Blind T20 World Cup champion Kavya V from Ripponpet was felicitated by Vatsalya School students at her residence in Baruve village, celebrating her contribution to India’s historic victory.
ಟಿ20 ಅಂಧರ ವಿಶ್ವಕಪ್ ವಿಜೇತೆ ಕಾವ್ಯಾ.ವಿ ಅವರಿಗೆ ವಾತ್ಸಲ್ಯ ಶಾಲೆ ವಿದ್ಯಾರ್ಥಿಗಳಿಂದ ಭವ್ಯ ಸನ್ಮಾನ
ರಿಪ್ಪನ್ಪೇಟೆ: ಟಿ–20 ಅಂಧರ ವಿಶ್ವಕಪ್ನಲ್ಲಿ ಭಾರತಕ್ಕೆ ಕೀರ್ತಿ ತಂದ ಮಹಿಳಾ ತಂಡದ ಪ್ರಮುಖ ಸದಸ್ಯೆಯಾದ ರಿಪ್ಪನ್ಪೇಟೆಯ ಕಾವ್ಯಾ.ವಿ ಅವರನ್ನು ಆಯನೂರಿನ ಹುಂಚದಕಟ್ಟೆ ಎಜುಕೇಷನ್ ಟ್ರಸ್ಟ್ ಒಡೆತನದ ವಾತ್ಸಲ್ಯ ಇಂಟರ್ ನ್ಯಾಷನಲ್ ಶಾಲೆಯ ವತಿಯಿಂದ ವಿಶೇಷವಾಗಿ ಸನ್ಮಾನಿಸಲಾಯಿತು.
ಭಾರತ ತಂಡವು ಟಿ20 ಅಂಧರ ವಿಶ್ವಕಪ್ ಜಯಿಸುವ ಮೂಲಕ ದೇಶಕ್ಕೆ ಗೌರವ ತಂದ ಹಿನ್ನೆಲೆಯಲ್ಲಿ, ಕಾವ್ಯಾ.ವಿ ಅವರ ಸಾಧನೆಗೆ ಮಾನ್ಯತೆ ನೀಡುವ ಉದ್ದೇಶದಿಂದ ಶಾಲೆಯ ಆಡಳಿತ ಮಂಡಳಿ ಈ ಕಾರ್ಯಕ್ರಮವನ್ನು ಆಯೋಜಿಸಿತು.
ಆಯನೂರಿನಿಂದ ಶಾಲಾ ಬಸ್ನಲ್ಲಿ ವಿದ್ಯಾರ್ಥಿಗಳೊಂದಿಗೆ ಆಗಮಿಸಿದ ವಾತ್ಸಲ್ಯ ಇಂಟರ್ ನ್ಯಾಷನಲ್ ಶಾಲೆಯ ಪ್ರಮುಖರಾದ ಶೈಲಜಾ ಹುಂಚದಕಟ್ಟೆ ಅವರು ಬರುವೆ ಗ್ರಾಮದಲ್ಲಿರುವ ಕಾವ್ಯಾ.ವಿ ಅವರ ಸ್ವಗೃಹಕ್ಕೆ ತೆರಳಿ ಭವ್ಯವಾಗಿ ಸನ್ಮಾನ ನೆರವೇರಿಸಿದರು. ಈ ವೇಳೆ ಶಾಲಾ ಮಕ್ಕಳು ಹಾಡು ಹಾಡುವ ಮೂಲಕ ಅಭಿನಂದನೆ ಸಲ್ಲಿಸಿದ್ದು, ಗ್ರಾಮದಲ್ಲಿ ಸಂಭ್ರಮದ ವಾತಾವರಣ ನಿರ್ಮಾಣವಾಯಿತು. ಇದೇ ಸಂಧರ್ಭದಲ್ಲಿ ಶಾಲೆಯ 700 ಮಕ್ಕಳು ಪ್ರೀತಿಯಿಂದ ಒಟ್ಟುಮಾಡಿದ ದೇಣಿಗೆ ಹಣವನ್ನು ಕಾವ್ಯಾ ವಿ ರವರಿಗೆ ಹಸ್ತಾಂತರಿಸಲಾಯಿತು.
ಕರ್ನಾಟಕದಿಂದ ಈ ವಿಶ್ವಕಪ್ ಚಾಂಪಿಯನ್ ತಂಡಕ್ಕೆ ಮೂವರು ಆಟಗಾರ್ತಿಯರು ಆಯ್ಕೆಯಾಗಿದ್ದು, ಕಾವ್ಯಾ.ವಿ ಅವರು ಆಲ್–ರೌಂಡರ್ ಆಗಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಅವರ ಕೊಡುಗೆ ಅತ್ಯಂತ ಮಹತ್ವದ್ದಾಗಿದೆ ಎಂದು ಶೈಲಜಾ ಹುಂಚದಕಟ್ಟೆ ಅವರು ಪ್ರಶಂಸೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ರಿಪ್ಪನ್ ಪೇಟೆಯ ನಿವೃತ್ತ ಶಿಕ್ಷಕಿ ಗೊನ್ಸಾಲಿಸಾ , ವಾತ್ಸಲ್ಯ ಶಾಲೆಯ ಶಿಕ್ಷಕರು, ಶಿಕ್ಷಕಿಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




