Headlines

HOSANAGARA | ಮನೆಕಳ್ಳತನ ಪ್ರಕರಣ ಭೇದಿಸಿದ ಪೊಲೀಸರು – ಲಕ್ಷಾಂತರ ಮೌಲ್ಯದ ಚಿನ್ನಾಭರಣ ವಶ, ನಾಲ್ವರು ಆರೋಪಿಗಳು ಬಂಧನ

Hosanagar police crack a house burglary case, arrest four accused from Bhatkal and seize gold ornaments worth lakhs, including 387 grams of jewellery and a Tata Etios car. Investigation continues.

ಹೊಸನಗರ: ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಮನೆಕಳ್ಳತನ ಪ್ರಕರಣವನ್ನು ನಗರ ಪಿಎಸೈ ಶಿವಾನಂದ ಕೆ ರವರ ನೇತೃತ್ವದಲ್ಲಿ ಪೊಲೀಸರು ಯಶಸ್ವಿಯಾಗಿ ಭೇದಿಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಹಾಗೂ ಇತರೆ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

2025 ಡಿಸೆಂಬರ್ 27ರಂದು ದಾಖಲಾಗಿದ್ದ ಪ್ರಕರಣದಲ್ಲಿ, ಮನೆಯವರು ಹೊರಗಿದ್ದ ವೇಳೆ ಮನೆಗೆ ನುಗ್ಗಿದ ಆರೋಪಿಗಳು ಚಿನ್ನಾಭರಣಗಳನ್ನು ಕಳವು ಮಾಡಿದ್ದರು. ಈ ಸಂಬಂಧ ದೂರು ದಾಖಲಾಗುತ್ತಿದ್ದಂತೆಯೇ ಪೊಲೀಸರು ತನಿಖೆ ಕೈಗೊಂಡು, ತಾಂತ್ರಿಕ ಮಾಹಿತಿ ಹಾಗೂ ಗುಪ್ತಚರರ ಸಹಾಯದಿಂದ ಆರೋಪಿಗಳ ಸುಳಿವು ಪತ್ತೆಹಚ್ಚಿದರು.

ಬಂಧಿತ ಆರೋಪಿಗಳನ್ನು ಮಹಮ್ಮದ್ ಇಮ್ರಾನ್ ಇಕ್ಕೇರಿ (25), ಮಹಮ್ಮದ್ ಅಖೀಲ್ (24), ಅಮೀರ್ ಹಸನ್ ಬ್ಯಾರಿ (29) ಹಾಗೂ ಶ್ರೀಮತಿ ಬೇಬಿ ಹಾಜಿರ (55) ಎಂದು ಗುರುತಿಸಲಾಗಿದೆ. ಇವರು ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಭಾಗದವರು ಎಂದು ತಿಳಿದುಬಂದಿದೆ.

ವಶಪಡಿಸಿಕೊಂಡ ಸ್ವತ್ತುಗಳ ವಿವರ:

30 ಗ್ರಾಂ ತೂಕದ ಬಂಗಾರದ ನೆಕ್ಸಸ್ ಹಾರ – ಅಂದಾಜು ಮೌಲ್ಯ ₹3,87,000 ,06 ಗ್ರಾಂ ತೂಕದ ಬಂಗಾರದ ಬ್ರಾಸ್ ಲೇಟ್ – ಅಂದಾಜು ಮೌಲ್ಯ ₹93,000 ,
50 ಗ್ರಾಂ ಬೆಳ್ಳಿಯ ವಸ್ತುಗಳು – ₹5,000 ,ಮೊಬೈಲ್ ಫೋನ್ – ₹5,000 ,ಕೃತ್ಯಕ್ಕೆ ಬಳಸಿದ ಟಾಟಾ ಇಟಿಯೋಸ್ ಕಾರು – ₹3,00,000 ,ಒಟ್ಟು ಸುಮಾರು ₹7,90,000 ಮೌಲ್ಯದ ಸ್ವತ್ತುಗಳನ್ನು ಅಮಾನತ್ತುಪಡಿಸಲಾಗಿದೆ.

