ರಿಪ್ಪನ್ಪೇಟೆ : ಇತ್ತೀಚೆಗೆ ಇಬ್ಬರು ಮಕ್ಕಳೊಂದಿಗೆ ನಾಪತ್ತೆಯಾಗಿದ್ದ ಹೆದ್ದಾರಿಪುರ ಗ್ರಾಮ ಪಂಚಾಯತ್ ವ್ಯಾಪ್ತಿಯ ವಿದ್ಯಾನಗರದ ನಿವಾಸಿ ಸೌಂದರ್ಯ ತನ್ನ ಇಬ್ಬರು ಮಕ್ಕಳೊಂದಿಗೆ ಉಡುಪಿಯ ಸಾಂತ್ವಾನ ಕೇಂದ್ರದಲ್ಲಿ ಪತ್ತೆಯಾಗಿದ್ದಾರೆ.
ಕಳೆದ ಹತ್ತು ವರ್ಷದ ಹಿಂದೆ ಹೆದ್ದಾರಿಪುರ ಗ್ರಾಮದ ಶಶಿಕುಮಾರ್ ಎಂಬಾತನೊಂದಿಗೆ ಸೌಂದರ್ಯ ವಿವಾಹವಾಗಿದ್ದರು . ಶಶಿ ಕುಮಾರ್ ಪತ್ನಿಗೆ ಮಾನಸಿಕ ಕಿರುಕುಳ ದೈಹಿಕ ಹಲ್ಲೆ ನಡೆಸುತ್ತಿದ್ದ ಕಾರಣ ಪತಿಯ ನಡೆಗೆ ಬೇಸತ್ತು ತನ್ನ ಇಬ್ಬರು ಮಕ್ಕಳೊಂದಿಗೆ ಮನೆ ಬಿಟ್ಟು ಹೋಗಿದ್ದಾರೆ. ನಿನ್ನೆ ಮೂವರು ಪತ್ತೆಯಾಗಿ ಉಡುಪಿ ಸಾಂತ್ವಾನ ಕೇಂದ್ರದಲ್ಲಿದ್ದಾರೆ.
ಒಟ್ಟಾರೆಯಾಗಿ ಇಬ್ಬರು ಮಕ್ಕಳೊಂದಿಗೆ ವಿವಾಹಿತ ಮಹಿಳೆ ನಾಪತ್ತೆಯಾಗಿದ್ದ ಪ್ರಕರಣ ಸುಖಾಂತ್ಯಗೊಂಡಿದೆ.