ ತಿಂಗಳಲ್ಲಿ ಚುನಾವಣೆ ಇದೆ‌.ಚುನಾವಣೆಯಲ್ಲಿ ಗೆದ್ದು  ಕುಮಾರಸ್ವಾಮಿ ಸರ್ಕಾರ ಬರುತ್ತದೆ ಆಗ ರೈತರ ಪರವಾದ ಬಜೆಟ್ ಮಂಡಿಸಿ ರೈತರ ನೆರವಿಗೆ ಜೆಡಿಎಸ್ ಧಾವಿಸಲಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *