ಶಿವಮೊಗ್ಗ : ಮುರುಘಾ ಶ್ರೀಗಳ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ 2ನೇ ಆರೋಪಿಯಾಗಿರುವ ವಾರ್ಡನ್ ರಶ್ಮಿಯನ್ನು ಪೊಲೀಸರು ಶಿವಮೊಗ್ಗ ಸೆಂಟ್ರಲ್ ಜೈಲ್ಗೆ ಕರೆತಂದಿದ್ದಾರೆ.
ಚಿತ್ರದುರ್ಗದಲ್ಲಿ ಮಹಿಳಾ ಸೆಲ್ ಇಲ್ಲದ ಕಾರಣಕ್ಕಾಗಿ ಆಕೆಯನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹಕ್ಕೆ ಕರೆತಂದಿದ್ದಾರೆ.
ಕೋವಿಡ್ ಬಂದ ನಂತರ ಚಿತ್ರದುರ್ಗ ಜೈಲಿನಲ್ಲಿದ್ದ ಮಹಿಳಾ ಸೆಲ್‌ನ್ನು ರದ್ದುಪಡಿಸಲಾಗಿದೆ.ಹೀಗಾಗಿ ರಶ್ಮಿಯನ್ನು ಶಿವಮೊಗ್ಗದ ಜೈಲಿಗೆ ವರ್ಗಾವಣೆ ಮಾಡಲಾಗಿದೆ
ಶುಕ್ರವಾರ ರಾತ್ರಿ 9.30 ಕ್ಕೆ ರಶ್ಮಿಯನ್ನು ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿದೆ.
ರಶ್ಮಿಯನ್ನು ಕಳೆದ ಗುರುವಾರ ಡಿವೈಎಸ್ಪಿ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿ ಬಳಿಕ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಾಂತ್ವನ ಕೇಂದದ್ರಕ್ಕೆ ಕಳುಹಿಸಲಾಗಿತ್ತು. ನಿನ್ನೆ ಮತ್ತೆ ವಿಚಾರಣೆಗೆ ಕರೆಸಿ ಅಧಿಕೃತವಾಗಿ ಬಂಧನ ಪ್ರಕಟಿಸಲಾಯಿತು.