Headlines

ಸಾಲಬಾಧೆಗೆ ಹೆದರಿ ವಿಷ ಸೇವಿಸಿ ಯುವ ರೈತ ಆತ್ಮಹತ್ಯೆ :

ಸೊರಬ: ಸಾಲಬಾಧೆಗೆ ಯುವ ರೈತನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ತಾಲೂಕಿನ ಹಿರೇಕಸವಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ. ಗ್ರಾಮದ ಎಚ್.ಕೆ. ಮಹೇಶ್ (38) ಆತ್ಮಹತ್ಯೆಗೆ ಶರಣಾದ ಯುವ ರೈತ. ಅಕಾಲಿಕ ಮಳೆಯಿಂದಾಗಿ ನಿರೀಕ್ಷೆಗಿಂತ ಕಡಿಮೆ ಬೆಳೆ ಬಂದ ಹಿನ್ನೆಲೆ ಸುಮಾರು ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಮುಸುಕಿನ ಜೋಳದ ಬೆಳೆ ನಷ್ಟವಾಗಿತ್ತು. ಸಹಕಾರಿ ಸಂಘವೊಂದರಲ್ಲಿ 80 ಸಾವಿರ ರೂ., ಹಾಗೂ ಕೈಗಡವಾಗಿ ಸುಮಾರು 2 ಲಕ್ಷ ರೂ., ಸಾಲ ಮಾಡಿಕೊಂಡಿದ್ದನು ಎಂದು ತಿಳಿದು ಬಂದಿದ್ದು, ಬೆಳೆ…

Read More

ಬೈಂದೂರು – ರಾಣೆಬೆನ್ನೂರು ದ್ವಿಪಥ ರಸ್ತೆ ನಿರ್ಮಾಣ : ಸಂಸದ ಬಿ ವೈ ರಾಘವೇಂದ್ರ…. ಸಂಪೆಕಟ್ಟೆಯಿಂದ – ಹೊಸನಗರದ ಮಾವಿನಕೊಪ್ಪ ವೃತ್ತಕ್ಕೆ ಬೈಪಾಸ್ ರಸ್ತೆ :

ಬೈಂದೂರು-ರಾಣೆಬೆನ್ನೂರು ರಸ್ತೆ ಹಾಗೂ ಶಿಕಾರಿಪುರ ಪಟ್ಟಣದ ಬೈಪಾಸ್ ರಸ್ತೆ ನಿರ್ಮಾಣವಾಗಲಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು. ಸುಮಾರು 203 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ 766(2) ಬೈಂದೂರು – ರಾಣೇ ಬೆನ್ನೂರು ರಸ್ತೆ ರಾಜ್ಯದ ಮಧ್ಯ ಭಾಗ ಹಾಗು ಕರಾವಳಿ ಭಾಗವನ್ನು ಸಂಪರ್ಕಿಸುವ ಏಕಪಥ ಹಾಗೂ ಮದ್ಯಂತರ ಪಥದ ರಸ್ತೆಗಳಾಗಿವೆ. ಇವುಗಳನ್ನು ದ್ವಿಪಥ ರಸ್ತೆಯನ್ನಾಗಿ ಅಭಿವೃದ್ಧಿಗೊಳಿಸಲು ಕೋರಿದ ಫಲವಾಗಿ ಕೊಲ್ಲೂರು ಪಟ್ಟಣ, ನಾಗೋಡಿ, ಜಯನಗರದಿಂದ ಹೊಸನಗರ ಬಟ್ಟೆ ಮಲ್ಲಪ್ಪದಿಂದ ಯಡೇಹಳ್ಳಿ, ಕಿಟ್ಟದ ಹಳ್ಳಿಯಿಂದ ಮಾಸೂರು ರಟ್ಟಿ…

Read More

ಕಿಮ್ಮನೆ ರತ್ನಾಕರ್ ಗೆ ಕಾಂಗ್ರೆಸ್ ಸಮಾವೇಶದಲ್ಲಿ ಅವಮಾನ…?!!!!! ಜಿಲ್ಲಾ ಕಾಂಗ್ರೆಸ್ ನ ಗುಂಪುಗಾರಿಕೆಗೆ ಕಿಮ್ಮನೆ ಬೆಂಬಲಿಗರ ಆಕ್ರೋಶ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಅಸಮಾಧಾನ ಇದೀಗ ರಾಜ್ಯ ನಾಯಕರ ಅಂಗಳಕ್ಕೆ ತಲುಪಿದೆ.ತೀರ್ಥಹಳ್ಳಿ ಕ್ಷೇತ್ರದಲ್ಲಿದ್ದ ಅಸಮಾಧಾನ, ಭಿನ್ನಮತ ಇದೀಗ ಜಿಲ್ಲಾ ನಾಯಕತ್ವದಲ್ಲೂ ಹೊರ ಬಿದ್ದಿದೆ.  ನಡೆದಿದ್ದೇನು?? ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ತೀರ್ಥಹಳ್ಳಿಯ ಗುಡ್ಡೆಕೊಪ್ಪದಿಂದ ಶಿವಮೊಗ್ಗಕ್ಕೆ ಪಾದಯಾತ್ರೆ ನಡೆಸಿ ಸಾವಿರಾರು ಕಾರ್ಯಕರ್ತರೊಂದಿಗೆ  ಶಿವಮೊಗ್ಗದ ಸಮಾವೇಶಕ್ಕೆ ಹಾಜರಾಗಿದ್ದರು. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರಾರು ಮಂದಿ ಕಾರ್ಯಕರ್ತರು ಬಂದಿದ್ದರು. ಸಭಾ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿಕೆ ಶಿವಕುಮಾರ್, ನಾಯಕರಾದ ಹರಿಪ್ರಸಾದ್, ಕಾಗೋಡು ತಿಮ್ಮಪ್ಪ, ಕಿಮ್ಮನೆ, ಮಂಜುನಾಥ ಗೌಡ, ಸುಂದರೇಶ್ ಇತರರು…

Read More

ಮೇ 13 ರಿಂದ ಹೊಸನಗರ ತಾಲೂಕಿನ ನಗರ ಮಾಅಸುಂಷಾ ವಲಿಯುಲ್ಲಾ ದರ್ಗಾದಲ್ಲಿ ಉರೂಸ್ ಸಮಾರಂಭ :

ಹೊಸನಗರ: ತಾಲೂಕಿನ ಐತಿಹಾಸಿಕ ಬಿದನೂರು ನಗರದ ಶಾಂತಿಕೆರೆ ಸಮೀಪ ಇರುವ ಹಜರತ್ ಶೇಖುಲ್‌ಅಕ್ಬರ್‌ಅನ್ವರ್ ಮಾಅಸುಂಷಾ ವಲೀಯುಲ್ಲಾ ದರ್ಗಾದ 48ನೇ ಉರೂಸ್ ಸಮಾರಂಭ ಮೇ 13ರಿಂದ ಪ್ರಾರಂಭಗೊಳ್ಳಲಿದೆ ಎಂದು ದರ್ಗಾ ಸಮಿತಿ ಸದಸ್ಯ ಅರ್ ಎ ಚಾಬುಸಾಬ್ ತಿಳಿಸಿದರು. ನಗರದ ದರ್ಗಾ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೇ 13ರಂದು ನಗರ ವೆಂಕಟರಮಣಉಡುಪ ನೇತೃತ್ವದಲ್ಲಿ ಚಾಲನೆಗೊಳ್ಳಲಿರುವ ಉರೂಸ್‌ನ್ನು ಕಾರ್ಗಲ್‌ನ ಜನಾಬ್ ಎಸ್.ಇ.ಸಿರಾಜ್ ತಂಗಳ್ ಉದ್ಘಾಟಿಸಲಿರುವರು. ಮೇ 14ರಂದು ಮಗರಿಬ್ ನಮಾಜ್ ಬಳಿಕ ಮೌಲೂದ್, ಸಲಾತ್‌ ನಡೆಯಲಿದ್ದು, ಧಾರ್ಮಿಕ…

Read More

ಬೆಳದಿಂಗಳ ಬಾಲೆಯ ಬೆನ್ನತ್ತಿ ಹೋಗಿ ಹಣ ಕಳೆದುಕೊಂಡ ಯುವಕ : ಸಾಮಾಜಿಕ ಜಾಲತಾಣದ ಮನ್ಮಥರು ನೋಡಲೇಬೇಕಾದ ಸ್ಟೋರಿ!!!!!

ಇನ್ ಸ್ಟಾ‌ಗ್ರಾಮ್ ನಲ್ಲಿ ಪರಿಚಯವಾದ ಬೆಳದಿಂಗಳ ಬಾಲೆಯೊಬ್ಬಳು ತನ್ನ‌ ಬೇಡಿಕೆ ಈಡೇರಿಕೆಗಾಗಿ ಸಹಚರರ ಮೂಲಕ ಸೊರಬ ತಾಲೂಕು ಕ್ಯಾಸನೂರು ಗ್ರಾಮ ಉಮಟೆಗದ್ದೆ ನಿವಾಸಿ ವಿದ್ಯಾರ್ಥಿಗೆ ಬ್ಲಾಕ್ ಮೇಲ್ ಮಾಡಿ, ಹಣ ಕಿತ್ತುಕೊಂಡು ವಂಚಿಸಿರುವ ಘಟನೆ ನಿಧಾನವಾಗಿ ಬೆಳಕಿಗೆ ಬಂದಿದೆ. ಸಾಗರದ ಸಂಜಯ್ ಮೆಮೋರಿಯಲ್ ಡಿಪ್ಲಮೋ ಕಾಲೇಜಿನಲ್ಲಿ ಪ್ರಥಮ ವರ್ಷದ ತರಗತಿಯ ವಿವೇಕ್ ಎಂಬ ಯುವಕನಿಗೆ ಇನ್ಸ್ಟಾ ಗ್ರಾಮ್ ನಲ್ಲಿ ಅಣಲೇಕೊಪ್ಪದ ಸೌಜನ್ಯ ಎಂಬ ಯುವತಿ ಹಾಯ್ ಎಂಬ ಮೆಸೇಜ್ ಕಳುಹಿಸುವ ಮೂಲಕ ಪರಿಚಿತಳಾಗುತ್ತಾಳೆ. ಇಬ್ಬರು ಪರಸ್ಪರ ಮೊಬೈಲ್ ನಲ್ಲಿ…

Read More

ಹೆಂಡತಿಯ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರ : ಪೊಕ್ಸೊ ಕಾಯ್ದೆಯಡಿ ಆರೋಪಿಯ ಬಂಧನ

ಸಾಗರ : ಹೆಂಡತಿಯ ಅಪ್ರಾಪ್ತ ತಂಗಿಯನ್ನು ಗರ್ಭಿಣಿಯನ್ನಾಗಿಸಿದ ಆರೋಪದ ಮೇಲೆ ಸಾಗರ ತಾಲೂಕಿನ ನಿವಾಸಿಯೋರ್ವನನ್ನು ಪೊಲೀಸರು ಬಂಧಿಸಿದ್ದಾರೆ. ವಿಶ್ವ ಬಂಧಿತ ಆರೋಪಿ. 17 ವರ್ಷದ ಬಾಲಕಿಯನ್ನು ಗರ್ಭಿಣಿಯನ್ನಾಗಿಸಿದ್ದ ಈತನ ವಿರುದ್ಧ ಪೊಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯು ಸಾಗರ ತಾಲೂಕಿನ ಮಹಿಳೆಯನ್ನು ಪ್ರೀತಿಸಿ ಮದುವೆಯಾಗಿದ್ದ. ಈ ಮಹಿಳೆಗೆ ತಂದೆ ಇಲ್ಲದ ಕಾರಣ, ಆಕೆಯ ತಾಯಿ ಹಾಗೂ ಆಕೆಯ ತಂಗಿಯನ್ನು ಆರೋಪಿ ತನ್ನ ಮನೆಗೆ ಕರೆಸಿಕೊಂಡಿದ್ದ. ಎಲ್ಲರೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಹೆಂಡತಿಯ ತಂಗಿಯ ಜೊತೆ…

