ರಿಪ್ಪನ್‌ಪೇಟೆ : ಇಲ್ಲಿನ ಹೊಸನಗರ ರಸ್ತೆಯ ಮಾಡ್ರನ್ ರೈಸ್ ಮಿಲ್ ಮಾಲೀಕರಾದ ಸಂಜೀವ್ ಶೆಣೈ (73) ಅಲ್ಪಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಅನಾರೋಗ್ಯದಿಂದ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದ ಅವರು ಇಂದು ಬೆಳಿಗ್ಗೆ 8 ಗಂಟೆಗೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೃತರ ಅಂತ್ಯಕ್ರಿಯೆ ಇಂದು ಸಂಜೆ 4 ಗಂಟೆಗೆ ಗಾಂಧಿನಗರದ ಹಿಂದೂ ರುಧ್ರಭೂಮಿಯಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಪತ್ನಿ ,ಇಬ್ಬರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮಾಡ್ರನ್ ರೈಸ್ ಮಿಲ್ ಹಾಗೂ ಮಾಡ್ರನ್ ಕೆಮಿಕಲ್ಸ್ ಮೂಲಕ ರೈತ ಭಾಂಧವರ ಒಡನಾಡಿಯಾಗಿ ಸೇವೆ ಸಲ್ಲಿಸಿದ್ದ ಸಂಜೀವ್ ಶೆಣೈ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ, ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ,ಜಿಪಂ ಮಾಜಿ ಸದಸ್ಯ ಬಿ ಪಿ ರಾಮಚಂದ್ರ ,ಮುಖಂಡರಾದ ಅರ್ ಎ ಚಾಬುಸಾಬ್ ,ಎಂ ಬಿ ಮಂಜುನಾಥ್ ,ಆರ್ ಎನ್ ಮಂಜುನಾಥ್ ,ಸತೀಶ್ ಕಿಣಿ ,ಹರೀಶ್ ಶರಾಫ್ ,ಆಸೀಫ಼್ ಭಾಷಾ ಹಾಗೂ ಇನ್ನಿತರರು ಸಂತಾಪ ಸೂಚಿಸಿದ್ದಾರೆ.