POSTMAN NEWS

ನೈಜ ಸುದ್ದಿ ನೇರ ಬಿತ್ತರ..

ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ಮಾಜಿ ಅಧ್ಯಕ್ಷ ನಿತ್ಯಾನಂದ ಹೆಗಡೆ ನಿಧನ|hegade

ರಿಪ್ಪನ್‌ಪೇಟೆ : ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ  ಸಂಘದ ಮಾಜಿ ಅಧ್ಯಕ್ಷರಾದ ನಿತ್ಯಾನಂದ ಹೆಗಡೆ(57) ಅನಾರೋಗ್ಯದಿಂದ ಮೃತಪಟ್ಟಿದ್ದಾರೆ.


ಪಟ್ಟಣದ ಕಲಾ ಕೌಸ್ತುಭ ಕನ್ನಡ ಸಂಘ ಹಾಗೂ ವಿವಿಧ ಸಂಸ್ಥೆಗಳಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸಿದ್ದ ನಿತ್ಯಾನಂದ ಹೆಗಡೆ ಕಳೆದ ಕೆಲ ಸಮಯದಿಂದ ಅನಾರೋಗ್ಯ ಪೀಡಿತರಾಗಿದ್ದರು.ಸೊರಬದ ಹರಿಷಿ ಗ್ರಾಮದ ತಮ್ಮ ಸ್ವಗೃಹದಲ್ಲಿ ಇಂದು ಸಂಜೆ ಮೃತಪಟ್ಟಿದ್ದಾರೆ.

ಮೃತರು ಪತ್ನಿ ,ಓರ್ವ ಪುತ್ರನನ್ನು ಬಿಟ್ಟು ಅಗಲಿದ್ದಾರೆ.

 ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಸೊರಬದ ಹರಿಷಿ ಗ್ರಾಮದಲ್ಲಿ ಅಂತ್ಯಕ್ರೀಯೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

=≠==============================================

ಸಂತಾಪ : 

ನಿತ್ಯಾನಂದ ಹೆಗಡೆ ರವರ ಅಕಾಲಿಕ ನಿಧನಕ್ಕೆ ಕರ್ನಾಟಕ ಪ್ರಾಂತೀಯ ಹಿಂದೂ ರಾಷ್ಟ್ರ ಸೇನಾ ,ಕಲಾ ಕೌಸ್ತುಭ ಕನ್ನಡ ಸಂಘ,ಕಸ್ತೂರಿ ಕನ್ನಡ ಸಂಘ ದ ಅಧ್ಯಕ್ಷರು ಪದಾಧಿಕಾರಿಗಳು,ಸಿದ್ದಿವಿನಾಯ ವಾಲಿಬಾಲ್ ಕ್ಲಬ್ ,ಮತ್ತು ಎಂ ಬಿ ಮಂಜುನಾಥ್ ,ಆರ್ ಎ ಚಾಬುಸಾಬ್ ,ಸುಧೀಂದ್ರ ಪೂಜಾರಿ ,ಸತೀಶ್ ಎನ್,ಅಮೀರ್ ಹಂಜಾ ,ಎನ್ ವರ್ತೇಶ್, ಸುರೇಶ್ ಸಿಂಗ್ , ಆಸೀಫ಼್ ಭಾಷಾಸಾಬ್, ಆರ್ ಎನ್ ಮಂಜುನಾಥ್ ಸೇರಿದಂತೆ ಅನೇಕರು ಸಂತಾಪ ಸೂಚಿಸಿದ್ದಾರೆ

Leave a Reply

Your email address will not be published. Required fields are marked *

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.