ರಿಪ್ಪನ್ಪೇಟೆ : ಇಲ್ಲಿನ ಚಿಕ್ಕಜೇನಿ ಗ್ರಾಮದ ಸರ್ಕಾರಿ
ಪ್ರೌಢಶಾಲೆಯ ಮಳೆ ಬಂದರೇ ಸಾಕು ವಿದ್ಯಾರ್ಥಿಗಳು
ತರಗತಿ ಕೊಠಡಿಯಲ್ಲಿ ಬಣ್ಣ ಬಣ್ಣದ ಛತ್ರಿ ಹಿಡಿದು
ಕುಳಿತುಕೊಳ್ಳುವುದರೊಂದಿಗೆ ಪಾಠ ಪ್ರವಚನ
ಕೇಳುವ ದುಸ್ಥಿತಿ ನಿರ್ಮಾಣವಾಗಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರ ಶಿಕ್ಷಣಕ್ಕಾಗಿ ಕೋಟ್ಯಾಂತರ ಹಣ ವ್ಯಯ ಮಾಡುತ್ತಿದ್ದು ಶಾಲಾ ಕಾಲೇಜ್ಗಳ ಕಟ್ಟಡ ನಿರ್ಮಾಣಕ್ಕೂ ಹೆಚ್ಚು ಅನುದಾನ ನೀಡುತ್ತಿದ್ದರೂ ಕೂಡಾ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಚಿಕ್ಕಜೇನಿ ಸರ್ಕಾರಿ ಪ್ರೌಢಶಾಲೆ ಮಾತ್ರ ಕಣ್ಣಿಗೆ ಕಂಡಿಲ್ಲವೇನೂ ಎಂಬ ಅನುಮಾನ ಕಾಡುವಂತಾಗಿದೆ. 2006 ರಲ್ಲಿ ಸರ್ಕಾರಿ ಸಂಯುಕ್ತ ಪ್ರೌಢಶಾಲೆಯಾಗಿ ಆರಂಭಗೊಂಡ ಚಿಕ್ಕಜೇನಿ ಶಾಲೆ ನಂತರದ ವರ್ಷದಲ್ಲಿ ಸ್ವತಂತ್ರ ಸರ್ಕಾರಿ ಪ್ರೌಢಶಾಲೆಯಾಗಿ 8 ರಿಂದ ಎಸ್.ಎಸ್.ಎಲ್.ಸಿ ವರೆಗೆ 115 ವಿದ್ಯಾರ್ಥಿಗಳಿದ್ದು ಮುಖ್ಯೋಪಾದ್ಯಾಯರು ಸೇರಿದಂತೆ 8 ಜನ ಶಿಕ್ಷಕ ವರ್ಗ ಐದು ಕೊಠಡಿಗಳು ಇದ್ದರೂ ಎಲ್ಲಾ ಕಟ್ಟಡಗಳು ಕಾಮಗಾರಿ ಹಂತದಲ್ಲಿಯೇ ಕಳಪೆ ಗುಣಮಟ್ಟದಿಂದಾಗಿ ಸಂಪೂರ್ಣ ಶಿಥಿಲಾವಸ್ಥೆಯಿಂದಾಗಿ ಮಳೆಗಾಲದಲ್ಲಿ ಮಳೆನೀರು ಕಟ್ಟಡದೊಳಗೆ ಇಳಿಯುವಂತಾಗಿ ವಿದ್ಯಾರ್ಥಿಗಳು ಪಾಠ ಪ್ರವಚನದ ವೇಳೆ ಛತ್ರಿ ಹಿಡಿದುಕೊಂಡು ಜೀವಭಯದಲ್ಲಿ ಪಾಠ ಕೇಳುವಂತಾಗಿದೆ.
