Headlines

ಬಿದರಹಳ್ಳಿಯಲ್ಲಿ ಮಗು ಸಮೇತ ತಾಯಿ ಆತ್ಮಹತ್ಯೆ ಪ್ರಕರಣ : ಅಮಾಯಕ ಮಗುವಿನ ಹತ್ಯೆಗೆ ಹೊಣೆ ಯಾರು……!?

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಅಮೃತ ಗ್ರಾಮ ಪಂಚಾಯಿತಿಯ ಬಿದರಹಳ್ಳಿ ಗ್ರಾಮದ ಸಮೀಪದ ಚಿಟ್ಟೆ ಗೆದ್ದೆಯ ಮುದ್ದುಮುಖದ ನಾಲ್ಕು ವರ್ಷದ  ತನ್ವಿ ಎಂಬ ಪುಟ್ಟ ಮುದ್ದು ಕಂದಮ್ಮನ ಹತ್ಯೆಗೆ ಹೊಣೆ ಯಾರು. ಅಜ್ಜ-ಅಜ್ಜಿಯೋ?. ತಂದೆಯೋ?  ಅಥವಾ ಲೋಕದ ಅರಿವಿಲ್ಲದ ಚಂದದ ಮುಗ್ಧ ಬಾಲಕಿಯನ್ನು ವೇಲಿನಿಂದ ಸೊಂಟಕ್ಕೆ ಕಟ್ಟಿ ಬಾವಿಗೆ ಹಾರಿದ ತಾಯಿ ವಿದ್ಯಾ ಕಾರಣವಾದರೆ ??? 2014 ರಲ್ಲಿ ಚಿಟ್ಟೆಗೆದ್ದೆ ಯ ಲೋಹಿತ ಎಂಬುವರೊಂದಿಗೆ ಮದುವೆಯಾಗಿದ್ದ  ವಿದ್ಯಾ ಅತ್ತೆ ಮಾವ ಮತ್ತು ಗಂಡನ ಕಿರುಕುಳದಿಂದ ಬೇಸತ್ತು ಮೇಲಿನಿಂದ…

Read More

ಹೊಸನಗರದ ಒಟ್ಟೂರ ಕೆರೆಯು ಸರ್ವ ಜನಾಂಗದ ಶಾಂತಿಯ ತೋಟವೆಂಬಂತ್ತೆ ಹಿಂದೂ,ಮುಸಲ್ಮಾನ್,ಕ್ರೈಸ್ತ ಸೇರಿದಂತೆ ವಿವಿಧ ಧರ್ಮಗಳನ್ನೊಳಗೊಂಡ ಕೆರೆಯಾಗಿದೆ : ಮೂಲೆಗದ್ದೇ ಶ್ರೀಗಳು

ಹೊಸನಗರ:- 03, ಇಂದು ಒಟ್ಟೂರು ಕೆರೆಯ ಅಭಿವೃದ್ಧಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಭಿವೃದ್ಧಿ ಯೋಜನೆ, ಮೂಲೆಗದ್ದೆ ಮಠದ ಶ್ರೀಗಳಿಂದ, ಮಸೀದಿಯ ಗುರುಗಳು ಚರ್ಚ್ ನ ಫಾದರ್, ಸಾ,ರ ಸಂಸ್ಥೆ, ಪಟ್ಟಣ ಪಂಚಾಯಿತಿ, ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಹೂಳೆತ್ತುವ ರ್ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.  ಚಾಲನೆ ನೀಡಿ ಮಾತನಾಡಿದ ತಾಲ್ಲೂಕಿನ ಮೂಲೆಗದ್ದೆ ಮಠದ ಶ್ರೀ ಮ,ನಿ,ಪ್ರಾ, ಚನ್ನಬಸವ ಮಹಾ ಸ್ವಾಮಿಗಳು ಮಾತನಾಡಿ. ಒಟ್ಟೂರ ಕೆರೆಯು ಸರ್ವ ಜನಾಂಗದ ಶಾಂತಿಯ ತೋಟವೆಂಬಂತ್ತೆ ಹಿಂದೂ, ಮುಸಲ್ಮಾನ್, ಕ್ರೈಸ್ತ ಸೇರಿದಂತೆ ವಿವಿಧ…

Read More

ವಿವಾಹಿತ ಮಹಿಳೆ ನಾಪತ್ತೆ : ಸುಳಿವು ಪತ್ತೆಗೆ ಮನವಿ

2021 ರ ಏಪ್ರಿಲ್ 13 ರಂದು ಅನುಷಾ ಕೋಂ ಆನಂದ, 26 ವರ್ಷ, ಗೃಹಿಣಿ ಈಕೆ ನಗರದ ಹೊಸಮನೆ 06 ನೇ ಕ್ರಾಸ್‍ನಲ್ಲಿರುವ ತನ್ನ ನಿವಾಸದಿಂದ ಕಾಣೆಯಾಗಿರುತ್ತಾರೆ.       ಅಂದು ರಾತ್ರಿ 8 ಗಂಟೆ ಹೊತ್ತಿಗೆ ಮನೆಯಿಂದ ಹೊರಗೆ ಹೋದವಳು ಹಿಂತಿರುಗಿ ಬಂದಿರುವುದಿಲ್ಲ. ಅಕ್ಕ ಪಕ್ಕ, ನೆಂಟರ ಮನೆ ಹೀಗೆ ಎಲ್ಲೆಡೆ ಹುಡುಕಿದರೂ ಪತ್ತೆಯಾಗಿರುದಿಲ್ಲ. ಕಾಣೆಯಾದ ಮಹಿಳೆ ಅನುಷಾ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ ಹೊಂದಿದ್ದು, ಕಾಣೆಯಾದ…

Read More

ಚಲಿಸುವ ಬಸ್ಸನ್ನು ಓಡಿಹೋಗಿ ಹತ್ತಲು ಹೋಗಿ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ : ವಿಡಿಯೋ ಈಗ ವೈರಲ್

ಚಲಿಸುವ ಬಸ್ಸನ್ನು ಓಡಿಹೋಗಿ ಹತ್ತಲು ಹೋಗಿ ಬಸ್ ನಿಂದ ವಿದ್ಯಾರ್ಥಿಯೋರ್ವ ಕೆಳಗೆ ಬಿದ್ದ ವಿಡಿಯೋ ಈಗ ವೈರಲ್ ಆಗಿದೆ. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಕಾರ್ಗಲ್ ಪಟ್ಟಣದಲ್ಲಿ ಈ ಘಟನೆ  ನಡೆದಿದ್ದು, ಬಸ್ ನಿಲ್ದಾಣದಿಂದ ಹೊರಟ ಬಸ್ಸನ್ನು ಓಡಿ ಹೋಗಿ ಹತ್ತಲು ವಿದ್ಯಾರ್ಥಿ ಯತ್ನಿಸಿದ್ದಾನೆ. ಆದರೆ ಬಸ್ಸು ಸ್ಪೀಡ್ ಇದ್ದಿದ್ದರಿಂದ ವಿದ್ಯಾರ್ಥಿಗೆ ಹತ್ತಲು ಸಾಧ್ಯವಾಗದೆ ಕೆಳಗೆ ಬಿದ್ದಿದ್ದಾನೆ. ಕಾರ್ಗಲ್ ನ ಇಡುವಾಣಿಯ ಚಿಪ್ಪಲಮಕ್ಕಿಯ ಒಂಭತ್ತನೇ ತರಗತಿ ವಿದ್ಯಾರ್ಥಿ ವೈಭವ್ ಎಂಬಾತ ಬಸ್ ನಿಂದ ಕೆಳಗೆ ಬಿದ್ದ ವಿದ್ಯಾರ್ಥಿ….

Read More

ರಿಪ್ಪನ್ ಪೇಟೆ ಸಮೀಪದ ಬಿದರಹಳ್ಳಿಯಲ್ಲಿ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ :

ರಿಪ್ಪನ್ ಪೇಟೆ : ತಾಯಿ ತನ್ನ ಮಗುವಿನ ಜತೆ ಬಿದರಹಳ್ಳಿಯ ತನ್ನ ಮನೆಯ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಹೊಸನಗರ ತಾಲೂಕಿನ ಬಿದರಹಳ್ಳಿಯ ನಿವಾಸಿ ವಿದ್ಯಾ(32) ಮಗಳು ತನ್ವಿ(4) ಜೊತೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಗುರುವಾರ ಬೆಳಗಿನ ಜಾವ ವಿದ್ಯಾ ಮಗುವಿನೊಂದಿಗೆ ಬಾವಿಗೆ ಹಾರಿದ್ದಾರೆ.ಇಂದು ಬೆಳಿಗ್ಗೆ ಮೃತ ದೇಹ ಪತ್ತೆಯಾಗಿದೆ. ಹೊಸನಗರದ ಅಗ್ನಿಶಾಮಕ ಸಿಬ್ಬಂದಿ ಭೀಷ್ಮಚಾರಿ 50 ಅಡಿ ಆಳದ ಬಾವಿಗೆ ಇಳಿದು ಎರಡು ಮೃತದೇಹಗಳನ್ನು ಹೊರತೆಗೆದಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಾಗಿದೆ. ರಿಪ್ಪನ್…

Read More

ಕಾರಿಗೆ ಅಡ್ಡ ಬಂದ ಹಾವು ತಪ್ಪಿಸಲು ಹೋಗಿ ಚಾನೆಲ್ ಗೆ ಇಳಿದ ಕಾರು : ಒಬ್ಬರ ಸಾವು

ಕಾರಿಗೆ ಅಡ್ಡ ಬಂದ ಹಾವನ್ನು ತಪ್ಪಿಸಲು ಹೋಗಿ ತುಂಗಾ ಚಾನೆಲ್ ಗೆ ಕಾರು ಬಿದ್ದು  ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ವಿವಾಹಿತ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಇಂದು ಬೆಳಗ್ಗಿನ ಜಾವ 2 ಗಂಟೆಯ ಸಮಯದಲ್ಲಿ ಸಂಭವಿಸಿದೆ. ಗಾಜನೂರಿನ ನವೋದಯ ಶಾಲೆಯ ಗೇಟ್ ಕೀಪರ್ ಆಗಿ ಕೆಲಸ ಮಾಡುತ್ತಿದ್ದ ಸುಷ್ಮ.ಇ(28) ಮೃತ ದುರ್ಧೈವಿ. ಸುಷ್ಮ ಮತ್ತು ಪತಿ ಚೇತನ್ ಕುಮಾರ್ ತುಮಕೂರಿನಲ್ಲಿರುವ ಅತ್ತೆಗೆ (ಚೇತನ್ ತಾಯಿಗೆ) ಎದೆ ನೋವು ಕಾಣಿಸಿಕೊಂಡಿದ್ದರಿಂದ ತುಮಕೂರಿಗೆ ಕಾರಿನಲ್ಲಿ…

Read More

ಶಿವಮೊಗ್ಗದ ಅಮೀರ್ ಅಹಮದ್ ವೃತ್ತದ ಬಳಿ ನಡುರಾತ್ರಿ ದಿಡೀರ್ ಬೆಂಕಿ : ತಪ್ಪಿತು ಭಾರಿ ಅನಾಹುತ

ಶಿವಮೊಗ್ಗದ ಅಮೀರ್ ಅಹಮದ್ ವೃತ್ತದ ಸಮೀಪವಿರುವ ಸುಲ್ತಾನ್ ಮಾರ್ಕೆಟ್’ನಲ್ಲಿ ನಡುರಾತ್ರಿ ಬೆಂಕಿ ಕಾಣಿಸಿಕೊಂಡಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಸುಲ್ತಾನ್ ಮಾರ್ಕೆಟ್’ನ ಗುಜರಿ ಅಂಗಡಿಗಳ ಮುಂದೆ ಇಡಲಾಗಿದ್ದ ಟಯರ್ ಮತ್ತು ಇತರೆ ಗುಜರಿಗೆ ವಸ್ತುಗಳು ಧಗಧಗ ಹೊತ್ತಿ ಉರಿದಿವೆ. ಸ್ಥಳೀಯರು ಇದನ್ನು ಗಮನಿಸಿ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಬೆಂಕಿ ಹೊತ್ತುಕೊಳ್ಳಲು ನಿಖರ ಕಾರಣ ತಿಳಿದು ಬಂದಿಲ್ಲ. ಗುಜರಿ ವಸ್ತುಗಳು ಇರಿಸಿದ್ದ ಸ್ಥಳದ ಪಕ್ಕದಲ್ಲಿ ವಿದ್ಯುತ್ ಟ್ರಾನ್ಸ್’ಫಾರ್ಮರ್ ಇದೆ….

Read More

ಮದ್ಯವ್ಯಸನಿ ಪತಿಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ:

ಕೌಟುಂಬಿಕ ಸಮಸ್ಯೆಗಳಿಂದ ಹಾಗೂ ಮದ್ಯವ್ಯಸನಿ ಪತಿಯಿಂದ ಬೇಸತ್ತ ವಿವಾಹಿತ ಮಹಿಳೆಯೊಬ್ಬರು ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅನುಪಿನ ಕಟ್ಟೆ ರಸ್ತೆಯಲ್ಲಿರುವ ಸಿದ್ದೇಶ್ವರ ನಗರದ ನಿವಾಸಿ ಸವಿತಾ(35) ಎಂಬುವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಂಸಿಯ ನಿವಾಸಿಯಾಗಿದ್ದ ಸವಿತಾ ಕಳೆದ 14 ವರ್ಷದ ಹಿಂದೆ ಗಾರೆ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಎಂಬಾತನನ್ನು ಮದುವೆಯಾಗಿದ್ದರು. ಇಬ್ಬರು ಮಕ್ಕಳಿದ್ದರು. ಮದುವೆಯಾದಾಗಿನಿಂದ ರಾಘವೇಂದ್ರ ವಿಪರೀತ ಮದ್ಯ ವ್ಯಸನಿಯಾಗಿದ್ದು  ಈ ವ್ಯಸನದಿಂದ ಬದಲಾಗದ ಹಿನ್ನಲೆಯಲ್ಲಿ ಪವಿತ್ರ ಬೇಸತ್ತಿದ್ದರು. ಇಂದು ಮನೆಯಲ್ಲಿ ಪವಿತ್ರಾ ನೇಣು…

Read More

ರಿಪ್ಪನ್ ಪೇಟೆ : 4.30 ಕೋಟಿ ವೆಚ್ಚದ ರಸ್ತೆ ಕಾಮಗಾರಿ ಪರಿಶೀಲಿಸಿದ ಶಾಸಕ ಹರತಾಳು ಹಾಲಪ್ಪ : ಫೆ.12 ರಂದು ಧರ್ಮಸ್ಥಳಕ್ಕೆ ಆರೋಪಿತರಿಗೆ ಶಾಸಕ ಹಾಲಪ್ಪ ಆಹ್ವಾನ

ರಿಪ್ಪನ್ ಪೇಟೆ : ಸುಳ್ಳು ಹೇಳಿಕೆ ಕೊಟ್ಟು ಪಲಾಯನಗೈಯುವ ಹುಡುಗಾಟದ ಕೆಲಸವನ್ನು ಮಾಡದೇ ಫೆಬ್ರವರಿ 12 ರಂದು ಧರ್ಮಸ್ಥಳದ ಶ್ರೀಮಂಜುನಾಥನ ಸನ್ನಿಧಿಗೆ ಬಂದು ನಾನು ಹಣ ಪಡೆದಿರುವುದನ್ನು ಸಾಬೀತುಪಡಿಸಲಿ ಎಂದು ಸಾಗರ – ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಹರತಾಳು ಹಾಲಪ್ಪ ಸವಾಲು ಹಾಕಿದರು. ಬಾಳೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಪೂಜಾರದಿಂಬದಲ್ಲಿ  ಬುಧವಾರ ನೂತನವಾಗಿ ನಿರ್ಮಾಣವಾಗಿರುವ 4.30 ಕೋಟಿ ವೆಚ್ಚದ ಪಿಎಂಜಿಎಸ್ ವೈ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ನಂತರ ಮಾತನಾಡಿದ ಶಾಸಕರು ಸಾಗರ ಕ್ಷೇತ್ರದಲ್ಲಿ ವ್ಯಕ್ತಿಯೋರ್ವ ನನ್ನ…

Read More

ರಿಪ್ಪನ್ ಪೇಟೆ ಸಮೀಪದ ತಳಲೆ ಗ್ರಾಮದಲ್ಲಿ ಕಾಡಾನೆಯ ಹಾವಳಿ : ಅಡಿಕೆ ತೋಟಕ್ಕೆ ಹಾನಿ

ರಿಪ್ಪನ್ ಪೇಟೆ : ಮೂಗೂಡ್ತಿ ಅರಣ್ಯ ಜೀವಿ ವಲಯ ವ್ಯಾಪ್ತಿಯ ತಳಲೆ ಗ್ರಾಮದ ಕಾರೆಹೊಂಡ ದಲ್ಲಿರುವ ರೈತರ ಅಡಿಕೆ ತೋಟಕ್ಕೆ ಮಂಗಳವಾರ ರಾತ್ರಿ ಆನೆಯೊಂದು ದಾಳಿ ನಡೆಸಿ ಅಡಿಕೆ ತೋಟ ಹಾನಿಗೊಳಿಸಿದ ಘಟನೆ ನಡೆದಿದೆ. ರೈತ ಪರಶುರಾಮ ಎಂಬವರ ಅಡಿಕೆ ತೋಟಕ್ಕೆ ದಾಳಿ ಮಾಡಿದ ಆನೆಯು ತೆಂಗು ಹಾಗೂ ಅಡಿಕೆ ಮರಗಳನ್ನು ಕಿತ್ತು ಮುರಿದು ಹಾನಿಗೊಳಿಸಿ ರೈತರಿಗೆ ನಷ್ಟವನ್ನುಂಟು ಮಾಡಿದೆ.ಅನಾಹುತದ ಘಟನೆಯನ್ನು ತಿಳಿದ ಗ್ರಾಮಸ್ಥರು ತೋಟಕ್ಕೆ ಆಗಮಿಸಿ ಇದುವರೆಗೆ ಈ ಭಾಗದಲ್ಲಿ ಆನೆ ಬಂದಿರುವ ನಿದರ್ಶನ ಇರಲಿಲ್ಲ…

Read More
Exit mobile version