POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ: ಗಾಂಜಾ ಸೇವಿಸಿ ಅಸಭ್ಯ ವರ್ತನೆ — ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಯುವಕರ ಬಂಧನ

IMG 20260219

Three youths were arrested by Ripponpete police in Shivamogga district for consuming ganja and behaving indecently in public places. Separate cases have been registered under the NDPS Act.

ರಿಪ್ಪನ್‌ಪೇಟೆ: ಗಾಂಜಾ ಸೇವಿಸಿ ಅಸಭ್ಯ ವರ್ತನೆ — ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಮೂವರು ಯುವಕರ ಬಂಧನ

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವಿಸಿ ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಮೂವರು ಯುವಕರನ್ನು ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಬಂಧಿಸಿದ್ದಾರೆ.

ಬಂಧಿತರನ್ನು ಮಲ್ಲಾಪುರ ನಿವಾಸಿ ಬಿಪಿನ್ ಬಿನ್ ಬಾಬು (26), ಆನಂದಪುರದ ಯಡೆಹಳ್ಳಿ ನಿವಾಸಿ ಜೊಸೇಫ್ ಬಿನ್ ಸಾಜಿ ಜೊಸೇಫ್ (24) ಹಾಗೂ ಪಟ್ಟಣದ ಸಮೀಪದ ಮಳವಳ್ಳಿ ಗ್ರಾಮದ ಗಣೇಶ್ ಬಿನ್ ಕೃಷ್ಣಪ್ಪ (28) ಎಂದು ಗುರುತಿಸಲಾಗಿದೆ.

ಪ್ರಕರಣ–1:

ಪಟ್ಟಣದ ಕುಕ್ಕಳಲೆ ಬಸ್ ನಿಲ್ದಾಣದ ಬಳಿ ಗಸ್ತು ಸಂಚರಿಸುತ್ತಿದ್ದ ಪೊಲೀಸರಿಗೆ ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಿಪಿನ್ ಕಂಡುಬಂದಿದ್ದಾನೆ. ವಿಚಾರಣೆ ವೇಳೆ ಮಾತು ತೊದಲುವಿಕೆ ಹಾಗೂ ಅಮಲು ಪದಾರ್ಥದ ವಾಸನೆ ಕಂಡುಬಂದ ಹಿನ್ನೆಲೆ ಕೂಲಂಕುಷವಾಗಿ ಪ್ರಶ್ನಿಸಿದಾಗ, ಬೀಡಿಗೆ ಗಾಂಜಾ ಸೇರಿಸಿ ಸೇವಿಸಿದ್ದಾಗಿ ಆತ ಒಪ್ಪಿಕೊಂಡಿದ್ದಾನೆ. ಬಳಿಕ ವೈದ್ಯಕೀಯ ತಪಾಸಣೆಗೆ ಮೆಗಾನ್ ಆಸ್ಪತ್ರೆಗೆ ಕಳುಹಿಸಲಾಯಿತಾಗ, ಗಾಂಜಾ ಸೇವನೆ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮಾದಕ ದ್ರವ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಕರಣ–2:

ಗವಟೂರು ಬಸ್ ನಿಲ್ದಾಣದ ಬಳಿ ಅಸಭ್ಯ ವರ್ತನೆ ನಡೆಸುತ್ತಿದ್ದ ಜೊಸೇಫ್‌ನನ್ನು ಪೊಲೀಸರು ಹಿಡಿದು ವಿಚಾರಣೆ ನಡೆಸಿದಾಗ, ಗಾಂಜಾ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ಪರೀಕ್ಷೆಯಲ್ಲಿ ಗಾಂಜಾ ಸೇವನೆ ದೃಢಪಟ್ಟಿದ್ದು, ಆತನ ವಿರುದ್ಧವೂ ಮಾದಕ ದ್ರವ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಪ್ರಕರಣ–3:

ಮಾವಿನಸರ ಬಸ್ ನಿಲ್ದಾಣದ ಬಳಿ ಅಸಭ್ಯವಾಗಿ ವರ್ತಿಸುತ್ತಿದ್ದ ಗಣೇಶ್‌ನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬೀಡಿಗೆ ಗಾಂಜಾ ಸೇರಿಸಿ ಸೇವಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ವೈದ್ಯಕೀಯ ತಪಾಸಣೆಯಲ್ಲಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೂರು ಪ್ರಕರಣಗಳೂ ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿವೆ.

ಸಾರ್ವಜನಿಕರಿಗೆ ಪೊಲೀಸ್ ಮನವಿ:

ರಿಪ್ಪನ್‌ಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗಾಂಜಾ ಸೇವನೆ ಅಥವಾ ಮಾರಾಟದ ಕುರಿತು ಮಾಹಿತಿ ಇದ್ದಲ್ಲಿ, ಸಾರ್ವಜನಿಕರು 9480803365 ಸಂಖ್ಯೆಗೆ ಕರೆ ಮಾಡಿ ತಿಳಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಮಾಹಿತಿದಾರರ ಗುರುತು ಸಂಪೂರ್ಣ ಗೌಪ್ಯವಾಗಿರುತ್ತದೆ ಎಂದು ತಿಳಿಸಿದ್ದಾರೆ.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.