January 11, 2026

ರಿಪ್ಪನ್ ಪೇಟೆ : ಅತ್ಯಂತ ಯಶಸ್ವಿಯಾಗಿ ನಡೆದ ಸಾಮೂಹಿಕ ಗಣಹೋಮ ಮತ್ತು ಸುಮಂಗಲಿ ಪೂಜೆ

ರಿಪ್ಪನ್ ಪೇಟೆ :ಮನುಷ್ಯ ತಂತ್ರಜ್ಞಾನದ ಮೂಲಕ ಸಂಚರಿಸುತ್ತಿದ್ದಾನೆ. ಮಾನವೀಯ ಮೌಲ್ಯಗಳನ್ನು ಕಳೆದುಕೊಳ್ಳುತ್ತಿದ್ದಾನೆ. ಮಾನವೀಯ ಮೌಲ್ಯಗಳೆಂದರೆ ಮನೆಯಲ್ಲಿ ಭಜನೆಗಳು,ದೇವತಾ ಆರಾಧನೆಗಳು, ಮಕ್ಕಳಿಗೆ ವಿಶೇಷವಾಗಿರುವಂತಹ ಧರ್ಮ ಚಿಂತನೆಗಳನ್ನು  ಕಡಿಮೆ ಮಾಡುತ್ತಿದ್ದೇವೆ.ಮಕ್ಕಳನ್ನು ಸಧ್ರಡವಾದ ವ್ಯಕ್ತಿಗಳನ್ನು ಮಾಡಬೇಕಾದರೆ ತಂದೆ ತಾಯಿಗಳಾದವರು ಒಳ್ಳೆಯ ಸಂಸ್ಕಾರವಂತರಾಗಬೇಕಾಗಿದೆ. ಇಂದು ರಾಜಮಹಾರಾಜರ ಚರಿತ್ರೆಯನ್ನು ಹೇಳಬೇಕಾದರೆ ಅವರ ಹಿಂದೆ ಅವರ ತಾಯಿಯ ಪರಿಶ್ರಮ ಎಷ್ಟಿರಬಹುದು ಎಂಬುದನ್ನು ಊಹಿಸಬೇಕಾಗುತ್ತದೆ. ನಾವು ಮಕ್ಕಳನ್ನು ಒಳ್ಳೆಯ ರೀತಿಯಲ್ಲಿ ಬೆಳೆಸಿದಾಗ ಸಮಾಜಕ್ಕೆ ಒಳ್ಳೆಯ ವ್ಯಕ್ತಿಯನ್ನು ಕೊಟ್ಟಂತಾಗುತ್ತದೆ, ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳನ್ನು ಕೊಟ್ಟಾಗ ಸಮಾಜ ಸದೃಢವಾಗುತ್ತದೆ. ಅಂತಹ ಸದೃಡವಾದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಬಹು ಮುಖ್ಯಪಾತ್ರವನ್ನು ವಹಿಸುತ್ತದೆ. ಹಳ್ಳಿಯಿಂದ ಪಟ್ಟಣದ ವರೆಗೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರತಿಯೊಂದು ಕಾರ್ಯಕ್ರಮವು ಉದಯೋನ್ಮುಖ ಸಮಾಜದತ್ತ ದಾಪುಗಾಲನ್ನಿಟ್ಟಿದೆ. ಪ್ರತಿಯೊಬ್ಬ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಕೂಡ ಸರಿಯಾಗಿ ಯೋಜನೆಯ ಪ್ರಯೋಜನ ಪಡೆದು ಉತ್ತಮ ಸಮಾಜ ಕಟ್ಟಲು ಮುನ್ನುಗ್ಗಬೇಕಿದೆ ಎಂದು ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಕರೆ ನೀಡಿದರು.

ಇಂದು ರಿಪ್ಪನ್ ಪೇಟೆ ಸಮೀಪದ ಬಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳೇಶ್ವರ ಗ್ರಾಮದಲ್ಲಿ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟ ರಿಪ್ಪನ್ ಪೇಟೆ ವಲಯ ಮತ್ತು ಗ್ರಾಮಪಂಚಾಯಿತಿಯಲ್ಲಿ ಇವರ ಸಂಯುಕ್ತ ಆಶ್ರಯದಲ್ಲಿ ಸಾಮೂಹಿಕ ಗಣಹೋಮ ಮತ್ತು ಸುಮಂಗಲಿ ಪೂಜಾ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ  ಕಾರ್ಯಕ್ರಮಕ್ಕೆ ಶ್ರೀಪತಿ ಪಂಡಿತರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಚಾಲನೆ ನೀಡಿದರು

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹೇಮಂತ್ ರಾಜ್ ವಹಿಸಿದ್ದರು, ಮುಖ್ಯ ಅತಿಥಿಗಳಾಗಿ ಶ್ರೀಮತಿ ಗೀತಾ ನಿರ್ದೇಶಕರು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಶ್ರೀಮತಿ ಲೀಲಾವತಿ ದೊಡ್ಡಯ್ಯ ಅಧ್ಯಕ್ಷರು ಗ್ರಾಮ ಪಂಚಾಯಿತಿ ಬಾಳೂರು ,ಮಂಜುನಾಥ್ ಕೆ ಎಸ್ ಅಧ್ಯಕ್ಷರು ಗಂಗಾ ಪರಮೇಶ್ವರಿ ದೇವಸ್ಥಾನ ಕಾಳೇಶ್ವರ,ಒಕ್ಕೂಟದ  ಉಪಾಧ್ಯಕ್ಷ ಪ್ರಕಾಶ್ ತಾಲೂಕು ಯೋಜನಾಧಿಕಾರಿ ಶ್ರೀಮತಿ ಬೇಬಿ ವಲಯ ಮೇಲ್ವಿಚಾರಕ ಹರೀಶ್ ಕುಮಾರ್,ಸ್ಥಳೀಯ ಸೇವಾ ಪ್ರತಿನಿಧಿ ಶುಭ, ಗ್ರಾಮಸ್ಥರಾದ ಶಶಿಕಲಾ,ಸರೇಶ್,ಮೀನಾಕ್ಷಪ್ಪ,ಶೇಷಗಿರಿ, ಮಂಜಪ್ಪ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


ವರದಿ : ದೇವರಾಜ್ ಆರಗ

About The Author

Leave a Reply

Your email address will not be published. Required fields are marked *

Exit mobile version