ಹೊಸನಗರ:- 03, ಇಂದು ಒಟ್ಟೂರು ಕೆರೆಯ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಭಿವೃದ್ಧಿ ಯೋಜನೆ, ಮೂಲೆಗದ್ದೆ ಮಠದ ಶ್ರೀಗಳಿಂದ, ಮಸೀದಿಯ ಗುರುಗಳು ಚರ್ಚ್ ನ ಫಾದರ್, ಸಾ,ರ ಸಂಸ್ಥೆ, ಪಟ್ಟಣ ಪಂಚಾಯಿತಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಹೂಳೆತ್ತುವ ರ್ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಚಾಲನೆ ನೀಡಿ ಮಾತನಾಡಿದ ತಾಲ್ಲೂಕಿನ ಮೂಲೆಗದ್ದೆ ಮಠದ ಶ್ರೀ ಮ,ನಿ,ಪ್ರಾ, ಚನ್ನಬಸವ ಮಹಾ ಸ್ವಾಮಿಗಳು ಮಾತನಾಡಿ. ಒಟ್ಟೂರ ಕೆರೆಯು ಸರ್ವ ಜನಾಂಗದ ಶಾಂತಿಯ ತೋಟವೆಂಬಂತ್ತೆ ಹಿಂದೂ, ಮುಸಲ್ಮಾನ್, ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳನ್ನೊಳಗೊಂಡ ಕೆರೆಯಾಗಿದೆ. ಈ ಕೆರೆಯ ಸುತ್ತ ದೇವಸ್ಥಾನ, ಮಸೀದಿ, ಚರ್ಚ್ ಗಳಿದ್ದು, ಸರ್ವ ಜನಾಂಗದವರಿಗೆ ಅನುಕೂಲಕರವಾಗುವಂತಹಾ ಕೆರೆಯಾಗಿದ್ದು, ಪಟ್ಟಣದ ಮಧ್ಯದಲ್ಲಿರುವ ಉತ್ತಮ ಒಟ್ಟೂರ ಕೆರೆಯಾಗಿದೆ. ಇದರ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಘ ಮತ್ತು ಪಟ್ಟಣದ ವಿವಿಧ ಜನರ ಧನಸಹಾಯದಿಂದ ಹೂಳೆತ್ತುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಈ ಹಿಂದೆ ಭೀಟಿ ಕೆರೆಯ ಅಭಿವೃದ್ಧಿಗೆ ಸ.ರಾ ಸಂಸ್ಥೆಯು 12 ಲಕ್ಷ ರೂಪಾಯಿ ಮೌಲ್ಯದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಆ ಕೆರೆಯು ಈಗ ಉತ್ತಮ ಸ್ಥಿತಿಯಲ್ಲಿದ್ದು, ಸ.ರಾ ಸಂಸ್ಥೆಯಿಂದ ಈ ಕೆರೆಯೂ ಸೇರಿ ಒಟ್ಟು 12 ಕೆರೆಗಳ ಅಭಿವೃದ್ಧಿಯಾಗಿದೆ. ಆಗಿನ ಜಿಲ್ಲಾದಿಕಾರಿಯಾದ ದಯಾನಂದ್ ರವರು 3 ಗ್ರಾಮಗಳನ್ನು ದತ್ತು ಪಡೆದು ಅಲ್ಲಿ ಕೆರೆಗಳನ್ನು ಅಭಿವೃದ್ಧಿ ಪಡಿಸಲು ತಿಳಿಸಿ ಗ್ರಾಮಗಳ ಅಭಿವೃದ್ಧಿಗೆ ಸಹಕಾರ ನೀಡಲು ತಿಳಿದ್ದರು. ಅದರಂತೆಯೇ ಸಹರಾ ಸಂಸ್ಥೆಯು 3 ಗ್ರಾಮಗಳನ್ನು ದತ್ತು ಪಡೆದು ಕೆರೆಗಳ ಹೂಳೆತ್ತುವುದರ ಮೂಲಕ ಅಭಿವೃದ್ಧಿ ಪಡಿಸಿದ್ದಾರೆ ಎಂದರು.
ಮಾನವರಾದ ನಾವುಗಳು ಸಂಸ್ಕ್ರತದಲ್ಲಿ ತಿಳಿಸಿದಂತೆ “ಅನ್ಯ ಕ್ಷೇತ್ರಂ, ಕೃತಂ ಪಾಪಂ, ಪುಣ್ಯ ಕ್ಷೇತ್ರೇ, ವಿನಶ್ಯತಿ, ಪುಣ್ಯ ಕ್ಷೇತ್ರೇ ಕೃತಂ ಪಾಪಂ, ವಜ್ರ ಲೇಪೆ ಭವಿಷ್ಯತೀ” ಎಂಬಂತೆ ಅನ್ಯ ಕ್ಷೇತ್ರದಲ್ಲಿ ಮಾಡಿರುವಂತಹ ಪಾಪಗಳನ್ನ ಪುಣ್ಯ ಕ್ಷೇತ್ರಗಳಲ್ಲಿ ಕಳೆದುಕೊಳ್ಳಬೇಕು, ಹಾಗೇ ಪುಣ್ಯ ಕ್ಷೇತ್ರದಲ್ಲಿ ಮಾಡಿದ ಪಾಪವನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ.ಹಾಗೇನಾದರೂ ಪುಣ್ಯ ಕ್ಷೇತ್ರದಲ್ಲಿ ಮಾಡಿದ ಪಾಪವನ್ನು ಕಳೆದು ಕೊಳ್ಳಬೇಕೆಂದರೆ ಕೆರೆಗಳನ್ನು ಕಟ್ಟುವುದರ ಮೂಲಕ ಅಥವಾ ಅದಕ್ಕೆ ಧನಸಹಾಯ ಮಾಡುವುದರ ಮೂಲಕ ಪಾಪಗಳನ್ನು ಕಳೆದುಕೊಳ್ಳ ಬಹುದು ಎಂದರು.
ಹಿಂದಿನ ಕಾಲದಲ್ಲಿ ವೈಶ್ಯಯರು ಸೇರಿದಂತೆ ಅನೇಕರು ತಾವು ಮಾಡಿದ ಪಾಪಗಳನ್ನು ಕಳೆದುಕೊಳ್ಳಲು ಕೆರೆಯನ್ನು ಕಟ್ಟಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಉದಾಹರಣೆಯಾಗಿ ಚನ್ನಗಿರಿ ಬಳಿ ಇರುವ ಸೂಳೆ ಕೆರೆಯೂ ಮುಖ್ಯ ಉದಾಹರಣೆಯಾಗಿದೆ,
ವೇಶ್ಯೆಯರು ಇಡೀ ದೇಶದಲ್ಲಿ 41 ಸಾವಿರ ಕೆರೆಗಳನ್ನು ಅವರ ಪಾಪಗಳನ್ನು ಕಳೆದುಕೊಳ್ಳಲು ಕಟ್ಟಿಸಿದ್ದಾರೆ ಇದು ಇತಿಹಾಸ ಪ್ರಸಿದ್ದವಾಗಿದೆ ಎಂದು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕಿ ಗೀತಾ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ರಾಜ್ಯದ ಹಲವೆಡೆ ಗ್ರಾಮಗಳ ಅಭಿವೃದ್ಧಿ ಪಡಿಸುವ ಸದುದ್ದೇಶದಿಂದ ಅಲ್ಲಿಯ ಕೆರೆಗಳ ಹೂಳೆತ್ತುವ ಮೂಲಕ ಅಭಿವೃದ್ಧಿ ಪಡಿಸಲಾಗುತ್ತಿದೆ. ಈ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೇವಲ ಕೆರೆಗಳನ್ನು ಅಭಿವೃದ್ಧಿ ಪಡಿಸುವುದಲ್ಲದೇ, ಮಹಿಳೆಯರ ಮೂಲಕ ಸ್ವ ಸಹಾಯ ಸಂಘಗಳ ರಚನೆ ಮಾಡಿ ಅತ್ಯಂತ ಕಡು ಬಡವರಿಗೆ ಧನ ಸಹಾಯ ಮಾಡುವುದಲ್ಲದೇ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ. ಅದೇ ರೀತಿ ಗ್ರಾಮೀಣ ಪ್ರದೇಶಗಳಲ್ಲಿ “ಕ್ಲೋ ರೈಡ್ ಯುಕ್ತ” ನೀರುಗಳಿದ್ದರೆ ಅದನ್ನು ಶುದ್ಧೀಕರಿಸುವುದರ ಮೂಲಕ ಗ್ರಾಮಸ್ಥರಿಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ. ಅಲ್ಲದೇ ಜ್ಞಾನ ವಿಕಾಸ ಯೋಜನೆ ಜಾರಿಗೆ ತಂದು ಅನೇಕರಿಗೆ ಸ್ವಾಲಂಬಿ ಬದುಕನ್ನು ಕಟ್ಟಿಕೊಡುತ್ತಿದೆ ಹೀಗೆ ರಾಜ್ಯಾದ್ಯಂತ ಅನೇಕ ರೀತಿಯಾ ಬೇರೆ ಬೇರೆ ಯೋಜನೆಗಳನ್ನು ಜಾರಿಗೆ ತಂದು ಜನತೆಗೆ ಸಹಾಯ ಹಸ್ತ ನೀಡುತ್ತಿದೆ ಎಂದು ತಿಳಿಸಿದರು.