ವಶಪಡಿಸಿಕೊಂಡ ವಸ್ತುಗಳಲ್ಲಿ ಚಿನ್ನದ ಹಾರ, ಬಳೆಗಳು, ಮಾಲೆಗಳು ಹಾಗೂ ಇತರೆ ಆಭರಣಗಳು ಸೇರಿವೆ. ನಗದು ಹಣವನ್ನೂ ಜಪ್ತಿ ಮಾಡಲಾಗಿದೆ.

ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ

ಈ ಕಾರ್ಯಾಚರಣೆ ನಿಖಿಲ್ ಬಿ, ಜಿಲ್ಲಾ ಪೊಲೀಸ್ ಅಧೀಕ್ಷಕರು, ಶಿವಮೊಗ್ಗ ಹಾಗೂ ಕಾರಿಯಪ್ಪ ವಿ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಅವರ ಮಾರ್ಗದರ್ಶನದಲ್ಲಿ ನಡೆಯಿತು. ಜೊತೆಗೆ ರಮೇಶ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2 ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರವಿಂದ ಎನ್ ಕಲಗುಜ್ಜಿ ಹಾಗೂ ಹೊಸನಗರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಎಂ.ಐ ಗೌಡಪ್ಪಗೌಡ ಅವರ ಮೇಲ್ವಿಚಾರಣೆಯಲ್ಲಿ, ನಗರ ಪೊಲೀಸ್ ಠಾಣೆಯ ಪಿ.ಎಸ್.ಐ ಶಿವಾನಂದ ಕೋಳಿ ಅವರ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿತು.

ತಂಡದಲ್ಲಿ ನೇತೃತ್ವದಲ್ಲಿಸಿಬ್ಬಂದಿಗಳಾದ ಕುಮಾರ್ ಟಿ (ಎ.ಎಸ್.ಐ), ಶೇಖ್ ಅಮೀರ್ ಜಾನ್ (ಎ.ಎಸ್.ಐ), ಕಿರಣ್ ಕುಮಾರ್ ಡಿ.ವೈ., ಗಿರಿಪ್ರಸಾದ್, ವಿಶ್ವನಾಥ್, ಪ್ರವೀಣ್ ಕುಮಾರ್, ಸುಜಯ್ ಕುಮಾರ್, ಪ್ರಜ್ವಲ್, ಸಚಿನ್, ಲಕ್ಷ್ಮಣ, ಅಕ್ಷಯ್ ಮತ್ತು ಮಧುಸೂಧನ್, ಶಿವಕುಮಾರ ನಾಯ್ಕ (ಹೊಸನಗರ ಠಾಣೆ), ರವಿಚಂದ್ರ, ಶಶಿಧರ್ ಹಾಗೂ ನಗರ ಠಾಣೆಯ ಸಿಬ್ಬಂದಿಗಳು, ಜಿಲ್ಲಾ ಎ.ಎನ್.ಸಿ ಸಿಬ್ಬಂದಿಗಳಾದ ಗುರುರಾಜ್ ಮತ್ತು ಇಂದ್ರೇಶ್ ಹಾಗೂ ಜಿಲ್ಲಾ ಬೆರಳಚ್ಚು ವಿಭಾಗದ ಶಿವಮೊಗ್ಗ ಸಿಬ್ಬಂದಿಗಳ ತಾಂತ್ರಿಕ ಸಹಕಾರದೊಂದಿಗೆ ಕಳ್ಳತನ ಮಾಡಿದ ಆರೋಪಿಗಳನ್ನು ಬಂಧಿಸಿ, ಕಳುವಾದ ಮಾಲನ್ನು ಪತ್ತೆಹಚ್ಚಿದ್ದಾರೆ.

ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದ್ದು, ಬಂಧಿತರಿಂದ ಇನ್ನಷ್ಟು ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

About The Author

Exit mobile version