Read More

ಹೊಸನಗರ ತಾಲೂಕ್ ಜೆಡಿಎಸ್ ಅಧ್ಯಕ್ಷರಾಗಿ ಎನ್ ವರ್ತೇಶ್ ನೇಮಕ :

ಹೊಸನಗರ : ಜೆಡಿಎಸ್ ಪಕ್ಷದ ಹೊಸನಗರ ತಾಲೂಕು ಅಧ್ಯಕ್ಷರನ್ನಾಗಿ ರಿಪ್ಪನ್‌ಪೇಟೆಯ ಎನ್ ವರ್ತೇಶ್ ರವರನ್ನು ಇಂದಿನಿಂದಲೇ ಜಾರಿಗೆ ಬರುವಂತೆ  ಜೆಡಿಎಸ್ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್ ನೇಮಕ ಮಾಡಿದ್ದಾರೆ. ರಿಪ್ಪನ್‌ಪೇಟೆಯ  ಎನ್ ವರ್ತೇಶ್ ಜೆಡಿಎಸ್ ನ ಹಿರಿಯ ಮುಖಂಡರಾಗಿದ್ದು ಹಲವಾರು ವರ್ಷಗಳಿಂದ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಜಿಲ್ಲಾ ಸಮಿತಿಯವರು ಸಂಘಟನಾ ಚತುರ ಎನ್ ವರ್ತೇಶ್ ರವರನ್ನು ತಾಲೂಕ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದರಿಂದ ತಾಲೂಕಿನ ಜೆಡಿಎಸ್ ಕಾರ್ಯಕರ್ತರಲ್ಲಿ ಹೊಸ ಹುಮ್ಮಸು ಮೂಡಿದೆ. ಎನ್ ವರ್ತೇಶ್ ರವರನ್ನು ಹೊಸನಗರ ತಾಲೂಕ್ ಜೆಡಿಎಸ್…

Read More

ಚಿಕ್ಕಮಗಳೂರಿನಲ್ಲಿ ನಡೆದ ಡರ್ಟಿಪ್ರಿಕ್ಸ್ ಆಟೋಕ್ರಾಸ್ ರ‍್ಯಾಲಿಯಲ್ಲಿ ರಿಪ್ಪನ್‌ಪೇಟೆ ಯುವಕನ ಅದ್ವಿತೀಯ ಸಾಧನೆ :

ಭಾನುವಾರ ಚಿಕ್ಕಮಂಗಳೂರಿನ ಅಬ್ಲೇಜ್ ಮೋಟಾರ್ಸ್ ಸ್ಪೋರ್ಟ್ಸ್ ಕ್ಲಬ್ ಹಮ್ಮಿಕೊಂಡಿದ್ದ ಡರ್ಟಿಪ್ರಿಕ್ಸ್ ಆಟೋಕ್ರಾಸ್ ರ‍್ಯಾಲಿಯಲ್ಲಿ ರಿಪ್ಪನ್ ಪೇಟೆಯ ಯುವಕ ನಿತೀಶ್ ಎಂ ಗೌಡ ಅದ್ವಿತೀಯ ಪ್ರದರ್ಶನ ತೋರಿ ರನ್ನರ್ ಅಪ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾನೆ. ನಿತೀಶ್ ಎಂ ಗೌಡ ರಿಪ್ಪನ್ ಪೇಟೆಯ ಹೊಸನಗರ ರಸ್ತೆ ನಿವಾಸಿಗಳಾದ ಎಂ ಬಿ‌ ಮಂಜುನಾಥ್ ಮತ್ತು ಪ್ರವೀಣಿ ದಂಪತಿಗಳ ಪುತ್ರನಾಗಿದ್ದು ಕಾಫಿನಾಡಿನ ಜನ ಮೂಗಿನ ಮೇಲೆ ಬೆರಳಿಡುವಂತೆ ತನ್ನ ಪ್ರದರ್ಶನ ನೀಡಿ ಎಲ್ಲರ ಮನ ಗೆದ್ದಿದ್ದಾನೆ. ಇವರು ಬಾಲ್ಯದಿಂದಲೇ ದ್ವಿಚಕ್ರ ವಾಹನ ಗಳನ್ನುಓಡಿಸುವಲ್ಲಿ ಆಸಕ್ತಿ…