ಒಟ್ಟೂರು ಕೆರೆಯ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹಾಗೂ ಪುರ ಪಂಚಾಯಿತಿ ಸದಸ್ಯ ಅಶ್ವಿನಿ ಕುಮಾರ್ ಮಾತನಾಡಿ ಪಟ್ಟಣದ ಮಧ್ಯ ಭಾಗದಲ್ಲಿ ನಿರ್ಮಿಸಿರುವ ಒಟ್ಟೂರ ಕೆರೆಯು ಇತಿಹಾಸ ಪ್ರಸಿದ್ಧವಾಗಿರುವ ಕೆರೆಯಾಗಿದೆ. ಈ ಕೆರೆಯ ಮೂಲ ಹೆಸರು ಒಟ್ಟೂರ ಕೆರೆ ಎಂದೇ ಸುಪ್ರಸಿದ್ಧವಾಗಿದ್ದು, ಇತ್ತೀಚಿನ ದಿನಗಳಲ್ಲಿ ಅನೇಕರ ನಿರ್ಲಕ್ಷ್ಯ ದಿಂದ “ಹೊಟ್ಟು ಕೆರೆ ” ಎಂದು ಕರೆಯಲಾಗುತ್ತಿದೆ.
ಈ ಕೆರೆಯ ಜೀರ್ಣೋದ್ಧಾರಕ್ಕಾಗಿ ಹಲವು ವರ್ಷಗಳಿಂದ ಸ.ರಾ ಸಂಸ್ಥೆಯ ಮುಖ್ಯಸ್ಥರಾದ ಏಸು ಪ್ರಕಾಶ್ ಮತ್ತು ಧನುಷ್ ಸೇರಿದಂತೆ ಅನೇಕರ ಬಳಿ ಈ ಕೆರೆಯ ಅಭಿವೃದ್ಧಿಯ ಬಗ್ಗೆ ಚರ್ಚಿಸಲಾಗಿತ್ತು, ಆಗ ಈ ಕೆರೆಯ ಹೂಳೆತ್ತುವುದು ಮತ್ತು ಸುತ್ತ ಜನರು ಓಡಾಡುವಂತೆ ಅಭಿವೃದ್ಧಿ ಪಡಿಸಲು ಚಿಂತನೆ ನಡೆದಿತ್ತು. ಈಗ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಸ,ರಾ ಸಂಸ್ಥೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳಿಂದ ಮತ್ತು ಊರಿನ ಜನತೆಯಿಂದ ಸಹಕಾರ ಪಡೆದು ಈ ಕೆರೆಯ ಅಭಿವೃದ್ಧಿಗೆ ಕೈ ಜೋಡಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ 5 ಲಕ್ಷ ರೂಪಾಯಿ ನೆರವು ಮತ್ತು ಸ,ರಾ ಸಂಸ್ಥೆ ಮತ್ತು ಪಟ್ಟಣದ ಅನೇಕರ ಸಹಾಯದೊಂದಿಗೆ ಸುಮಾರು 5 ಲಕ್ಷ ರೂಪಾಯಿ ಗಳನ್ನು ಒಗ್ಗೂಡಿಸಿ ಈ ಕೆರೆಯ ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದ ಅವರು, ಒಂದು ಕೆರೆಯನ್ನು ಕಟ್ಟಿಸಿದರೆ 400 ದೇವಾಲಯಗಳನ್ನು ಕಟ್ಟಿಸಿದ ಪುಣ್ಯ ಲಭಿಸುವುದು ಎಂಬಂತೆ ಒಟ್ಟೂರ ಕೆರೆಯನ್ನು ಕಟ್ಟಿಸಲು ಸಹಾಯ ಹಸ್ತ ನೀಡಿದವರಿಗೆ ಪುಣ್ಯ ಲಭಿಸುವುದು ಎಂದು ತಿಳಿಸಿದರು.
ಈ ಸಂಧರ್ಭದಲ್ಲಿ ಹೊಸನಗರದ ಮಸೀದಿಯ ಮುಖ್ಯ ಗುರುಗಳಾದ ಬದ್ರುದ್ದಿನಿ ಸಖಾಫಿ,ಶಾದಾಫ್ ಮಹಮ್ಮದಿಯ ಎ ಮಸ್ದೀದ್, ಸಂತ ಅಂತೋನಿ ದೇವಾಲಯ ಹೊಸನಗರದ ಫಾಧರ್ ಜಾನ್ಸನ್ ಡಿಮೇಲ್ಲೋ ರವರು ಮುಖ್ಯ ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಪುರ ಪಂಚಾಯಿತಿ ಅಧ್ಯಕ್ಷೆ ಗುಲಾಬಿ ಮರಿಯಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲ್ಲೂಕು ಯೋಜನಾಧಿಕಾರಿ ಬೇಬಿ, ಇಂಜಿನಿಯರ್ ಗಣಪತಿ, ಸೂಪರ್ ವೈಸರ್ ರಮೇಶ್, ಈ.ಇ.ಓ ಪ್ರವೀಣ್ ಕುಮಾರ್,ಜೆಸಿಐ ಹೊಸನಗರ ಕೊಡಚಾದ್ರಿ, ಅಧ್ಯಕ್ಷರು, ಸೀಮಾ ಕಿರಣ್. ನೋರಾ ಮೆಟಲ್ಡಾ,ನಾಸಿರ್
ಮತ್ತು ಚೇತನ್ ದಾಸ್ ಹೊಸಮನೆ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ :- ಪುಷ್ಪಾ ಜಾಧವ್.