ಅಲ್ಲದೆ ಶಿಕ್ಷಕರ
ಕೊಠಡಿಯಲ್ಲಿನ ಸ್ಲಾಬ್ ಪಿಲ್ಲರ್ ಸಂಪೂರ್ಣ ನಾದುರಸ್ತಾಗಿದ್ದು
ಅಗತ್ಯ ದಾಖಲೆಗಳು ನೀರಿನಲ್ಲಿ ಹಾಳಾಗಿ ಹೋಗುತ್ತಿದ್ದು
ಸುರಕ್ಷತವಾಗಿ ಇಡಲು ಶಿಕ್ಷಕವರ್ಗ ಹರಸಹಾಸ
ಪಡುವಂತಾಗಿದೆ.
ಕೊಠಡಿಯಲ್ಲಿನ ಸ್ಲಾಬ್ ಪಿಲ್ಲರ್ ಸಂಪೂರ್ಣ ನಾದುರಸ್ತಾಗಿದ್ದು
ಅಗತ್ಯ ದಾಖಲೆಗಳು ನೀರಿನಲ್ಲಿ ಹಾಳಾಗಿ ಹೋಗುತ್ತಿದ್ದು
ಸುರಕ್ಷತವಾಗಿ ಇಡಲು ಶಿಕ್ಷಕವರ್ಗ ಹರಸಹಾಸ
ಪಡುವಂತಾಗಿದೆ.
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿದ
ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರದಾಟವನ್ನು ಕಂಡು
ಕೇಳಿದಾಗ ಯಾರು ಸಾರ್ ನಮ್ಮ ಕಷ್ಟ ಕೇಳೋರೋ
ಶಾಸಕರು ಇಲ್ಲ ಅಧಿಕಾರಿಗಳು ಬರೋಲ್ಲ ಯಾರ ಹತ್ತಿರ
ಹೇಳಿಕೊಳ್ಳೊದು ನಮ್ಮ ಕಷ್ಟ…! ಎಂದು ತಮ್ಮ
ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ
ಸಂದರ್ಭದಲ್ಲಿ ವಿದ್ಯಾರ್ಥಿಗಳ ಪರದಾಟವನ್ನು ಕಂಡು
ಕೇಳಿದಾಗ ಯಾರು ಸಾರ್ ನಮ್ಮ ಕಷ್ಟ ಕೇಳೋರೋ
ಶಾಸಕರು ಇಲ್ಲ ಅಧಿಕಾರಿಗಳು ಬರೋಲ್ಲ ಯಾರ ಹತ್ತಿರ
ಹೇಳಿಕೊಳ್ಳೊದು ನಮ್ಮ ಕಷ್ಟ…! ಎಂದು ತಮ್ಮ
ಅಸಹಾಯಕತೆಯನ್ನು ವ್ಯಕ್ತಪಡಿಸುತ್ತಾರೆ
ಯಾವುದೇ ಸಂದರ್ಭದಲ್ಲಿ ಅಪಾಯ
ಸಂಭವಿಸುವ ಕಾಲದೂರವಿಲ್ಲ ಅದ್ದರಿಂದಾಗಿ ತಕ್ಷಣ ಈ
ಕಟ್ಟಡದಲ್ಲಿ ತರಗತಿಗಳನ್ನು ನಡೆಸದಂತೆ ಕ್ರಮ ವಹಿಸುವಲ್ಲಿ
ಮುಂದಾಗಬೇಕಾಗಿದೆ.
ಇನ್ನಾದರೂ ರಾಜ್ಯದ ಶಿಕ್ಷಣ ಸಚಿವ ನಾಗೇಶ್ ಮತ್ತು
ಸರ್ಕಾರ ಹಾಗೂ ಕ್ಷೇತ್ರದ ಶಾಸಕ ಹಾಲಪ್ಪ ಹರತಾಳು
ಗಮನಹರಿಸುವರೇ……………..?
ಸರ್ಕಾರ ಹಾಗೂ ಕ್ಷೇತ್ರದ ಶಾಸಕ ಹಾಲಪ್ಪ ಹರತಾಳು
ಗಮನಹರಿಸುವರೇ……………..?