Read More

ಅಕ್ರಮ ಕಸಾಯಿಖಾನೆಯ ಮೇಲೆ ದಾಳಿ : 6 ಹಸುಗಳ ರಕ್ಷಣೆ

ಭದ್ರಾವತಿಯ ಬೊಮ್ಮನ್ ಕಟ್ಟೆಯ ತಿಮ್ಮಲಾಪುರ ರಸ್ತೆಯಲ್ಲಿರುವ ಕಸಾಯಿ ಖಾನೆ ಮೇಲೆ ಖಾಸಗಿ ಎನ್ ಜಿಒ(NGO) ಸ್ವಯಂ ಸೇವಕರೊಬ್ಬರು ದಾಳಿ ನಡೆಸಿದ್ದು ದಾಳಿಯಲ್ಲಿ 6 ಗೋವುಗಳನ್ನ ರಕ್ಷಿಸಲಾಗಿದೆ. ನಾಲ್ವರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ. ಹಾಸನದ ಖಾಸಗಿ ಎನ್ ಜಿಒ(NGO) ದಲ್ಲಿ ಕೆಲಸ ಮಾಡುತ್ತಿರುವ ಸ್ವಯಂ ಸೇವಕ ತಿಮ್ಮರಾಜು ಎಂಬುವವರು ದಿಟ್ಟವಾಗಿ ಈ ಅಕ್ರಮ ಗೋ ಮಾಂಸ ಮಾರಾಟದ ಅಡ್ಡದ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಗೋ ಮಾಂಸವನ್ನು ಮಾರಾಟ ಮಾಡುತಿದ್ದ ಮಳಿಗೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ…

Read More

ಪಾಗಲ್ ಪ್ರೇಮಿಯೊಬ್ಬನ ಕಿರುಕುಳಕ್ಕೆ ಬೇಸತ್ತ ಅಂತಿಮ ಬಿಕಾಂ ವಿದ್ಯಾರ್ಥಿನಿ ವಿಷ ಸೇವಿಸಿ ಆತ್ಮಹತ್ಯೆ :

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ವಸವೆ ಗ್ರಾಮದ ಕುಂಟಿಗೆ ವಾಸಿಯಾದ ವಿದ್ಯಾಶ್ರೀ (21) ಎಂಬ ವಿದ್ಯಾರ್ಥಿನಿ ಪಾಗಲ್ ಪ್ರೇಮಿಯೊಬ್ಬನ ಕಾಟಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ವಸವೆ ಗ್ರಾಮದ ವಿದ್ಯಾಶ್ರೀ ಹೊಸನಗರ ಪಟ್ಟಣದ ಕೊಡಚಾದ್ರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಅವಳ ನೆರೆಮನೆಯಾತ  ಶಶಾಂಕ್ ಎಂಬಾತನು ಪ್ರತಿದಿನ ಕಾಲೇಜಿಗೆ ಹೋಗಿ ಬರುವಾಗ ತನ್ನನ್ನು ಪ್ರೀತಿಸುವಂತೆ ಹಾಗೂ ಮದುವೆಯಾಗುವಂತೆ ಪೀಡಿಸುತ್ತಿದ್ದ ಹಾಗೂ ಬೆದರಿಕೆ ಹಾಕುತ್ತಿದ್ದನು ಈ ಹಿನ್ನಲೆಯಲ್ಲಿ ಮನನೊಂದ ವಿದ್ಯಾಶ್ರೀ ಕಳೆದ ತಿಂಗಳು ಏಪ್ರಿಲ್…

Read More