ಬಿದರಹಳ್ಳಿಯಲ್ಲಿ ಮಗು ಸಮೇತ ತಾಯಿ ಆತ್ಮಹತ್ಯೆ ಪ್ರಕರಣ : ಅಮಾಯಕ ಮಗುವಿನ ಹತ್ಯೆಗೆ ಹೊಣೆ ಯಾರು……!?
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯಿತಿಯ ಬಿದರಹಳ್ಳಿ ಗ್ರಾಮದ ಸಮೀಪದ ಚಿಟ್ಟೆ ಗೆದ್ದೆಯ ಮುದ್ದುಮುಖದ ನಾಲ್ಕು ವರ್ಷದ ತನ್ವಿ ಎಂಬ ಪುಟ್ಟ ಮುದ್ದು ಕಂದಮ್ಮನ ಹತ್ಯೆಗೆ ಹೊಣೆ ಯಾರು. ಅಜ್ಜ-ಅಜ್ಜಿಯೋ?. ತಂದೆಯೋ? ಅಥವಾ ಲೋಕದ ಅರಿವಿಲ್ಲದ ಚಂದದ ಮುಗ್ಧ ಬಾಲಕಿಯನ್ನು ವೇಲಿನಿಂದ ಸೊಂಟಕ್ಕೆ ಕಟ್ಟಿ ಬಾವಿಗೆ ಹಾರಿದ ತಾಯಿ ವಿದ್ಯಾ ಕಾರಣವಾದರೆ ??? 2014 ರಲ್ಲಿ ಚಿಟ್ಟೆಗೆದ್ದೆ ಯ ಲೋಹಿತ ಎಂಬುವರೊಂದಿಗೆ ಮದುವೆಯಾಗಿದ್ದ ವಿದ್ಯಾ ಅತ್ತೆ ಮಾವ ಮತ್ತು ಗಂಡನ ಕಿರುಕುಳದಿಂದ ಬೇಸತ್ತು ಮೇಲಿನಿಂದ…