ಮಾದಾಪುರದಲ್ಲಿ ಮನೆಗಳಿಗೆ ನುಗ್ಗಿದ ನೀರು-ಜನಪ್ರತಿನಿಧಿಗಳ ನಿರ್ಲಕ್ಷ ಧೋರಣೆಗೆ ಗ್ರಾಮಸ್ಥರ ಆಕ್ರೋಶ : ಸ್ಥಳಕ್ಕೆ ಭೇಟಿ ನೀಡಿದ ಬೇಳೂರು


ರಿಪ್ಪನ್‌ಪೇಟೆ;-ಚುನಾವಣೆಯಲ್ಲಿ ಮತ ಕೇಳಲು
ಮಾತ್ರ ಗ್ರಾಮಕ್ಕೆ ಬರುತ್ತಾರೆ ಅದರೆ ಇಂತಹ
ಸಮಸ್ಯೆಗಳು ಉದ್ಭವಿಸಿದರೆ ಯಾವ
ಜನಪ್ರತಿನಿಧಿಗಳು ಇತ್ತ ತಲೆ ಸಹಹಾಕುವುದಿಲ್ಲ
ಇಲ್ಲಿನ ಶಾಸಕರು ಕಳೆದ ನಾಲ್ಕುವರೆ ವರ್ಷದಲ್ಲಿ
ಮಾದಾಪುರಕ್ಕೆ ಭೇಟಿ ನೀಡದೆ ಜನರ ಸಮಸ್ಯೆಗೆ
ಸ್ಪಂದಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆಂದು ಮಾಜಿ
ಶಾಸಕ ಗೋಪಾಲಕೃಷ್ಣ ಬೇಳೂರು ಬಳಿ
ಗ್ರಾಮಸ್ಥರು ತಮ್ಮ ಅಕ್ರೋಶವನ್ನು
ವ್ಯಕ್ತಪಡಿಸಿದರು. 




ಕಳೆದ ಒಂದು ವಾರದಿಂದ ಅಕಾಲಿಕವಾಗಿ ಭಾರಿ ಮಳೆ
ಸುರಿದ ಪರಿಣಾಮದಿಂದಾಗಿ ತುಪ್ಪೂರು ತಟ್ಟೆಕೆರೆ
ಕೋಡಿ ಒಡೆದು ಚರಂಡಿಗಳಲಿಲ್ಲದೆ
ಮಾದಾಪುರದೊಳಗೆ ನೀರು ನುಗ್ಗಿ
ಮನೆಯೊಳಗೆಲ್ಲಾ ನೀರೋ
ನೀರು ಜಮೀನುಗಳಲ್ಲಾ
ಜಲಾವೃತ್ತಗೊಂಡು ಭತ್ತದ ನಾಟಿ
ಕೊಚ್ಚಿಹೋಗಿದ್ದು ರೈತರು ಕಂಗಲಾಗಿದ್ದಾರೆ. 

 ರಿಪ್ಪನ್‌ಪೇಟೆ-ಕೆಂಚನಾಲ-ಅಲುವಳ್ಳಿ-ಕಮದೂರು-
ಮಾದಾಪುರ-ಲಕ್ಕವಳ್ಳಿ-ಕೆರೆಹಿತ್ತಲು-ಗಿಳಾಲಗುಂಡಿ
ಅನಂದಪುರ ಗ್ರಾಮಾಂತರ ಸಾರಿಗೆ ವ್ಯವಸ್ಥೆ
ಇಲ್ಲದೆ ರೈತರು ಶಾಲಾ ಕಾಲೇಜ್ ವಿದ್ಯಾರ್ಥಿಗಳು
ಪಡಬಾರದ ಕಷ್ಟು
ಅನುಭವಿಸುವಂತಾಗಿದೆ.ಅದರೂ ಕ್ಷೇತ್ರದ
ಶಾಸಕರು ಇತ್ತ ಗಮನಹರಿಸದೇ ಇರುವುದು
ರೈತನಾಗರೀಕರ ಅಕ್ರೊಶಕ್ಕೆ ಕಾರಣವಾಗಿದೆ. 


