Headlines

24 ಗಂಟೆಯಲ್ಲಿ ಕಿಡ್ನಾಪ್ ಪ್ರಕರಣ ಬೇಧಿಸಿದ ಪೊಲೀಸರು : ಭದ್ರಾವತಿಯಲ್ಲಿ ಅಪಹರಣ – ಸಾಗರದಲ್ಲಿ ಆರೋಪಿಗಳು|crime news

ಅಪ್ರಾಪ್ತ ಬಾಲಕನನ್ನ ಅಪಹರಿಸಿ ಹಣದ ಬೇಡಿಕೆ ಇಟ್ಟ ಪ್ರಕರಣವನ್ನ 24 ಗಂಟೆಯಲ್ಲಿ ಬೇಧಿಸಿದ ಭದ್ರಾವತಿ ನ್ಯೂ ಟೌನ್ ಪೊಲೀಸರು ಐವರು ಆರೋಪಿಯನ್ನ ಬಂಧಿಸಿದ್ದಾರೆ. ಓರ್ವನ ಬಂಧನಕ್ಕಾಗಿ ಭರ್ಜರಿ ಬಲೆಯನ್ನೇ ಹೆಣೆದಿದ್ದಾರೆ.

ಘಟನೆಯ ಹಿನ್ನಲೆ:

ಭದ್ರಾವತಿ ಅಂಡರ್ ಬ್ರಿಡ್ಜ್ ಬಳಿಯಿರುವ ಎಲ್ಐಸಿ ಕಚೇರಿ ಬಳಿ ಎಳನೀರು ಮಾರಾಟ ಮಾಡುತ್ತಿದ್ದ ಅಪ್ರಾಪ್ತ ಬಾಲಕನ ಬಳಿ ಬಂದ ಅಪರಿಚತನೋರ್ವ ನನ್ನ ಬಳಿ ಹಣ ಖಾಲಿಯಾಗಿದೆ. ಫೋನ್ ಪೇ ನೂ ಇಲ್ಲ. ನಾಲ್ಕು ಎಳನೀರು ಕೊಚ್ಚಿಕೊಂಡು 100 ಮೀಟರ್ ದೂರದಲ್ಲಿರುವ ವ್ಯಾನ್ ನಲ್ಲಿರುವ ಸ್ನೇಹಿತನ ಬಳಿ ಹಣವಿದೆ. ಸ್ಕ್ಯಾನರ್ ತೆಗೆದುಕೊಂಡು ಬಾ ಎಂದು ಹೇಳಿರುತ್ತಾನೆ.




ಅಪ್ರಾಪ್ತ ಬಾಲಕ ನಾಲ್ಕು ಎಳನೀರು ಕೊಚ್ಚಿಕೊಂಡು ಸಿಲ್ವರ್ ಓಮ್ನಿ ಬಳಿ ಹೋಗಿ ಕಾರಿನಲ್ಲಿ ಕುಳಿತವನಿಗೆ ಎಳನೀರು ಕೊಡುತ್ತಿದ್ದಂತೆ ತಕ್ಷಣವೇ ಬಾಲಕನನ್ನ ಮುದುರಿಕೊಂಡು ಕಾರಿನಲ್ಲಿ ಅಪಹರಿಸಿರುತ್ತಾರೆ. ತಕ್ಷಣವೇ ಆತನನ್ನ ಹಿಂಬಾಲಿಸಿಕೊಂಡು ಬಂದ ಪೋಷಕರು ಬರುವಲ್ಲಿ ಪರಾರಿಯಾಗಿರುತ್ತಾರೆ.

ಇದೇ ವೇಳೆ ಮನೆಯವರಿಗೆ ಕರೆ ಮಾಡಿದ ಅಪಹರಣಕಾರರು ಯಾಸಿನ್ ಖುರೇಷಿಯವರ ಕಡೆಯವರು 10 ಲಕ್ಷ ಹಣ ಕೊಟ್ಟು ಯಾಸಿನ್ ಕುರೇಷಿಯ ಬಳಿ ಇತ್ಯರ್ಥ್ಯ ಮಾಡಿಕೊಳ್ಳಿ ಎಂದು ಮೊಬೈಲ್ ನಲ್ಲಿ ಕರೆ ಮಾಡಿ ಹೇಳಿರುತ್ತಾರೆ. ಆದರೆ ಎರಡು ಮೂರು ಅಪಹರಣಕ್ಕೊಳಗಾದ ಕುಟುಂಬಕ್ಕೂ ಖಲೀಲ್ ಎಂಬುವರ ನಡುವೆ 25 ಲಕ್ಷದ ರೂ. ಹಣದ ವಿಚಾರದಲ್ಲಿ ಗಲಾಟೆಯಾಗಿತ್ತು.




ಈ ವಿಚಾರದಲ್ಲಿ ಅತ್ಯಾಚಾರ ಮತ್ತು ಕೊಲೆಯ ಯತ್ನ ನಡೆದಿತ್ತು ಎಂದು ಪ್ರಕರಣ ದಾಖಲಾಗಿತ್ತು. ಆದರೆ ಯಾವ ಪ್ರಯೋಜನವೂ ಆಗಿರಲಿಲ್ಲ. ಆದರೆ ಈಗ ದಿಡೀರ್ ಅಂತ ಅಪ್ರಾಪ್ತ ಬಾಲಕನ ಅಪಹರಣದ ಪ್ರಕರಣ ತಲೆ ನೋವು ತಂದಿತ್ತು. ಅದೂ ಖುರೇಷಿಯ ಹೆಸರು ಪ್ರಸ್ತಾಪಿಸಿ ಹಣದ ಬೇಡಿಕೆ ಇಟ್ಟಿರುವುದು ಭಯವನ್ನೂ ಉಂಟು ಮಾಡಿತ್ತು.

ಪ್ರಕರಣ ದಾಖಲಾಗುತ್ತಿದ್ದಂತೆ ಭದ್ರಾವತಿ ಪೊಲೀಸರು ಐವರನ್ನ ಪತ್ತೆಹಚ್ಚಿದ್ದಾರೆ. ಓರ್ವ ತಲೆ ಮರೆಸಿಕೊಂಡಿದ್ದು ಪತ್ತೆಗಾಗಿ ತೀವ್ರಶೋಧ ನಡೆದಿದೆ. 

ಭದ್ರಾವತಿಯ ಮುಬಾರಕ್ ಯಾನೆ ಡಿಚ್ಚಿ(24), ಸಾಗರದ ಜಾಬೀರ್ ಭಾಷ ಯಾನೆ ರಾಬರ್ಟ್(22), ಶಿವಮೊಗ್ಗದ ಮುಸ್ತಫ, ಸಾಗರದ ಅಬ್ದುಲ್ ಸಲಾಂ, ಸಾಗರದ ಅಣಲೇಕೊಪ್ಪದ ಇರ್ಫಾನ್, ರನ್ನ ಬಂಧಿಸಲಾಗಿದೆ. ಎ2 ಆರೋಪಿ ಪರಾರಿಯಾಗಿದ್ದಾನೆ.



Leave a Reply

Your email address will not be published. Required fields are marked *