ಹೆದ್ದಾರಿಪುರದಲ್ಲಿ ಪ್ರೋ ಲೀಗ್ ಕಬ್ಬಡ್ಡಿ ಪಂದ್ಯಾವಳಿ: ಗ್ರಾಮೀಣ –ಪ್ರತಿಭೆಯ ಕಾಳಜಿಗೆ ಪ್ರೋತ್ಸಾಹಿಸಿದ ಗ್ರಾಮಸ್ಥರು….!
ಈ ಶತಮಾನದ ಕ್ರೀಡೆ ಯಾವುದು ಎಂದರೆ ಗಲ್ಲಿಗಲ್ಲಿಗಳಲ್ಲಿ ಗೋಲಿ ಆಡುವ ಚಿಣ್ಣರಾದಿಯಾಗಿ ಕ್ರಿಕೆಟ್ ಎನ್ನುವ ಮಟ್ಟಿಗೆ ತನ್ನ ಕದಂಬ ಬಾಹು ಚಾಚಿದೆ ಕ್ರಿಕೆಟ್. ಆದರೆ ರಿಪ್ಪನ್‌ಪೇಟೆ ಸಮೀಪದ ಹೆದ್ದಾರಿಪುರ ಗ್ರಾಮದಲ್ಲಿ ಕಬ್ಬಡ್ಡಿಯೇ ತನ್ನ ಜೀವಾಳ ಎನ್ನುವ ಮಟ್ಟಿಗೆ ಬೆಳೆದ ಪ್ರತಿಭಾವಂತ ಆಟಗಾರರಿದ್ದಾರೆ. ಇದೇ ಗ್ರಾಮದ ಪ್ರತಿಭಾವಂತ ಕಬ್ಬಡಿ ಆಟಗಾರ ಸುಷ್ಮಂತ್‌ಗೆ ಕಬಡ್ಡಿ ಆಟವೇ ಆತನ ಎಡಗಾಲಿಗೆ ಮುಳುವಾಗಿ ಕಳೆದ ಎರಡು ವರ್ಷದಿಂದ ತನ್ನ ಒಂದು ಕಾಲನ್ನು ಕಳೆದುಕೊಂಡು ಮನೆಯಲ್ಲಿಯೇ ಕುಳಿತಿರುವ ಆತನ ತಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಎಲೆ…