ಪೋಸ್ಟ್ ಮ್ಯಾನ್ ನ್ಯೂಸ್ ಡೆಸ್ಕ್ …………………ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಜೋಗ ಸಮೀಪದಲ್ಲಿ ಕಾರು ಹಾಗೂ ಬಸ್ ನಡುವೆ ಅಪಘಾತ ಸಂಭವಿಸಿ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.
ಚಿಕ್ಕಮಗಳೂರು ನಿಂದ ಕಾರವಾರಕ್ಕೆ ಹೊರಟ ಸರ್ಕಾರಿ ಬಸ್ ಹಾಗೂ ವಡನ್ ಬೈಲ್ ಪದ್ಮಾವತಿ ದೇವಾಲಯದ ಧರ್ಮಧರ್ಶಿ ಹಾಗೂ ಸಹೋದರ ಚಲಿಸುತ್ತಿದ್ದ ಮಾರುತಿ ಓಮ್ನಿ ನಡುವೆ ಅಪಘಾತ ಸಂಭವಿಸಿದೆ.
ಅಪಘಾತದಲ್ಲಿ ದೇವಯ್ಯಾ ಜೈನ್ ಮೃತರಾಗಿದ್ದಾರೆ.ಇವರು ನಿವೃತ್ತ ಕೆಪಿಸಿ ಉದ್ಯೋಗಿಯಾಗಿದ್ದರು.
ಸಹ ಪ್ರಯಾಣಿಕ ರಾಜೇಂದ್ರ ಜಯಂತ್ ಸ್ವಾಮೀಜಿ ರವರ ತಲೆಗೆ ಹೊಡೆತ ಬಿದ್ದಿದ್ದು 2 ಕಾಲುಗಳಿಗೆ ತೀವ್ರ ಹೊಡೆತ ಬಿದ್ದಿರುವ ಮಾಹಿತಿ ತಿಳಿದು ಬಂದಿದೆ.
ಜೋಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.