ಶಿವಮೊಗ್ಗ : ಗಾಂಧಿ ಬಜಾರ್ ನಲ್ಲಿ ಪ್ರೇಮ್ ಸಿಂಗ್ ಯುವಕನಿಗೆ ಚಾಕು ಇರಿದ ಪ್ರಕರಣ ಸಂಬಂಧಿತ ಆರೋಪಿಗೆ ಜಬೀವುಲ್ಲಾ ಲಿಂಕ್ ಭಯಾನಕವಾಗಿದೆ.
ಭಯೋತ್ಪಾದಕರ ಜೊತೆ ಲಿಂಕ್ ಇರೋದು ಬಹಿರಂಗವಾಗಿದೆ. ಸದ್ಯದಲ್ಲೇ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸುತ್ತೇವೆ ಎಂದು ಗೃಹಸಚಿವ ಅರಗ ಜ್ಞಾನೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.
ಶಿವಮೊಗ್ಗದಲ್ಲಿ ವೀರ್ ಸಾವರ್ಕರ್ ಫೋಟೋ ಹಾಕುವ ವಿಚಾರದಲ್ಲಿ ಎಸ್ಡಿಪಿಐ ಬೆಂಬಲದಲ್ಲಿ ಕೆಲವರು ಹಿಂಸಾಚಾರ ನಡೆಸಿದ್ದರು. ಪ್ರೇಮ್ ಸಿಂಗ್ ಎಂಬ ಯುವಕನಿಗೆ ಚಾಕು ಇರಿದಿದ್ದ ಪ್ರಕರಣ ನಡೆದಿತ್ತು. ಪ್ರಕರಣದ ಆರೋಪಿಗೆ ‘ಭಯೋತ್ಪಾದಕರ ಲಿಂಕ್ ಭಯಾನಕ’ವಾಗಿದೆ ಅರಗ ಜ್ಞಾನೇಂದ್ರ ಆತಂಕ ವ್ಯಕ್ತಪಡಿಸಿದ್ದಾರೆ