ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರ ಆಣೆ ಪ್ರಮಾಣ ಪಂಥಾಹ್ವಾನಕ್ಕೆ ಶಾಸಕ ಹಾಲಪ್ಪರಿಂದ ಡೇಟ್ ಫಿಕ್ಸ್ : ಸವಾಲು ಸ್ವೀಕರಿಸುವರೇ ಮಾಜಿ ಶಾಸಕರು???
ಸಾಗರದಲ್ಲಿ ಆಣೆ ಪ್ರಮಾಣದ ರಾಜಕೀಯ ಮೇಲಾಟ ತಾರಕಕ್ಕೇರಿದ್ದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ರವರು ಶಾಸಕ ಹಾಲಪ್ಪ ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ, ತಾಕತಿದ್ದರೆ ಕಮೀಷನ್ ಪಡೆದಿಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಬಹಿರಂಗ ಸವಾಲಿಗೆ ಇಂದು ಪ್ರತಿಕ್ರಿಯಿಸಿರುವ ಶಾಸಕ ಹರತಾಳು ಹಾಲಪ್ಪ ಪ್ರಮಾಣ ಮಾಡುವ ದಿನಾಂಕವನ್ನು ಸಹ ಘೋಷಿಸಿದ್ದಾರೆ. ಹರತಾಳು ಹಾಲಪ್ಪನವರು ಮರಳು ಲಾರಿ ಮಾಲೀಕರಿಂದ ಕಮೀಷನ್ ಪಡೆದಿದ್ದಾರೆ ಎಂದು ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇವಸ್ಥಾನದಲ್ಲಿ ಪ್ರಮಾಣ…