ಗವಟೂರು ಹೊಳೆಸಿದ್ದೇಶ್ವರ ದೇವಸ್ಥಾನದಲ್ಲಿ ಅದ್ದೂರಿಯಾಗಿ ನಡೆದ ಎಳ್ಳಮವಾಸ್ಯೆ ಜಾತ್ರಾ ಮಹೋತ್ಸವ:
ರಿಪ್ಪನ್‌ಪೇಟೆ : ಇಲ್ಲಿನ ಗವಟೂರು ಹೊಳೆಸಿದ್ದೇಶ್ವರ ಸ್ವಾಮಿಯ ಎಳ್ಳಮವಾಸ್ಯೆ ಜಾತ್ರಾಮಹೋತ್ಸವ ಕಾರ್ಯಕ್ರಮ ಮತ್ತು ಧರ್ಮಸಮಾರಂಭ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಜಾತ್ರಾಮಹೋತ್ಸವ ಕಾರ್ಯಕ್ರಮ ಮತ್ತು ಧರ್ಮಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅಶೀರ್ವಚನ ನೀಡಿದ ಮಳಲಿಮಠದ ಷ.ಬ್ರ.ಡಾ.ಗುರುನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಜಿಗಳು ಸಂಘಟನೆ ಸದ್ಭಾವನೆಯೊಂದಿಗೆ ಯುವಜನಾಂಗ ಧಾರ್ಮಿಕ ಅಚರಣೆಗಳಲ್ಲಿ ತೊಡಗಿಸಿಕೊಂಡು ಸುಸಂಸ್ಕೃತ ಸಮಾಜ ನಿರ್ಮಾಣದಲ್ಲಿ ಹೆಚ್ಚು ಆಸಕ್ತಿ ವಹಿಸಬೇಕು, ದುಡಿಮೆಯಿಂದ ಗಳಿಸಿದ ಹಣವನ್ನು ದಾನ, ಧರ್ಮಕ್ಕಾಯಕ್ಕೆ ವಿನಿಯೋಗಿಸಿದರೆ ಪುಣ್ಯನಾದರು ಬರುತ್ತದೆ ಅದೇ ಬಚ್ಚಿಟ್ಟರೆ ಪರರ ಪಾಲಾಗುತ್ತದೆ ಈಗಲಾದರೂ ಗಳಿಸಿದ ಸಂಪತ್ತು ಇನ್ನೊಬ್ಬರಿಗೆ ದಾನ…