ಗ್ರಾಮೀಣ ಪ್ರದೇಶ ಜನಜೀವನ
ಅಸ್ತವ್ಯಸ್ತಗೊಳ್ಳುವಂತಾಯಿತು.ಮಳೆ ಬಿಟ್ಟರು
ನೀರು ರಸ್ತೆ ಮೇಲೆ ನಿರಂತರವಾಗಿ
ಹರಿಯುತ್ತಿದ್ದು ಕೆಂಚನಾಲ ಸ್ಥಳೀಯಾಡಳಿತ
ತಾತ್ಕಾಲಿಕವಾಗಿ ಜೆಸಿಬಿ ಯಂತ್ರದ ಮೂಲಕ ಚರಂಡಿ
ಸ್ವಚ್ಚಗೊಳಿಸಿ ತುಪ್ಪೂರಿನ ತಟ್ಟೆಕೆರೆ ನೀರು
ಗ್ರಾಮದೊಳಗೆ ನುಗ್ಗದಂತೆ ತಾತ್ಕಾಲಿಕವಾಗಿ
ತುರ್ತು ಪರಿಹಾರ ಕಲ್ಪಿಸಿದ್ದಾರೆ.ಅದರೆ ಇದು
ಮುಂದಿನ ದಿನಗಳಲ್ಲಿಯೂ ಹೀಗೆ ಅದರೆ
ನಮ್ಮಗಳ ಗತಿಏನು ಎಂಬ ಪ್ರಶ್ನೆ
ಕಾಡುವಂತಾಗಿದ್ದು ಇನ್ನಾದರೂ ಕ್ಷೇತ್ರದ
ಶಾಸಕರು ಈ ಅವ್ಯವಸ್ಥೆಗೆ ಶಾಶ್ವತ ಪರಿಹಾರ
ಕಲ್ಪಿಸುವಂತೆ ಮಾಜಿ ಶಾಸಕರ ಮೂಲಕ ಆಗ್ರಹಿಸಿದರು.



ಈ ಸಂಧರ್ಭದಲ್ಲಿ ಕೆಂಚನಾಲ
ಗ್ರಾಮ ಪಂಚಾಯ್ತಿ ಅಧ್ಯಕ್ಷ ಉಬೇದುಲ್ಲಾ
ಷರೀಪ್,ಅರಸಾಳು
ಗ್ರಾ.ಪಂ.ಅದ್ಯಕ್ಷ.ಉಮಾಕರ,ಕಾಂಗ್ರೇಸ್ ಮುಖಂಡರಾದ
ಹೆಚ್.ವಿ.ಈಶ್ವರಪ್ಪಗೌಡ,ಆಸೀಫ಼್ ಭಾಷಾಸಾಬ್ ,ಎ.ಆರ್.ಮಂಜುನಾಥ
ಮಾದಾಪುರ,ಕಾಂತರಾಜ್,ಶಿವು
ವಡಾಹೊಸಳ್ಳಿ,ಸೋಮಶೇಖರ ಅಭಿಷೇಕ್,ಗ್ರಾ.ಪಂ.ಸದಸ್ಯೆ ರಮ್ಯ,

ಕೃಷ,್ಣ,ಮಾದಾಪರ ,ಲೋಕಪ್ಪ,ಉಂಡಗೋಡು ನಾಗಪ್ಪ, ವಿಜಯಣ್ಣ,ಇಮ್ಮಾಂಸಾಬ್,ಖಲೀಲ್ ಷರೀಫ್
ಇನ್ನಿತರ ಕೆಂಚನಾಲ ಗ್ರಾಮಸ್ಥರು ಹಾಜರಿದ್ದರು.

Leave a Reply

Your email address will not be published. Required fields are marked *